ಎಮೋಜಿಗಳಿಗೂ ಒಂದು ದಿನ !

ಎಮೋಜಿಗಳಿಗೂ ಒಂದು ದಿನ !

ಅಪ್ಪ, ಅಮ್ಮ, ಸಹೋದರ-ಸಹೋದರಿ, ಅಜ್ಜ-ಅಜ್ಜಿ, ಆಮೆ, ಜೇನುನೊಣ, ನಾಯಿ, ಬೆಕ್ಕು, ಪರಿಸರ, ಸಾಗರ, ಆರೋಗ್ಯ, ಯೋಗ, ವೈದ್ಯ, ನ್ಯಾಯ ಹೀಗೆ ಪ್ರತೀ ದಿನವೂ ಒಂದಲ್ಲಾಒಂದು ವಿಷಯದ ದಿನಾಚರಣೆಯೇ ಆಗಿದೆ. ಇದೇ ಸಾಲಿಗೆ ಸೇರಲಿದೆ ‘ವಿಶ್ವ ಎಮೋಜಿ ದಿನ'. ಸಾಮಾಜಿಕ ಜಾಲತಾಣಗಳು, ಮೊಬೈಲ್ ಗಳು ಜನಪ್ರಿಯವಾದಂತೆ ತಮ್ಮ ಭಾವನೆಗಳನ್ನು ಪುಟ್ಟದಾದ ಚಿತ್ರವೊಂದರಲ್ಲೇ ವ್ಯಕ್ತ ಪಡಿಸಲು ಗೋಲಾಕಾರದ ಕಣ್ಣು, ಮೂಗು, ಬಾಯಿ ಮತ್ತು ಕೆಲವೊಮ್ಮೆ ಕೈಯನ್ನು ಮಾತ್ರ ಹೊಂದಿರುವ ಒಂದು ರೂಪವೇ ಎಮೋಜಿ ಅಥವಾ ಇಮೋಜಿ (Emoji) 

ಜುಲೈ ೧೭, ೨೦೦೨ರಲ್ಲಿ ಆಪಲ್ (Apple) ಸಂಸ್ಥೆ ತನ್ನ ಐಕ್ಯಾಲ್ ಕ್ಯಾಲೆಂಡರ್ ಆಪ್ ನಲ್ಲಿ ಆಪಲ್ ಸಂಸ್ಥೆಯ ವರ್ಣರಂಜಿತ ಲೋಗೋವನ್ನು ಎಮೋಜಿ ರೂಪದಲ್ಲಿ ಪ್ರಕಟಿಸಿತ್ತು. ಇದರ ಸ್ಮರಣಾರ್ಥ ಪ್ರತೀ ವರ್ಷ ಜುಲೈ ೧೭ರಂದು ‘ವಿಶ್ವ ಎಮೋಜಿ ದಿನ' ಎಂದು ಆಚರಣೆ ಮಾಡಲಾಗುತ್ತದೆ. ಇಂದಿನ ಸ್ಮಾರ್ಟ್ ಯುಗದಲ್ಲಿ ಬಹಳಷ್ಟು ಸಂವಹನಗಳು ಎಮೋಜಿ ಬಳಸಿಯೇ ಆಗುತ್ತಿದೆ. ಸಾವಿರಾರು ಬಗೆಯ ಭಾವನೆಗಳನ್ನು ವ್ಯಕ್ತ ಪಡಿಸುವ ಎಮೋಜಿಗಳು ಲಭ್ಯವಿದೆ.

ನಗು, ಅಳು, ಗೆಲುವು, ಸೋಲು, ಬೇಸರ, ಕಣ್ಣೀರು, ಕೋಪ, ಪ್ರೇಮ ಹೀಗೆ ಹಲವಾರು ಬಗೆಯ ಎಮೋಜಿ ಚಿತ್ರಗಳು ಸಿಗುತ್ತವೆ. ಬಹು ಶಬ್ಧಗಳನ್ನು ಬಳಸಿ ಭಾವನೆಗಳನ್ನು ವ್ಯಕ್ತ ಪಡಿಸುವ ಬದಲು ಹಲವಾರು ಮಂದಿ ಈ ಎಮೋಜಿ ಚಿತ್ರಗಳನ್ನೇ ತಮ್ಮ ಸಂವಹನಕ್ಕಾಗಿ ಬಳಸಿಕೊಳ್ಳುತ್ತಾರೆ.

ಕೊನೇ ಸುದ್ದಿ: ಜುಲೈ ೧೭ ಅನ್ನು ‘ಅಂತಾರಾಷ್ಟ್ರೀಯ ನ್ಯಾಯ ದಿನ’ ಎಂದೂ ಆಚರಣೆ ಮಾಡುತ್ತಾರೆ. ನರಮೇಧ, ಯುದ್ಧಾಪರಾಧ ಸೇರಿದಂತೆ ಮಾನವೀಯತೆ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು ಜುಲೈ ೧೭, ೧೯೯೮ರಂದು ಶಾಸನವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಅಂಗೀಕರಿಸಲಾಯಿತು. ಈ ನೆನಪಿಗಾಗಿ ಅಂತಾರಾಷ್ಟ್ರೀಯ ನ್ಯಾಯ ದಿನವನ್ನು ಆಚರಿಸಲಾಗುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ