ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಹೊಳೆಯ ದಾಟಿದ ಸಮಯದಲ್ಲಿ ಅಂಬಿಗನ ಮರೆಯದಿರು ಗೆಳೆಯಾ

ದಡ ಸೇರಿದೆನೆಂದು ಸಂತಸದಲ್ಲಿ  ನಾವಿಕನ ತೊರೆಯದಿರು ಗೆಳೆಯಾ

 

ಪ್ರೀತಿಯ ಮುತ್ತಿನ ನಂಬಿಕೆಯಲ್ಲಿ ದೋಣಿಯಲೇ ಸಾಗುತಿರುಯೆಂದೂ

ಒಳಿತು ಮಾಡಿದವರಿಗೆ ಕೆಡುಕನೆಂದೂ ಬಯಸಿ ಹೋಗದಿರು ಗೆಳೆಯಾ

 

ಕಣ್ಣಂಚಿನ ಹೊಳಪು ಮರೆಯಾಗದಂತೆ ನೀನೊಂದು ಪ್ರತಿಭೆಯಾಗಿರು

ಸಿಹಿ ನೆನಪುಗಳ ಮಹಾಪೂರಗಳ ನಡುವೆಯೇ ತಿರುಗದಿರು ಗೆಳೆಯಾ

 

ಜೀವನದ ಸುಖ ದುಃಖಗಳಲ್ಲಿ ಸತಿಯೊಲವಿನ ಜೊತೆಗೇ ನಡೆಯುತಿರು

ಕಲಿಸಿ ಪೋಷಿಸಿದ ತಂದೆತಾಯ ನುಡಿಯನ್ನು ದೂರದಿರು ಗೆಳೆಯಾ

 

ಈಶನೊಳಗಿನ  ಕರುಣೆಯ ಒಲವಿನ ನೆನಪ ಹಸಿರಾಗಿಸುವ ದಿನವಿಂದು 

ಬಾಳಿನ ಪಲ್ಲವಿಯೊಳು ಸೇರುತಲೇ ಅರುಚಿಯ ಸವಿಯದಿರು ಗೆಳೆಯಾ

***
ಗಝಲ್ ೨

ಗಝಲ್ ಕವಿಯುತಿಹ ಭಾವನೆಗಳ ಸಂಗಮ

ಕವಿತೆಯಂತೇ ಬದುಕಿನ ಜೀವನಗಳ ಸಂಗಮ

 

ಕವಿತೆಯ ಗಝಲ್ಗಳ ಒಳ ಹೊರಗು ಬೇರೆಯೇನು

ಬೆರೆವ ಗುಣವು ಬೇಕು ನಮಗೆ ತಿಳಿವುಗಳ ಸಂಗಮ

 

ಬರೆಯುವಂತ ಕ್ರಮವು ಬೇರೆ ರೂಪವು ವಿರೂಪವೆ

ಸಿಹಿ ಕಹಿಗಳು ತುಂಬಿ ಮೊರೆಯೆ ಕವನಗಳ ಸಂಗಮ

 

ಪ್ರೇಮಿಯಾಗು ಎಲ್ಲವನ್ನು ಒಲವಿನೊಳಗೆ ಬಂಧಿಸುತ

ತಮವ ಬಿಡುತ ಒಂದೆಯೆನುವ ಅರಿವುಗಳ ಸಂಗಮ

 

ತನುವು ಮನವು ಎರಡು ಒಂದೇ ದೂರಬೇಡ ಈಶಾ

ಕನಸಿನಾಚೆ ಹೊಸತು ಇಹುದು ನನಸುಗಳ ಸಂಗಮ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್