ಎರಡು ಕವನ - ಸೋಲು ಮತ್ತು ಮಂಥನ

ಎರಡು ಕವನ - ಸೋಲು ಮತ್ತು ಮಂಥನ

ಬರಹ

ಸೋಲು

ಕುಹುಕ ನಗುವಿನ ಪ್ರಪಂಚ ಕಾಡಿ ಕದಡುತಿತ್ತು ಮನವ
ಮೈಯ ತುಂಬ ಉಟ್ಟಿತ್ತು ಏಮಾರಿಸಿದ ಜಂಬತನವ
ಅರೆಕ್ಷಣದಲಿ ವಿಲಕ್ಷಣವಾಗಿ ಬಂದೆರಗಿದ ಸೋಲು
ಹಾಕಿ ಉಳಿಸಿಕೊಂಡ ಅಡಿಪಾಯಕ್ಕೆ ಮುಟ್ಟಗೋಲು

ಅಟ್ಟಹಾಸದಿ ಮೆರೆಯುತಾ ನಡೆಸುತ್ತಿತ್ತು ವಿಜಯದ ವಿಜ್ರಂಮಣೆ
ಸೋಲಿನ ಅಳಲು, ಅಸಹಾಯಕತೆಯ ಮಡಿಲು, ಮಾಡಿತ್ತು ಮತಿಭ್ರಮಣೆ
ಇಲ್ಲಿ ಒಮ್ಮೆ ಮೌನಗಳ ನಡುವೆ ಗುದ್ದಾಟ, ಮಗದೊಮ್ಮೆ ಮೌನ ರೋದನ
ಅಲ್ಲಿ ಹೊರಗೆ ಕೋಲಾಹಲ, ಮಳೆ ಗುಡುಗು ಮಿಂಚುಗಳ ರುದ್ರನರ್ತನ

_______________________________________________

ಮಂಥನ

ಮಾತು ಮಾತುಗಳ ಒರೆತಕ್ಕೆ ಸಿಲುಕಿ ಮನದಲಿ ಮಂಥನ
ಮನಸು ಮನಸುಗಳ ನಡುವೆ ಮೌನ ಕದನಗಳ ಅವಲೋಕನ

ಎದೆಯ ಪಸರಿಸಿದ ಮುಗಿಲು, ಮನದಾಳದ ಕಡಲು, ಜೀವರಾಶಿಯ ಕಾಡು
ಒಮ್ಮೆ ಸೂರ್ಯ, ಒಮ್ಮೆ ಮುತ್ತು, ಕೊನೆಗೆ ಮಿಂಚುಹುಳುವಿನಡಿ ಹುಡುಕಾಡು

ಹತ್ತಿರವಿದ್ದು ದೂರ ಹೋಗುವ ಹುಂಬತನದಿ ಪಡುತಿಹೆವು ಪ್ರಯಾಸ
ಹ್ರದಯ, ಭಾವನೆಗಳ ನಡುವಿನ ಅಂತರ, ಬೇಕಿಲ್ಲವಿದು ವಿಪರ್ಯಾಸ!

ಕಣ್ಣೀರ ಕೊಳವ ಬತ್ತಿಸಿ ನಿಟ್ಟುಸಿರಿಟ್ಟರೆ, ಮತ್ತೆ ಕಷ್ಟಗಳ ಸುರಿಮಳೆ
ಹಿಡಿದಿಟ್ಟು ಕಣ್ಣೀರ, ಮೊರೆ ಹೊಕ್ಕು ಮೌನವ ಸಾದಿಸುವುದೇನ ನೀ ಮರುಳೆ?