ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

೧.

ನಿಶೆಯಿದ್ದರೆ ಮನದಲಿ ಗೆಲುವು ಖಚಿತ

ಕಸುವಿದ್ದರೆ ಮನದಲಿ ಗೆಲುವು ಖಚಿತ

 

ಜೀವವಿದ್ದರೆ ಮನದಲಿ ಗೆಲುವು ಖಚಿತ

ಒಲವಿದ್ದರೆ ಮನದಲಿ ಗೆಲುವು ಖಚಿತ

 

ತನುವಿದ್ದರೆ ಮನದಲಿ ಗೆಲುವು ಖಚಿತ

ಹಣವಿದ್ದರೆ ಮನದಲಿ ಗೆಲುವು ಖಚಿತ

 

ಮೌನವಿದ್ದರೆ ಮನದಲಿ ಗೆಲುವು ಖಚಿತ

ಗುಣವಿದ್ದರೆ ಮನದಲಿ ಗೆಲುವು ಖಚಿತ

 

ಎಚ್ಚರವಿದ್ದರೆ ಮನದಲಿ ಗೆಲುವು ಖಚಿತ

ಸವಿಯಿದ್ದರೆ ಮನದಲಿ ಗೆಲುವು ಖಚಿತ

***

೨.

ಸವಿಯನಿಂದು ಕೊಡಲು ಹೋದೆ ತೆಗೆದುಕೊಳ್ಳಲಿಲ್ಲ

ಮತ್ತಿನಲ್ಲಿ ಮುದ್ದಿಸಲು ಕಾದೆ ಪಡೆದುಕೊಳ್ಳಲಿಲ್ಲ

 

ಮೋಹವಿಂದು ಬರಡಾಯಿತು ಏಕೆ ತಿಳಿಯಲಿಲ್ಲ

ಪ್ರೀತಿಯ ಮಾತಿನಂತೆ ತರುಣಿ ನಡೆದುಕೊಳ್ಳಲಿಲ್ಲ

 

ಮಾಧೂರ್ಯದ ನುಡಿಗಳಲ್ಲಿ ಹೇಳೆ ಕೋಪವೇಕೆ 

ವಿನಾಕಾರಣ ಏನಾದರೂ ನಾನು ಸೆಟೆದುಕೊಳ್ಳಲಿಲ್ಲ

 

ರಾತ್ರಿಯೆನುವ ತಂಪಿನಲ್ಲೂ ವಿರಹವಿಂದು ಸುಡುತಿದೆ

ಬಾಡಿರುವ ಮುಖವ ನೋಡಿ ಕರೆದುಕೊಳ್ಳಲಿಲ್ಲ

 

ಹೊತ್ತುರಿಯುವ ಮನದೊಳಗೆ  ಕಂಪಿದೆಯೇ ಈಶಾ

ಮತ್ಸರ ವಯ್ಯಾರವಿರಲಿ ಜೊತೆಯ ಕಡಿದುಕೊಳ್ಳಲಿಲ್ಲ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್