ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ತನ್ನವರಿಗೆ ಪ್ರೀತಿಯನು ಕೊಡು ಒಲವನೇ ಗಳಿಸುವೆ

ಅನ್ಯರಿಗೆ ಜ್ಞಾನವನು ನೀಡು ಪ್ರೇಮವನೇ ಗಳಿಸುವೆ

 

ಹಿರಿಯರಿಗೆ ನಮಿಸುತ ನಡೆಯು ಆಶೀರ್ವಾದವ ಪಡೆಯುವೆ

ಕಿರಿಯರಿಗೆ ಮಾರ್ಗದರ್ಶನ ಮಾಡು ವಿಶ್ವಾಸವನೇ ಗಳಿಸುವೆ

 

ಪ್ರಾಮಾಣಿಕರಿಗೆ ಧೈರ್ಯವನು ತುಂಬು ಶುಭವನು ಕಾಣುವೆ

ಸಾಧಕರಿಗೆ ಹುರುಪನು ತೋರು ಒಳ್ಳೆಯದನೇ ಗಳಿಸುವೆ

 

ಬಡವರಿಗೆ ನೆಮ್ಮದಿಯನು ತರು ಖುಷಿಯನೆಲ್ಲ ಹೊಂದುವೆ 

ಗೆಳೆಯರಿಗೆ ಪ್ರಿಯನಾಗಿರು ಹೊಸ ಲೋಕವನೇ ಗಳಿಸುವೆ

 

ಪೂಜಿಸುವರಿಗೆ ಸನಿಹನಾಗಿರು ಬಂಧುವೆ ಬರುವನು ಈಶಾ

ಜೀವಾತ್ಮರಿಗೆ ಹೆಗಲಾಗಿರು ಧ್ಯೆಯ ಗುಣವನೇ ಗಳಿಸುವೆ

***

ಗಝಲ್ ೨

ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗದಂತಿರಲಿ ಗೆಳೆಯ

ಮೌನದೊಲವಿನ ಸವಿಯು ಮಾಸಿಹೋಗದಂತಿರಲಿ ಗೆಳೆಯ

 

ಮಧುರದೊಲವಿನ ಸೃಷ್ಟಿಯು ಹುಸಿಯಾಗದಂತಿರಲಿ ಗೆಳೆಯ

ಸವಿಯೊಲವಿನ ತಾರೆಯು ಕೊಳೆಯಾಗದಂತಿರಲಿ ಗೆಳೆಯ

 

ತಾಳಿಯೊಲವಿನ ತೆಕ್ಕೆಯದುಯೆಂದೂ ಚಿತೆಯಾಗದಂತಿರಲಿ ಗೆಳೆಯ

ಹೂವಿನೊಲವಿನ ದುಂಬಿಯು ಮುನಿಯಾಗದಂತಿರಲಿ ಗೆಳೆಯ

 

ಎದೆಯೊಲವಿನ ಕತೆಯು ಸಮಸ್ಯೆಯಾಗದಂತಿರಲಿ ಗೆಳೆಯ

ಸ್ವಾತಿಯೊಲವಿನ ಇಳೆಯು ಅಗ್ನಿಯಾಗದಂತಿರಲಿ ಗೆಳೆಯ

 

ಈಶನೊಲವಿನ ಪ್ರೇಮವದು ಅಲೆಯಾಗದಂತಿರಲಿ ಗೆಳೆಯ

ಸರಸದೊಲವಿನ ರತಿಯು ಅತಿಯಾಗದಂತಿರಲಿ ಗೆಳೆಯ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್