ಎರಡು ಕವನಗಳು

ಎರಡು ಕವನಗಳು

ಕವನ

ಮೌನವಿಲ್ಲ

ಮೌನವಿಲ್ಲ

ಕಡಲೇಯೆಲ್ಲಾ

ನನ್ನ ಜೀವ ಪಯಣದಿ

ಹುಟ್ಟಿದಾಗ

ಸೋಲೆ ಇರಲು

ಬಾಳ ಬುತ್ತಿ ಜೊತೆಯಲಿ

 

ಕನಸು ಕಂಡ

ಇರುಳು ಎಷ್ಟೊ

ನನಸು ಇರದೆ ಸೋತೆನು

ಅಲ್ಲೆ ಗದ್ದೆ 

ಬದುವಿನಲ್ಲಿ

ಕುಳಿತ ನೆನಪ ಕಂಡೆನು

 

ಹುಟ್ಟು ಸಾವ

ನೋಡುತ್ತಿದ್ದೆ

ಪಯಣ ಜೊತೆಗೆ ಸಾಗುತ

ಎಲ್ಲೊ ಹೋಗಿ

ಕಲಿತ ನಾನು

ದೇವನೊಡನೆ ಬದುಕುತ

 

ಸನಿಹ ಇದ್ದ

ಬಂಧುಗಳಲಿ

ಪ್ರೀತಿಯೊರತೆ ಕಾಣದೆ

ಕಂಡರದಕೆ

ಬೇರೆ ಭಾಷ್ಯ

ಬರೆಯುತಿಹರು ತಿಳಿಯದೆ

 

ಹಲವು ಜನರ

ನೋವ ನುಡಿಯು

ಹೃದಯ ಕೋಶ ಒಡೆಯುತ

ಮನಸ್ಸೊ ಇಚ್ಛೆ

ತೆಗಳಿ ಹೋಗೆ

ಇರದ ತಪ್ಪು ಸಮ್ಮತ

 

ಸ್ನೇಹದುಡುಗೆ

ನೀಡಿ ಹೋದ

ನನ್ನ ಜೀವ ಗೆಳೆಯರು

ಅವರ ಮನದ

ತನುವಿನೊಳಗೆ

ಮಧುರ ಭಾವ ಕ್ಷಣಗಳು

 

ಚಿಗುರ ಎಲೆಯ

ಸನಿಹ ನಿಂತು

ಕಹಿಯನೆಲ್ಲ ಉಣ್ಣುತ

ಸಂಜೆ ಬರಲು

ನನಸ ಪಯಣ

ಬದುಕ ಹಾದಿ ತುಳಿಯುತ

***

ಎನಗೆ ಬಲವೆ

ನೀನು ಎನದೆ

ಬಾಳು ಇಹುದೆ

ನಿನ್ನ ಒಲವೆ ಎನಗೆ ಬಲವೆ

ಜೀವ ಭಾವ

ಪ್ರೀತಿ ಪ್ರಣಯ

ಸೇರಿ ಇರಲು ಎನಗೆ ಬಲವೆ

 

ಕನಸು ಇಂದು

ನನಸ ಕೊಡಲು

ಮಗುಳು ನಗೆಯೆ ಎನಗೆ ಬಲವೆ

ಸನಿಹ ಕುಳಿತು

ಲಲ್ಲೆ ಹೊಡೆದು

ಸವಿಯ ನೀಡೆ ಎನಗೆ ಬಲವೆ

 

ಹೀಗೆ ಮಧುವ

ಹರಿಸಿ ದಿನವು

ಮೊಗವ ತೋರೆ ಎನಗೆ ಬಲವೆ

ಸೆಡವು ಸೋತು

ನಡೆದ ಗಳಿಗೆ

ಮಡಿಲ ಮಗುವೆ ಎನಗೆ ಬಲವೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್