ಎರಡು ಗಝಲ್ ಗಳು
ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ವಿಧಿಯೆ
ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ವಿಧಿಯೆ
ಉಂಡಮನೆಗೆ ನನ್ನದೆಲ್ಲವನ್ನು ಸುರಿದರು ಯಾರೂ ನೋಡುವವರೇ ಇಲ್ಲವಿಲ್ಲಿ
ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ ಕೇಳಿಲ್ಲ ವಿಧಿಯೆ
ಆಶ್ರಯದ ಜಲವನ್ನು ಕುಡಿದು ಬದುಕುತ್ತಿರುವಂತೆ ನೋಡುತ್ತಾ ಇಹರಿಂದು
ಆಶ್ರಮದ ಹೊರಗಡೆ ನಿಂತು ಕಾಯುತ್ತಿದ್ದರೂ ಕೂಗಿಲ್ಲ ವಿಧಿಯೆ
ಚಿಂತೆಗಳ ಸುಳಿಗೆ ಸಿಲುಕಿದವನಿಗೆ ಯಾರಾದರೂ ಅನ್ನನೀಡದೆ ಹೋಗುವರೆ
ಉಟ್ಟಬಟ್ಟೆಯಲ್ಲೆ ಹೊರಟಿದ್ದೇನೆ ಹೊರಗೆ ಅವರಿಗೂ ಬೇಕಿಲ್ಲ ವಿಧಿಯೆ
ಬಾಳಿನ ಏಳು ಬೀಳುಗಳಲ್ಲಿ ಕೊನೆಯಲ್ಲಿ ಇರುವವನೇ ಈಶಾ
ಹೊರಡುವ ಕಾಲ ಬಂದಾಗ ಯಾರೊಬ್ಬರನ್ನೂ ನೆಚ್ಚಿಲ್ಲ ವಿಧಿಯೆ
***
೨.
ಮಧುರ ಕ್ಷಣಗಳ ಅರಿವುಯಿದೆ ಮೌನವಾಗಿರು
ಬದುಕಿಗೆ ಸುಂದರವಾದ ಹರವುಯಿದೆ ಮೌನವಾಗಿರು
ಪ್ರೀತಿಯ ತಂತಿಗೆ ಮನವುಯಿದೆ ಮೌನವಾಗಿರು
ಕೈಯಬಳೆಯ ಸದ್ದಿಗೆ ತನುವುಯಿದೆ ಮೌನವಾಗಿರು
ತುಟಿಯಾಸೆಗೆ ಮೀರಿದ ಚೆಲುವುಯಿದೆ ಮೌನವಾಗಿರು
ಚೈತ್ರದ ಸೊಗಸಿಗೆ ದಿನವುಯಿದೆ ಮೌನವಾಗಿರು
ರಾತ್ರಿಯ ಚಂದಿರನಿಗೆ ಒಲವುಯಿದೆ ಮೌನವಾಗಿರು
ತಾರೆಯ ಕುಡಿನೋಟಕೆ ಗೆಲುವುಯಿದೆ ಮೌನವಾಗಿರು
ಈಶನೊಲವಿಗೆ ಬಿರಿದ ಮನವುಯಿದೆ ಮೌನವಾಗಿರು
ಮನದರಸಿಗೆ ಸವಿಯ ಕುಲವುಯಿದೆ ಮೌನವಾಗಿರು
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ