ಎರಡು ಗಝಲ್ ಗಳು…
ಕವನ
ಗಝಲ್ ೧
ಏಕೆ ಕಾಡುತಿರುವೆ , ಸಖಿಯೆ ?
ನೋವ ನೀಡುತಿರುವೆ ಸಖಿಯೆ ?
ಕಷ್ಟದಾ ಕಾರ್ಮೋಡ ,ಕವಿದಾಗ
ಬಿಟ್ಟೇಕೆ ಓಡುತಿರುವೆ ಸಖಿಯೆ ?
ಏರಿದಾ , ಮದಿರೆಯ ಮತ್ತಿನಲಿ
ಅದೇನ ,ಮಾಡುತಿರುವೆ ಸಖಿಯೆ ?
ಅರಳಿದ ,ಹೂವಂತೆ ನಳ ನಳಿಸಿ
ಕ್ಷಣದಿ, ಬಾಡುತಿರುವೆ ಸಖಿಯೆ
ಸಾಕು ಮಾಯೆಯ ಆಟ
ನಿಲ್ಲಿಸು ,ಬೇಡುತಿರುವೆ ಸಖಿಯೆ
***
ಗಝಲ್ ೨
ಒಬ್ಬನಿಗೆ ಹೆದರಿ ಬದುಕುವುದು ಸ್ವಾತಂತ್ರ್ಯವೆ ?
ನಾಯಕನ ಕಾಲಕೆಳಗೆ ತೂರುವುದು ಸ್ವಾತಂತ್ರ್ಯವೆ ?
ಬರಹಗಾರ ಯಾರದೋ ಮರ್ಜಿಗೆ ಬರೆಯುವುದು ಯಾಕೆ
ನಾನೇ ಎನ್ನುವವನ ಜೊತೆಗೆ ಬೆರೆಯುವುದು ಸ್ವಾತಂತ್ರ್ಯವೆ ?
ಹುತ್ತದಲ್ಲಿ ಹಾವಿದೆಯೆಂದೂ ತಿಳಿದೂ ಕೈ ಹಾಕುತ್ತೇವೆಯೇ
ಅರಿತೂ ತುಳಿಸಿಕೊಂಡು ಬಾಡುವುದು ಸ್ವಾತಂತ್ರ್ಯವೆ ?
ಜೀವನದ ಪಾಠಗಳನ್ನು ಕಲಿತೂ ಕೆಲವೊಮ್ಮೆ ಎಡವುತ್ತೇನೆ
ಅತಿಯಾಸೆ ಚಿಂತೆಯಲೇ ಸದಾ ಸೋಲುವುದು ಸ್ವಾತಂತ್ರ್ಯವೆ ?
ಊರ ಬೀದಿಯಲ್ಲಿ ನಾನೀಗ ನಡೆವಾಗ ಅಪರಿಚಿತನಾದೆ ಈಶ
ತಲೆ ತಗ್ಗಿಸಿ ಇರುವಾಗಲೂ ಹೀಗೇ ಕೆದಕುವುದು ಸ್ವಾತಂತ್ರ್ಯವೆ ?
-ಹಾ .ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
