ಎರಡನೇ ಹಬ್ಬ ಬಕ್ರಿದ್

ಎರಡನೇ ಹಬ್ಬ ಬಕ್ರಿದ್

                                                        ಎರಡನೇ ಹಬ್ಬ ಬಕ್ರಿದ್

 
ಮುಸ್ಲಿಂ ಜನರಿಗೆ ಅಲ್ಲಾಹನು ಕರುಣಿಸಿದ ಹಲವಾರು ತಿಂಗಳುಗಳು ಕಾಣಬಹುದು ರಮಳಾನ್,ಶಹಬಾನ್ ಹೀಗೆ ಹಲವಾರು ತಿಂಗಳುಗಳು.ಅದರಲ್ಲಿ ರಮಳಾನ್ ತಿಂಗಳಲ್ಲಿ ಇರುವ ಉಪಸವನ್ನು ವನ್ನು ಮುಗಿಸಿ ಈ ದುಲ್ ಫಿತರ್ ಹಬ್ಬವನ್ನು ಮುಗಿಸಿ ಇನ್ನು ಬರುವುದು ಈದ್ ಅಳ್‍ಹ ಅಥವಾ (ಬಕ್ರಿದ್) ಇದು ಬರುವುದು ದುಲ್‍ಹಜ್ಜ್ ಎಂಬ ತಿಂಗಳಾಗಿವೆ. ಇದನ್ನು ಆಚರಿಸಲು ಚರಿತ್ರೆಯು ಸಾಕ್ಷಿಯಾಗಿದೆ. ಈ ತಿಂಗಳಲ್ಲಿ ಕಂಡುಬರುವ ಹಜ್ಜ್ ಅಥವಾ ಮಕ್ಕ ಮದೀನ ಎಂಬ ಅಲ್ಲಾಹು ಬಹುಮಾನಿಸಿದ ಪ್ರತ್ಯೇಕವಾದ ಸ್ಥಳವಾಗಿದೆ ಇದು. ಇಲ್ಲಿಗೆ ಯಾತ್ರೆ ಮಾಡುವುದು ಮತ್ತು ಮಕ್ಕವನ್ನು ತ್ವವಾಫ್ ಮಾಡುವುದು, ಅರಫ ಸೇರುವುದು, ಸ್ವಫ ಮರ್ವಾದಲ್ಲಿ ನಡೆಯುವುದು, ಕಲ್ಲು ಎಸೆಯುವುದು, ಝಂಝಂ ನೀರು. ಹೀಗೆ ಸೇರಿದಂತೆ ಹಲವಾರು ಚರಿತ್ರೆಗಳ ಪುಣ್ಯಸ್ಮರಗಳು. ಇದರಲ್ಲಿ ಕಂಡುಬರುವುದು ಅಲ್ಲಾಹು ತನ್ನ ದಾಸರಿಗೆ ಹಲವಾರು ಸ್ಥಳಗಳನ್ನು ಗೌರವಿಸಲು ಆಜ್ಞಾಪಿಸಿದ್ದಾನೆ. ಅದರಿಂದ ನಾವು ಸಹ ಮಕ್ಕವನ್ನು ಮದೀನವನ್ನು ಗೌರವಿಸುತ್ತೇವೆ. ಗೌರವಿಸುವುದರಿಂದ ದಾಸನು ತನ್ನ ವಿಶ್ವಾಸದಬಲವನ್ನು ಹೆಚ್ಚಿಸುತ್ತದೆ ಮತ್ತು ತನ್ನ ಧರ್ಮದಲ್ಲಿ ಧೃಡ ವಿಶ್ವಾಸ ಹೊಂದುತ್ತದೆ. ಬಕ್ರಿದ್ ಆಚರಣೆ ಮತ್ತು ಹಜ್ಜ್ ಇನ್ನಿತರ ಕಾರ್ಯಗಳು ಮತ್ತು ಸತ್ಕರ್ಮಗಳ ಬಗ್ಗೆ ಒಂದು ಚಿಕ್ಕ ವಿವರ ಇಲ್ಲಿದೆ.
ಮಕ್ಕ ಮತ್ತು ಚರಿತ್ರೆ
ಕಅ್ ಬಾ ಶರೀಫ್ ಪವಿತ್ರ ಸ್ಥಳವಾಗಿದೆ. ಲೋಕದಲ್ಲಿ ನಿರ್ಮಿಸಲ್ಪಟ್ಟ ಪ್ರಥಮ(ಆರಾಧನಾಲಯ) ಅಲ್ಲಾಹು ನೀಡಿದ ಗೃಹವಾಗಿದೆ ಇದು ಹಜ್ಜ್ ನಲ್ಲಿ ಇಲ್ಲಿ ತ್ವವಾಫ್ ಮಾಡುವುದು ಖಚಿತವಾದದ್ದು. ಮುಸ್ಲಿಂಜನರು ಐದು ಸಮಯದಲ್ಲಿ ಇರುವ ನಮಾಝ್‍ನನ್ನು ಕಅ್ ಬಾ ಶರೀಫಿಗೆ ಮುಖ ತಿರುಗಿಸಿ ಪ್ರಾರ್ಥನೆ ಮಾಡುವುದು ನಮಗೆ ತಿಳಿದಿದೆ. ಮಕ್ಕವನ್ನು ಅಲ್ಲಾಹನ ದೂತರು(ಮಲಕುಗಳು) ನಿರ್ಮಿಸಿದ್ದರು. ಅವರು ಅಲ್ಲಿಗೆ ಬಂದು ಪ್ರದರ್ಶನ ಮಾಡುತಿದ್ದರು.ಪ್ರವಾದಿ ನೊಹ್ ನಬಿ ಆವರ ಕಾಲದಲ್ಲಿ ಇದು ಪ್ರಳಯದಲ್ಲಿ ನಶಿಸಿಹೋದಾಗ ಅಲ್ಲಾಹನ ನಿರ್ದೇಶನದ ಪ್ರಕಾರ ಇದನ್ನು ಇಬ್ರಾಹಿಂ ನಬಿಮತ್ತು ಇಸ್ಮಾಈಲ್ ನಬಿ ಅವರು ನಿರ್ಮಿಸಿದರು. ಒಟ್ಟು 10 ವಿಭಾಗಗಳು ಕಅ್ ಬಾವನ್ನು ನಿರ್ಮಿಸಿದ್ದರು ಎಂದು ಚರಿತ್ರೆ ಪುರವೆ ನಂತರ ಬಂದಖುರೈಶಿಗಳು ನಿರ್ಮಿಸಿದ್ದರು, ಅಬ್ದುಲ್ಲಾಹಿಬ್ನು ಝುಬೈರ್, ಹಜ್ಜಾಜ್‍ಬ್‍ನು ಯೂಸುಫ್ ನಿರ್ಮಿಸಿದರು. ನಂತರ ಬಂದ ಖಾಲಿದ್ ರಾಜರ ಆಡಳಿತ ಕಾಲದಲ್ಲಿ ಕಅ್ ಬಾ ದ ಬಾಗಿಲಿಗೆ ಅದಕ್ಕೆ ಸ್ವರ್ಣ ಲೇಪನ ಮಾಡಲಾಯಿತು. ಪ್ರತಿ ದುಲ್ಹಜ್ಜ್ ತಿಂಗಳು ಮಕ್ಕವನ್ನು ಪಣ್ಣೀರು ಮತ್ತು ಝಂಝಂ ನೀರಿನಿಂದತೊಳೆಯಲಾಗುತ್ತದೆ. ಅದಕ್ಕೆ ಕಪ್ಪು ಬಣ್ಣದ ಸುಂದರವಾದ ಕಿಲ್ಲೆ (ಚಾದರ) ವನ್ನು ಅಕಲಾಗುತ್ತದೆ. ಕಅ್ ಬಾ ಎಂಬುವುದು ಪ್ರವಿತ್ರ ವಾದ ಸ್ಧಳ ಇಲ್ಲಿ ಆರಾಧನೆಮಾಡುವುದು ಲಕ್ಷಪಟ್ಟುಪುಣ್ಯ ಲಭಿಸುವುದಾಗಿ ಅನೇಕ ಅಧಿಕೃತ ಹದೀಸ್ ಗಳಿಂದಕಾಣಬಹುದು ಇನ್ನೊಂದು ಹದೀಸ್‍ನಲ್ಲಿ ನಬಿ ಆವರು ಹೇಳಿದ್ದರೆ ಅಲ್ಲಾಹನ ಆದೇಶ ದಂತ್ತೆ ಅಂತ್ಯ ದಿನದವರೆಗೊ ಇದು ಪವಿತ್ರ ವಾಗಿಯೇ ಉಳಿಯುವುದು. ಇಲ್ಲಿ ಮೃಗಗಳನ್ನುಬೇಟೆಯಾಡುವುದು ಮತ್ತು ವೃಕ್ಷಾದಿಗಳನ್ನು ಕಡಿಯುವುದು ಸಮ್ಮತಾರ್ಹವಲ್ಲ.

ಚರಿತ್ರೆ ಪುರವೆಯಲ್ಲಿ ಎರಡು ಕಲ್ಲುಗಳು
ಮಕ್ಕದಲ್ಲಿ ಆನೇಕ ಮಹತ್ವ ಸ್ಧಳಗಳು,ಮಸೀದಿಗಳು ಮತ್ತು ದೃಷ್ಠಾಂತಗಳಿವೆ. ಆದರಲ್ಲಿ ಎರಡು ಕಲ್ಲುಗಳು ಪುಣ್ಯವಾದದ್ದು ಹಳವಾರು ಪವಡಗಳನ್ನು ಒಳಗೊಂಡಿದೆ.
1)ಹಜರುಲ್ ಹಸ್ವದ್
ಮಕ್ಕಗೆ ಹಜ್ಜ್ ಹಯಾತ್ರೆಗೆ ತೆರಲುವ ಆಹಲ್ಲಾಹನ ದಸರು ತ್ವವಾಫ್ ಮುಗಿದವೇಳೆ ಇದನ್ನು ಚುಂಬಿಸಬೇಕು. ಆಹಲ್ಲಾಹನು ಸ್ವರ್ಗದಿಂದ ಇಳಿಸಲ್ಪಟ್ಟ ಹಾಗು ಆನೇಕ ಮಹತ್ವ ಗಳಿಂದ ಕೊಡಿದ,ಕಲ್ಲು. ಪ್ರವಾದಿ ನಬಿ ಹೇಳಿದ್ದರು ಇದನ್ನು ಚುಂಬಿಸುವುದರಿಂದ ಅದುಆಲ್ಲಾಹನ ಅತ್ತರ ಅವನಿಗೆ ಶಿಫಾರಸ್ಸು ಮಾಡುವುದು ಮತ್ತು ಇದನ್ನು ಅಪಮಾನಿಸುವಾವನೀಗೆ ಅದು ಕೇಡಗಿ ಸಾಕ್ಷಿ ನಿಲ್ಲುವುದೆಂದ್ದು ಹದೀಸ್‍ನಲ್ಲಿ ವರದಿಯಾಗಿದೆ.
2)ಮಖಾಮು ಇಬ್ರಾಹೀಮ್
ಅಧುನಿಕ ಯುಗವನ್ನು ಮನ್ನಿಸುವ ವೈಙ್ಞನಿಕ ಯುಗವನ್ನು ತಲೆಕೇಲಾಗಿಸುವ ಕಲ್ಲುಇದಾಗಿದೆ. ಕಾರಣ ಮಕ್ಕನಿರ್ಮನದ ವೆಳೆಯಲ್ಲಿ. ಮೇಲೆ ಕಲ್ಲುಗಳನ್ನು ಎತ್ತಳು ಇಬ್ರಾಹೀಂ ನಬಿ ಆವರಿಗೆ ಇದು ಸಹಕರಿಸಿತ್ತು. ಆವರಿಗೆ ಅನುಗುಣವಾಗಿ ಏರುತ್ತಾಳು ಇಳಿಯುತ್ತಳು ಇತ್ತು. ಅಧುನಿಕಯುಗ ಗಿಂತ ಅವತ್ತಿನ ಕಾಲದಲ್ಲಿ ಇತಂಹ ಒಂದು ಲಿಫ್ಟ್ ಸೌಕರ್ಯ ವಿತ್ತು ಎಂಬುದು ಅಚ್ಚರಿ ಏನಂದರೆ ನಬಿ ಆವರ ಎರಡು ಕಾಲುಗಳ ಗುರುತ್ತು ಆ ಕಲ್ಲಿನ ಮೇಲೆ ಅಚ್ಚರಿಯಾಗಿ ನಿಂತಿವೆ ತ್ವವಾಫ್‍ನ ನಂತರವಿರುವ ಸುನ್ನತ್ ನಮಾಝ್‍ನನ್ನು ಈ ಕಲ್ಲಿನಹಿಂದೆ ನಿರ್ವಹಿಸುತ್ತಾರೆ.

ಹಜ್ಜ್ ನ ಆ ಚರಿತ್ರೆ.
ಹಜ್ಜ್ ಎಂಬುವುದು ಇಸ್ಲಾಂಮಿನ ಐದು ಸ್ತಂಭಗಳಲ್ಲಿ ಒಂದಗಿದ್ದು ಇದನ್ನು ಮಾಡಬೇಕು ಎಂದು ಖುರ್‍ಆನ್ ಹೇಳಿದ್ದು ನೋಡಬಹುದು. ಪ್ರವಾದ ಆವರ ಆನೇಕ ಹದೀಸ್ ಗಳಲ್ಲಿ ಇದನ್ನು ಉಲ್ಲೇಖಿಸಿದ್ದರೆ. ಪ್ರವಾಧಿ ಆವರು ಹೇಳುತ್ತಾರೆ “ಒಬ್ಬನಿಗೆ ಕಅ್ ಬಾ ಲಯಕ್ಕೆ ತಲುಪಲು ಆಗತ್ಯವಾದ ವಾಹನ,ಆಹಾರ, ಸವiಗ್ರಿಗಳು ಮುಂತಾಹದ ಎಲ್ಲ ಸೌಕರ್ಯಗಳು ಲಭ್ಯ ವಿದ್ದು ಹಜ್ಜ್ ನಿರ್ವಹಿಸದ್ದಿದ್ದರೆ ಆತ ಜೂದನೋ,ಕ್ರೈಸ್ತನೋ ಆಗಿ ಮರಣ ಹೊಂದುವುದಕ್ಕೆ
ಯಾವುದೇ ರೀತಿಯ ಅಡೆತಡಗಳು ಉಂಟಾಗಲಾರದು.(ತುರ್ ಮುಧ್ಸಿ) ಹಜ್ಜ್ ಎಂದರೆ ಹಾಜರ(ರ)ಮತ್ತು ಇಸ್ಮಾಯಿಲ್ ನಬಿಯವರನ್ನು ಸ್ಮಾರನೆ ಇವರಿಬ್ಬರನ್ನು ಇಬ್ರಹೀಂ ನಬಿ ಆವರು ಆಹಲ್ಲಾನ ಆದೇಶದ ಪ್ರಕರ ಅವರನ್ನು ಸಫ ಮರ್‍ವ ಎಂಬ ಪ್ರರ್ವತದ ಕೆಳಗೆ ಬಿಟ್ಟರು. ಆವರ ಕೈ ಯಲ್ಲಿ ಖರ್ಜುರ ಮತ್ತು ನೀರು ಸ್ವಲ್ಪದಿನಗಳ ಕಲಾದವರೆಗೆ ಮಾತ್ರ ಉಳಿಯಿತ್ತು. ನೀರಿಗಾಗಿ ನಬಿಯಾವರು ಅತ್ತಗ ಹಾಜರ ಬಿಬಿ ಆವರು ಎರಡು ಪರ್ವತಗಳಿಗೆ ಎಡಬಿಡದೆ ಓಡಿದ್ದರು. ಬಿಬಿ ಆವರು ಬಂದು ನೋಡಿದ್ದಗ ಮಗುವಿನ ಎಡಕಾಲಬಳಿ ನೀರು ಚ್ಚಿಮ್ಮುತಿತ್ತು ನೀರಿನ ಪ್ರವಹ ಬಹಳವೇಗವಾಗಿತ್ತು ಬಿಬಿ ಆವರು ನೀರನ್ನು ನೋಡಿ ಝಂ ಝಂ ಎಂದುಹೇಳಿದ್ದರು. ಆವತ್ತಿನಿಂದ ನೀರಿನ ಹೇಸರು ಝಂ ಝಂ ಆಗಿದೆ. ನೀರನ್ನು ಹಜ್ಜ್ ಯತ್ರೆಯನ್ನು ಮುಗಿಸಿಬರುವ ದಾಸರು ಇದನ್ನು ತರುವುದು ನಮಿಗೆ ಕಾಣಬಹುದು ಇದು ಎಲ್ಲ ನೀರಿಗಿಂತ ಪ್ರಮುಖವಾದ ನೀರು ಮತ್ತು ರೋಖ ಶಮನಕ್ಕೆ ಕಾರಣವಾದ ನೀರು ಇದರಬಗೆ ವಿಙ್ಞನಿಗಳು ಅದ್ಯಯ ನಡೆಸಿದೆ. ಈ ಬಾವಿಯಿಂದ 30 ಮೀಟರ್ ಆಳಹಾಗು 11.8 ಮೀಟರ್ ಅಗಲ. ಈ ಬಾವಿಇಂದ ಸೆಕೆಂಡಿಗೆ 8000ಸಾವಿರ ಲೀಟರ್ ನೀರು ಹಾಗೂ ಒಂದು ಗಂಟೆಗೆ 28800000 ನೀರನ್ನು ಮೇಲಕ್ಕೆತ್ತಲಾಗುತ್ತದೆ ಇದು ಅದ್ಭುತವೆ ಸರಿ.

ಇಬ್ರಹೀಂ ನಬಿ ಆವರ ಚರಿತ್ರೆ
ಇಬ್ರಹೀಂ ನಬಿ ಆವರು ಮಗು ವನ್ನು ಅಲ್ಲಿ ಬಿಟ್ಟುಬರುವಾಗ ಮಗು ಚಿಕ್ಕವನಾಗಿದ್ದ ನಬಿಆವರು ಒಂದು ವರ್ಷಕ್ಕೆ ಒಮ್ಮೆಯಾದರು ಆವರು ಫಲಸ್ತೀನ್ ನಿಂದ ಅಲ್ಲಿಗೆ ಮರಳುತ್ತಿದ್ದರು ಹಿಗಿರುವಾಗ ಆಹಲ್ಲಾಹನು ನಬಿ ಆವರಿಗೆ ಒಂದು ಕನಸನ್ನು ಬಿತ್ತರು ಕನಸಿನಲ್ಲಿ ತನ್ನ ಮಗುವನ್ನು ಬಲಿನೀಡಬೇಕು ನಬಿ ಆವರು ಅಲ್ಲಿಗೆ ತೆರಲಿದ್ದಾಗ ಮಗುವಿಗೆ ಪ್ರಯ ವೇರಿತ್ತು ಮಗುವನ್ನು ಕರೆದು ನಬಿಯಾವರು ಮಿನದ ಕೇಳಭಾಗಕ್ಕೆ ತೆರಳುತ್ತಾರೆ. ಈ ಸಂಧರ್ಬದಲ್ಲಿ ಯಾಗಿದೆ ಶೈತೌನ್ ಆವರದಾರಿಯನ್ನು ತ್ತಪ್ಪಿಸಲು ಬರುತ್ತನೆ ಇದರ ಸ್ಮರಕ ವಾಗಿನಾವು ಜಮ್ರಾಗಳಿಗೆ ಕಲ್ಲೆಸೆಯುವುದು. ಮಿನದ ಕೆಲಭಾಗಕ್ಕೆ ತಲುಪಿದ ನಬಿಯಾವರು ಮಗನ ಬಳಿವಿಷಯವನ್ನು ಮುಂದಿಡುತ್ತಾರೆ ಮಗಹೇಳುತ್ತಾನೆ ಆಹಲ್ಲಾಹನ ಅಙ್ಙೆಯನ್ನುನಾವುಪಲಿಸ ಬೇಕು ಎಂದು ಹೇಳುತ್ತಾರೆ. ಮಗನು ತನನ್ನು ಬಳಿನೀಡುವ ಮೊದಲು ನಾಲ್ಕ ನಿಂಭದನೆ ಅಪ್ಪನಾಮುಂದುಡುತ್ತಾರೆ.ಅವುಗಳಂದರೆ:-

(1)ನಿವು ನನ್ನನ್ನು ಬಲಿನೀಡಲು ಕತ್ತನು ಮಗಚಿಮಳಗಿಸ ಬೇಕು ಕಾರಣ ಕತ್ತಿಯನ್ನು ನನ್ನಬಳಿ ಬರುವಾಗ ನಿಮ್ಮ ಹೃದಯ ಚಾಚಬಹುದು.
(2)ನಿವು ನನ್ನ ಕೈ ಮತ್ತು ಕಲುಗಳನ್ನು ಕಟ್ಟಬೇಕು ಕಾರಣ ಬಲಿನೀಡಿದ ಬಳಿಕ ನಾನು ಒದ್ದವುಡುವುದಕ್ಕೆ.
(3)ನನ್ನ ವಸ್ತ್ರ ವನ್ನು ನಿವು ಕಳಚಬೇಕು ನನ್ನ ವಸ್ತ್ರವನ್ನು ಕಂಡರೆ ಹಾಜರಬಿಬಿ ಆವರು ದುಖಃ ಬರುತ್ತದೆ.
(4)ಕತ್ತನ್ನು ಕುಯುವಾಗ ಬೇಗನೆ ಕುಯುಬೇಕು ಕಾರಣ ನನ್ನ ಜೀವ ಬೇಗನೆ ಹೂರಡಬೇಕು ಮತ್ತು ಹಜಾರಬಿಬಿ ಆವರಿಗೆ ಸಾಲಂ ಹೇಳಬೇಕು. ಮಗನನ್ನು ಕತ್ತರಿಸಲು ತೆರಲುವಾಗ ಆಕಾಶದಿಂದ ಬಂದು ಶಬ್ದ ಅದುಆಹಲ್ಲಾಹನುದು ಆಗಿತ್ತು ನಿವು ಕನಸನ್ನು ನಿರವೇರಿಸಿದ್ದಿರಿ ಎಂದುಹೇಳಿ ಸ್ವರ್ಗದಿಂದ ಒಂದು ಆಡುನ್ನು ಭುಮಿಗೆ ಇಲಿಸಲಾಗಿತ್ತು ಇದನ್ನು ಧ್ಸಬಹ್ ಮಾಡಿ ಜನರಿಗೆ ನೀಡಿರಿ ನಬಿಯವರು ಕಲ್ಪನೆಯನ್ನು ಅನುಸರಿಸಿದ್ದರು ಇದರಸ್ಮರಕವಾಗಿ ನಾವು ಬಕ್ರಿದ್ ಕೊನಯದಿನ ಆಡುಗಳನ್ನು ಬಲಿನೀಡುವುದು.
ಹಜ್ಜ್ ನ ಮಹತ್ವ ಮತ್ತು ನಿಂಬಧನೆಗಳು
ಹ ಎಂಬ ಕರ್ಮಕ್ಕೆ ಹಳವಾರು ಮಹತ್ವವಿಧೆ ಖುರ್‍ಆನ್ ಮತ್ತು ಹದೀಸ್‍ಗಳು ಇದಕ್ಕೆ ಸಾಕ್ಷಿಯಾಗಿದೆ.ಹಜ್ಜ್ ನಿರ್ವಹಿಸುವಾತ ತನ್ನ ಕುಟುಂಬದ ನಾನೂರು ಜನರಿಗಾಗಿ ಶಿಫಾರಸ್ಸು ಮಾಡಿದರೂ ಅದು ಸ್ವೀಕೃತವಾಗುವುದು (ಬಝ್ಝಾರ್,ಹಾಫಿಳ್ ಮುಂದ್ಸಿರ್). ಹಜ್ಜ್ ಕರ್ಮವು ಕಳೆದ ಜೀವನದ ಸರ್ವ ಪಾಪಕರ್ಮಗಳನ್ನು ನಾಶಪಡಿಸುತ್ತದೆ. ಇಸ್ಲಾಂಮಿನ ಇತರ ಆರಾಧಾನ ಕರ್ಮಗಳನ್ನು ಅತ್ಯಂತ ತ್ರಾಸದಾಯಕಾವಾದ ಕರ್ಮವಾಗಿದೆ ಹಜ್ಜ್. ನಾಮಾಝಿನಲ್ಲಿ ವ್ಯಯಮ,ದೈಹಿಕಶ್ರಮ ಮತ್ತು ಏಕಾಗ್ರತೆ ವ್ರತ ಮತ್ತು ಝಕಾತ್ ನಲ್ಲಿ ದೈಹಿಕಶ್ರಮ ಮತ್ತು ಏಕಾಗ್ರತೆ. ಆದರೆ ಎಲ್ಲ ಸೇರಿದ ಆರಾಧನೆಯಾಗಿದೆ ಹಜ್ಜ್ ಪ್ರವಾದಿ ಆವರು ಹೇಳಿದ್ದರು ಸ್ವೀಕಾರಾರ್ಹ ಹಜ್ಜ್ ಕರ್ಮಕ್ಕೆ ಸಿಗುವ ಪ್ರತಿಫಲ ಸ್ವರ್ಗವಾಗಿದೆ(ಬುಖಾರಿ, ಮುಸ್ಲಿಂ). ಇಸ್ಲಾಂ ಇತರೆ ನಾಲ್ಕುಕರ್ಮಗಳನ್ನು ಪೂರೈಸಿ ಅವಕಾಶ ಇದಲ್ಲಿ ಹಜ್ಜ್ ಮಾಡಿಲ್ಲ ವಾದರೆ ಆವನ ಇಸ್ಲಾಂ ಪೂರ್ಣಗೊಡಿಂಲ್ಲ ವೆಂದು ಪ್ರವಾದಿ ಆವರು ಎಚ್ಚರಿಕೆ ಯಾಗಿಹೇಳಿದ್ದು ನೋಡಬಹುದು.
ಹಜ್ಜ್ ನ್ನು ನಿರ್ವಹಿಸಲು 5 ನಿಂಭದನೆಗಳು
1.ಮುಸ್ಲಿಂ ಆಗಿರಬೇಕು
2.ಬುದ್ಧಿ ಯುಳ್ಳವನಾಗಿರಬೇಕು
3.ಸ್ವತಂತ್ರ ನಾಗಿರ ಬೇಕು
4.ಪ್ರಯ ಪೂರ್ತಿಯಾದ ಯಾಗಿರಬೇಕು
5.ಹಜ್ಜ್ ಪೂರ್ಣಗೊಳ್ಳಿಸುವ ವಿಷಯದಲ್ಲಿ ಸಂಪೂರ್ಣಸಮರ್ಥನಾಗಿರ ಬೇಕು.
ಸ್ತೀಯರಿಗೆ ಹಜ್ಜ್ ಬಯಕೆ
ಆಯಿಷಾ ಬೀವಿ(ರ) ಪ್ರವಾದಿ ಅವರನ್ನು ಕೇಳಿದರು : ಸ್ತ್ರೀಯರಿಗೆ ಜಿಹಾದ್‍ನ ಹೊಣೆಗಾರಿಕೆಯಿದೆಯೇ? ಆಗ ಪ್ರವಾದಿವರ್ಯರು ಹೇಳಿದರು.ಹೋರಾಟವಿಲ್ಲದವ ಹಜ್ಜ್ ಮತ್ತು ಉಮ್ರಾಗಳು ಅವರಜಿಹಾದ್‍ಗಳಾಗಿದೆ. ಅಂದರೆ ಸ್ತ್ರೀಯರಿಗೆ ಹಜ್ಜ್ ಕರ್ಮವು ಜಿಹಾದಿಗೆ (ಧಾರ್ಮಿಕ ಹೋರಾಟಕ್ಕೆ ಸಮಾನರೆಂದು) ಹೇಳಿದ್ದಾರೆ. ಸ್ತ್ರೀಯರಿಗೆ ತಮ್ಮೊಂದಿಗೆ ಮೈತ್ರಿಗೈಯ್ಯಲು, ಪತಿಯೋ, ವಿವಾಹ ಸಂಬಂಧ ನಿಷಿದ್ಧವಾದವರೋ ಅಥವಾ ನಂಬಿಗಸ್ತರಾದ ವ್ಯಕ್ತಿಗಳು ಜೊತೆಗಿದ್ದರೆ ಮಾತ್ರವೇ ಹಜ್ಜ್ ಕಡ್ಡಾಯವಾಗುವುದು. ಅಲ್ಲದಿದ್ದರೆ ಅವಳಿಗೆ ದೃಢ ನಿಶ್ಚಯವಿದೆ. ತನ್ನ ಶರೀರಕ್ಕೆ ಅಪಾಯವಿಲ್ಲೆಂದು ಮತ್ತು ಬೇರೊಬ್ಬಳು ಸ್ತ್ರೀಯ ಜೊತೆ ಅವಳಿಗೆ ಹಜ್ಜ್ ಗೆ ತೆರಳಬಹುದು.

ಹಜ್ಜ್ ನ ಫರ್‍ಳ್‍ಗಳು ಮತ್ತು ವಾಜಿಬ್‍ಗಳು
ವಾಜಿಬ್‍ಗಳು ಫರ್‍ಳ್‍ಗಳು
1. ಇಹ್‍ರಾಂ ಕಟ್ಟುವುದು ಇಹ್‍ರಾಂ ಮೀಕಾತ್ ದಾಟುವ ಮುನ್ನವಾಗಿರಬೇಕು
2. ಅರಫಾದಲ್ಲಿ ತಂಗುವುದ ಜಮ್ರಾಗಳಿಗೆ ಕಲ್ಲೆಸೆಯುವುದು.
3. ಇಫಾರತ್‍ನ ತ್ವವಾಫ್ ಮಾಡುವುದ ಅಯ್ಯಾಮುತ್ತಶ್‍ರೀಕ್‍ನ ದಿನಗಳಲ್ಲಿ ಮಿನಾದಲ್ಲಿ ರಾತ್ರಿತಂಗುವುದು.
4. ಸಅಯ್ ಮಾಡುವುದ ಮುಝ್ದಲ್ಲಿಫಾದಲ್ಲಿ ರಾತ್ರಿ ತಂಗುವುದು.
5. ಕೂದಲು ನಿವಾರಣೆ ವಿದಾಅನ ತ್ವವಾಫ್ ಮಾಡುವುದು.

ವಾಜಿಬ್‍ಗಳನ್ನು ಬಿಟ್ಟರೆ ಹಜ್ಜ್ ಪೂರ್ತಿಯಾಗಲಾರದು ಮತ್ತು ಹಜ್ಜ್ ಸಿಂಧುವಾಗುವುದಿಲ್ಲ. ಉಪೇಕ್ಷಿಸುವುದು ಪಾಪವೂ ಆಗಿದೆ. ಇದನ್ನು ಬಿಟ್ಟರೆ ಫಿದಿಯ ನೀಡಬೇಕು. ಇದನ್ನು ಮಾಡುವುದು ಖಚಿತವಾಗಿದೆ.

ಹಜ್ಜ್ ಕರ್ಮಗಳು ಒಂದು ಚಿಕ್ಕರೋಪದಲ್ಲಿ
ದುಲ್‍ಹಜ್ಜ್ 8:- ಹಜ್ಜ್ಗೆ ಇಹ್ರಾಮ್ ಕಟ್ಟಬೇಕು. ಅಂದು ಮಿನಾಕ್ಕೆ ಹೊರಡುವುದು ಮತ್ತು ಹಗಲು ರಾತ್ರಿ ಅಲ್ಲಿ ತಂಗುವುದು ಪ್ರರ್ಥಾನೆಯಲ್ಲಿ ಮಗ್ನರಾಗ
ಬೇಕು ಸಾಧ್ಯ ವಾದರೆ ಮಸ್ಜಿದುಲ್ ಖೈಫಗೆ ಹೋಗಿ ನಮಾಝ್ ಮಾಡಬೇಕು
ದುಲ್‍ಹಜ್ಜ್9:- ಬೆಳಗೆ ಅರಫಾಕ್ಕೆ ಹೊರಡಬೇಕು ಮಧ್ಯಾಹ್ನವಾಗುವಗ ಅಲ್ಲಗೆ ಪ್ರವೆಶ ಪಡೆಯುದು ಅಲ್ಲಿ ಆರಾಥನೆಯಲ್ಲಿ ಇರಬೇಕುಒಂದು ನಿಮಿಷವು ನಷ್ಟವಾಗದೆ ಅಲ್ಲಿ ಇರುವುದು ಮತ್ತು ರಾತ್ರಿವೇಳಯಲ್ಲಿ ಅರಫಾವನ್ನು ಬಿಟ್ಟು ಮುಝ್ದಲಿಫಾಕ್ಕೆ ಹೊರಡಬೇಕು
ದುಲ್‍ಹಜ್ಜ್9:- (ರಾತ್ರಿ)ಮುಝ್ದಲಿಫಾದಲ್ಲಿ ತಂಗಬೇಕು ರಾತ್ರಿಯ ನಮಾಝ್‍ನನ್ನು ಅಲ್ಲಿ ನಿರ್ವಹಿಸಬೇಕು.
ಎಸೆಯುವಕಲ್ಲು ಗಳನ್ನು ಶೇಖರಿಸ ಬೇಕು.
ದುಲ್‍ಹಜ್ಜ್10:- ಪ್ರಭಾತದೊಂದಿಗೆ ಜಮ್ರಕ್ಕೆತುಲ್ ಅಖಬಕ್ಕೆ ಕಲ್ಲೆಸಯುವುದು ಮತ್ತು ಮಕ್ಕಾಗೆ ಹೋಗಿ
ಹಜ್ಜ್‍ನ ತ್ವವಾಫ್ ಮುಂಚಿತವಾಗಿ ಸಅ ಮಾಡುವುದು. ಮಿನಾಕ್ಕೆ ಮರಳಿ ರಾತ್ರಿಯಲ್ಲಿ ತಂಗಬೇಕು
ದುಲ್‍ಹಜ್ಜ್11:- ಮಧ್ಯಾಹ್ನವಾಗುವಗ ಜಮ್ರಕ್ಕೆತುಲ್ ಅಖಬಕ್ಕೆ ಕಲ್ಲೆಸಯುವುದು ಮತ್ತು ಮಿನಾದಲ್ಲಿತಂಗುವುದು.
ದುಲ್‍ಹಜ್ಜ್12:- ಮಧ್ಯಾಹ್ನವಾಗುವಗ ಜಮ್ರಕ್ಕೆತುಲ್ ಅಖಬಕ್ಕೆ ಕಲ್ಲೆಸಯುವುದು ಮತ್ತು ಮಿನಾದಲ್ಲಿ
ತಂಗುವುದು.(12ರಂದು ಮಿನಾದಿಂದ ನಿರ್ಗಮಿಸಬಹುದು)
ದುಲ್‍ಹಜ್ಜ್13:- ಮಧ್ಯಾಹ್ನವಾಗುವಗ ಜಮ್ರಕ್ಕೆತುಲ್ ಅಖಬಕ್ಕೆ ಕಲ್ಲೆಸಯುವುದು ಮತ್ತು ಮಿನಾದಲ್ಲಿ ತಂಗುವುದು ಮತ್ತು ಮಕ್ಕದಿಂದ
ಹೊರಡುವಾಗ ವಿದಾಅ ನ ತ್ವವಾಫ್ ಮಾಡಬೇಕು.
ದುಲ್ ಹಜ್ಜ್ 9ರಂದು ವೃತ ಹೇಗೆ?
ಹಾಜಿ(ಹಜ್ಜ್ ನಿರ್ವಹಿಸುವ) ವ್ಯಕ್ತಿಯು ಅರಫಾದಲ್ಲಿ ತಂಗುವನು ಆಗ ಊರಿನಲ್ಲಿ ಇರುವ ನಾವು ವೃತವನ್ನು ಕೈಗೂಳ್ಳಬೇಕು ಇದುಕಾಲತಂರ ವಾಗಿರೂಢಿಯಲ್ಲಿ ಇರುವ ಪಥತ್ತಿ. ಇದರಿಂದ ಬಹಳಉಪಯೋಗ ಮತ್ತು ಅನುಕುಲಗಳು ಇದರಲ್ಲಿ ಕಣಬಹುದು.
ಬಕ್ರಿದ್ ದೀನದಲ್ಲಿ
ದುಲ್‍ಹಜ್ಜ್ 10 ಅಂದರೆ ಬಕ್ರಿದ್ ದಿನವಾಗಿದೆ ಅಂದು ಹಾಜಿ ಮತ್ತು ನಮಿಗೆ ಸುದಿನದದಿನ ವಾಗಿದೆ. ಬಕ್ರಿದ್ ದಿನದಂದು ಹಾಜಿಆವರು ನಿರ್ವಹಿಸಬೇಕಾದ 4 ಕಾರ್ಯಗಳು ಇಲ್ಲಿದೆ.
1. ಜಮ್ರಕ್ಕೆತುಲ್ ಅಖಬಕ್ಕೆ ಕಲ್ಲೆಸಯುವುದು.
2.ಧ್ಸಬಹ್ ಮಾಡುವುದು.
3.ಕೇಶ ಮುಂಡನೆ ಮಾಡುವುದು.
4.ಇಫಳತ್ತಿನ ತ್ವವಾಫ್ ಮಾಡುವುದು.
ಈದ್ ನಮಾಝ್ ಮತ್ತು ಧ್ಸಬಹ್(ಬಳಿ ನೀಡುವುದು)
ಧ್ಸಬಹ್ ಮಾಡುವುದು ಹಾಜಿಯರಿಗೆ ಕಡ್ಡಾಯವಿಲ್ಲ. ಆದ್ದರಿಂದ ಊರಿನಲ್ಲಿ ಸಾಧ್ಯವಿದ್ದರೆ ದ್ಸಬಹ್ ಮಾಡಬೇಕು. ಆಡು,ದನ,ಒಂಟೆ ಇವುಗಳಿಂದ
ಯಾವುದಾದರು ಒಂದನ್ನು ದ್ಸಬಹ್ ಮಾಡಬೇಕು. 7 ಜನ ಸೇರಿ ಒಂದು ದನ ಅಥವ ಒಂಟ್ಟೆ ಯನ್ನು ದ್ಸಬಹ್ ಮಾಡಬಹುದು. ಹರಕ್ಕೆ ಹೂತ್ತಮೃಗವಾದರೆ ನಮಿಗೆ ಭಕ್ಷಿಸಲು ಅಧಿಕರವಿಲ್ಲ ಹೊರತ್ತು ಪೊರ್ಣವಾಗಿಧಾನ ಮಾಡಬೆಕು.
ಈದ್ ನಮಾಝ್ ದಿನ ದಲ್ಲಿ
ರಮಾಳಾನ್ ಈದ್ ನಮಾಝ್‍ನ್ನು ಹೆಗೆನಿರ್ವಹಿಸಿದ್ದರೆ ಬಕ್ರಿದ್ ಈದ್‍ನಮಾಝ್ ವೆತ್ಯಸವೇನು ಇಲ್ಲ ಸ್ತ್ರಿಯರಿಗೆ ಅಷ್ಟೆ ಎಲ್ಲರು ಸೆರಿಗುಂಪಗಿ
ನಿರ್ವಹಿಸಬಹುದು. ಈದ್ ನಮಾಝ್‍ಗೆ ಬರುವಮುನ್ನ ಆಹಾರವನ್ನು ಸೇವಿಸದೆ ಬರಬೇಕು ಮತ್ತು ಬರುವುದು ಒಂದುದಾರಿಯಲ್ಲಿಯಾದರೆ ಹೊರಡುವು ಇನ್ನುಂದು ದಾರಿಯಲ್ಲಿ ಯಾಗಬೇಕು. ಸುಗಂಧ ದ್ರವ್ಯಗಳನ್ನು ಅಚ್ಚುವುದು ಮತ್ತು ನವವಸ್ತ್ರಧರಿಸುವುದು ಒಳ್ಳಯದು. ಪವಿತ್ರ ಹಜ್ಜ್ ಮತ್ತು ಉಮ್ರವನ್ನು ಹಾಗು ಪ್ರವಾದಿ ಆವರ ರೌಳವನ್ನು ಹಲುಬಾರಿ ದರ್ಶಿಸಲು ಆಲ್ಲಾಹನು ನಮಗೆಲ್ಲರಿಗು ಅನುಗ್ರಹಿಸಲಿ ನಾಳೆ ನಾವು ಸಜ್ಜನರ ಸಾಲಿನಲ್ಲಿ ಸ್ವರ್ಗವನ್ನು ಪ್ರವೆಸಿಸಲು ಆವನು ಅನುಗ್ರಹಿಸಲಿ. (ಆಮೀನ್)

ಹೆಚ್ಚಿನ ಮಾಹಿತಿ ಮತ್ತು ಹಜ್ಜ್‍ನಬಗ್ಗೆ ಯಾವುದಾದರುಶಂಸಯವಿದ್ದಲ್ಲಿ ಬರೆದ್ದ ಲೇಖನನ್ನು ಬೇಡಿನೀಡಿ.
ಸಕೀರ್ ಅಹ್ಮದ್.ಬಿ
ಮರ್ಕಿನ್ಸ್‍ಬೆಂಗಳೊರು(ಹಲಸೂರು)
9036428919

 

Comments

Submitted by sakeer Sat, 08/18/2018 - 15:26

ಹಜ್ಜ್ ನಾ ಚರಿತ್ರೆ ಮತ್ತು ಮಹತ್ವ ಪ್ರವಾದಿ ನಬಿ ಆವರು ಹೇಳಿದ ಮಾತು ಹಜ್ಜ್ ನ ಬಗೆ ಮಾಹಿತಿಇಲ್ಲಿದೆ