ಎರಡು ಕವನ - ಪ್ರಕ್ರತಿ ಮತ್ತು ಕಾಲ

ಎರಡು ಕವನ - ಪ್ರಕ್ರತಿ ಮತ್ತು ಕಾಲ

ಬರಹ

ಪ್ರಕ್ರತಿ

ಅಪರೂಪಕೊಮ್ಮೆ ಎಂಬಂತೆ ಹೊರ ನಡೆದಿದ್ದೆ ಕಾವೇರಿ ತಡಲಿಗೆ
ತಂಪಾದ ಗಾಳಿ ಬೀಸಲು ಜಾರಬೇಕೆನಿಸಿತು ಹಸಿರ ಮಡಿಲಿಗೆ
ದೂರದಿ ನದಿ ನೀರು ಹರಿಯೆ ಕೇಳುತಿದೆ ಜುಳು ಜುಳು
ಚಿಂವ್ ಚಿಂವ್ ಎಂದು ದನಿಗೂಡಿ ಹಾಡಿವೆ ಗಿಣಿಗಳು

ಘಮ್ಮನೆ ಕಂಪ ಸೂಸುತಿರೆ ಅರಳಿ ಬೀಗುತಿಹ ಮಂದಾರ ಪುಷ್ಪ
ನೋಡುಗನ ಕಣ್ಣಿಗೆ, ಧರೆಗಿಳಿದು ಬಂದ ದೇವತೆಯ ಪ್ರತಿರೂಪ
ಪ್ರಕ್ರತಿ ಹಸಿರು ಜರಿ ಸೀರೆಯುಟ್ಟು ಮಾಡುತಿರೆ ವಯ್ಯಾರ
ಆಸೆಬುರುಕನಂತೆ ದುರುಗುಟ್ಟಿ ದೂರದಿ ನೋಡುತಿಹ ನೇಸರ

__________________________________

ಕಾಲ

ಕಪ್ಪು ಕತ್ತಲಲಿ ಬೆತ್ತಲಾಗಿ ನಿಂತ ಇರುಳು
ಕಾಲ ಸ್ತಬ್ದ್ವಗಿದೆ ಎಂದರಿತರೆ ನೀನೊಂದು ಮರಳು
ಕಾಲ ನಿಲ್ಲುವದಿಲ್ಲ, ಯಾರಿಗು ಕಾಯುವದಿಲ್ಲ

ಅಂಬೆಗಾಲಿಕ್ಕಿ ಒಡುವ ಪುಟ್ಟ ಕಂದಮ್ಮಗಳು
ಬ್ಯಾ ಎಂದು ಮುಂದೊಡುವ ಕುರಿ ಮುಂದೆಗಳು
ಕಾಲ ನಿಲ್ಲುವದಿಲ್ಲ, ಯಾರಿಗು ಕಾಯುವದಿಲ್ಲ