ಎರಡು ಕವನ - ನಲ್ಲೆಯ ನಾಚಿಕೆ ಮತ್ತು ನಗು

ಎರಡು ಕವನ - ನಲ್ಲೆಯ ನಾಚಿಕೆ ಮತ್ತು ನಗು

ಬರಹ

ನಾಚಿಕೆ

ನಾಚಿ ನೀರಾದಳು ನಾರಿ,
ಎನಿತು ಹೇಳಲಿ ನಾಚಿದ ಆ ಪರಿ.

ಅವಳುಟ್ಟಿದ್ದಳು ಆಗಸವ ಹೊಲುವ ನೀಲ ಜರಿ ಸೀರೆ,
ಅವಳಾಗಿದ್ದಳು ಕಣ್ಣ ಕುಕ್ಕಿಸುವ ಸೌಂದರ್ಯ ಧಾರೆ.

ಆಹ್ವಾನ ನೀಡುವಂತೆ ಕೂಗಿ ಕರೆಯುತಿತ್ತು, ಹಾರಾಡುತಿದ್ದ ಅವಳ ಸೀರೆ ಸೆರಗು.
ಮರವ ಸುತ್ತಿಹ ಲತೆಯಂತೆ ನಲಿಯುತಿತ್ತು ಜರಿ ಸೀರೆಯ ನೆರಿಗು.

ನೋಟ ಬದಲಿಸಲೆಂತು, ಎದುರಿಗಿರಲು ಈ ಸೊಬಗು,
ಕೆಂಪೇರಿದ ಮುಖವ ತಗ್ಗಿಸಿ ನೀರಾದಳಾಕೆ ನಾಚಿಕೆಯಲ್ಲಿ ಕೊನೆಗೂ.

_____________________________________________

ನಗು

ತುಟಿ ಬಿಚ್ಚಿ ನಕ್ಕರಾಕೆ, ಬೀಳುವದು ಕೆನ್ನೆ ಮೇಲೊಂದು ಗುಳಿ
ತುಂಬುಗೆನ್ನೆಯ ಮೇಲಿನ ಸಿಹಿನೀರ ಕೆರೆ, ಮಾಡಿತು ನಿದ್ದೆಯ ಮೇಲೆ ದಾಳಿ
ನೋಡುಗನೆದೆಗೆ ಲಗ್ಗೆಯಿಡುವ ಆ ನಗು, ಅವಳ ಹುಟ್ಟು ಬಳುವಳಿ
ಕೆನ್ನೆ ಗುಳಿಯ ನೋಡುತಿರೆ,ಇಟ್ಟಂತೆ ಮ್ರದುವಾಗಿ ಕಚಗುಳಿ