ಎನ್ನ ಪ್ರೇಮದ ಪರಿಯ

ಎನ್ನ ಪ್ರೇಮದ ಪರಿಯ

ಕವನ

ಹೀಗೆಯೆಂದು ಹೇಳಲಾರೆ

ಹೇಗೆಯೆಂದು ತಿಳಿಯಲಾರೆ

ನನ್ನ ಸನಿಹ ನೀನು ಬಂದೆ

ಎನ್ನ ಹೃದಯ ದೇವತೆ

 

ಒಲವೆ ನೀನು ಧೈರ್ಯವಂತೆ

ನನ್ನ ಸಂಗ ಸೇರಿದಂತೆ

ಮಾತು ಮಾತು ಕಲಿತಳಂತೆ

ಸಾಧನೆಗೆ ಏಣಿಯಂತೆ

 

ನಾನು ಕುಳಿತ ಸಮಯವಾಗ

ಕೈಯ ಹಿಡಿದು ಏಳಿಸುತ

ಧೈರ್ಯ ತುಂಬಿ ಮನದಲೀಗ

ಪ್ರೀತಿಯಿಂದ ತಬ್ಬುತ

 

ನಿನ್ನ ನಡೆಗೆ ಗೆಲುವು ಇರಲು

ಗುರಿಯ ಮುಟ್ಟು ಎಂದಿಗು

ಕೀರ್ತಿಗಳಿಸಿ ಸಾಗುತಿರಲು

ಬಾಳು ಸೌಖ್ಯವೆಂದಿಗು

***

ದುರಂತ

ಇಲ್ಲೊಬ್ಬ 

ಬೇರೆಯವರು

ಪಡೆಯುತ್ತಿದ್ದ

ಕೇಂದ್ರ, ರಾಜ್ಯ 

ಸರಕಾರಗಳ

ಪರಿಷತ್ತು, ಅಕಾಡೆಮಿ 

ಪ್ರಶಸ್ತಿಗಳಿಗೆ

ಅಭಿನಂದನೆಗಳ

ಹೇಳುತ್ತಿದ್ದ

ಖ್ಯಾತ 

ಅಜ್ಞಾತ

ಸಾಹಿತಿಯೊಬ್ಬರು

ಅಜ್ಞಾತರಾಗೇ

ತೀರಿ ಹೋದದ್ದು

ದುರಂತ !

ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್