ಎರಡು ಗಝಲ್ ಗಳು
ಕವನ
ಗಝಲ್ ೧
ತಾನೇ ಎನ್ನದಿರು ಹಿಂದೆ ಇನ್ನೂ ದೊಡ್ಡವರಿದ್ದಾರೆ
ಗಟ್ಟಿಯಾಗಿ ಇರದಿದ್ದರೆ ಮೆತ್ತಗೆ ತಟ್ಟುವರಿದ್ದಾರೆ
ಮುಖ ಸಡಿಲಿಸಿ ಮಾತನಾಡುವುದ ಕಲಿಯಲಿಲ್ಲವೆ
ಬೆಣ್ಣೆ ಸವರಿದಂತೆ ಇರುವರ ಜೊತೆ ಬಾಗುವರಿದ್ದಾರೆ
ಗುಂಡು ಕಲ್ಲಿನಂತೆ ಯಾವತ್ತೂ ಇರುವೆನೆಂದೆನಬೇಡ
ಕಟ್ಟಿರುವ ಮನವನ್ನು ಹೀಗೆಯೇ ಬೀಳಿಸುವರಿದ್ದಾರೆ
ವಿವಿಧತೆಯಲ್ಲಿ ಏಕತೆಯೆನ್ನುವವರು ಕುರುಡಾಗಿಹರು
ಬರವಣಿಗೆಯಲ್ಲಿನ ಅಂತರಂಗವನ್ನು ಅಳಿಸುವರಿದ್ದಾರೆ
ಜಾಣರಿಂದು ತಮ್ಮದೆನುವ ಮೋಹದಲ್ಲಿದ್ದಾರೆ ಈಶಾ
ಅಶುದ್ಧದ ನಡುವೆಯೂ ನಾವು ಶುದ್ಧ ಎನ್ನುವರಿದ್ದಾರೆ
***
ಗಝಲ್ ೨
ಸವಿಯ ನೆನಪು ಹೀಗೆ ಬಾಗಿ ಬಂತು*
ಹಳೆಯ ಸಂಗ ಹಾಗೆ ತೂಗಿ ಬಂತು*
ಯಾರು ಏನು ಮಾಡ ಬೇಕು ವಿಧಿಯೆ*
ಹೊರೆ ಮೌನ ಕಳಚಿ ಬೀಗಿ ಬಂತು*
ಪುರದ ಒಳಗೆ ನಡೆವ ಸಂತೆ ಇದೆಯೆ*
ಹೆಣ್ಣು ಮಗುವು ಇಲ್ಲೆ ಸಾಗಿ ಬಂತು*
ಬೀದಿ ಬಸವ ನೋಡು ಅಲ್ಲೆ ಇರುವ*
ಹಸಿವ ಉಸಿರ ಗಾಳಿ ತೇಗಿ ಬಂತು*
ನಡೆಯ ಸದ್ದು ಕೇಳಿ ಮೌನಿ ಈಶ
ಆತ್ಮ ಮಸಣ ಕಂಡು ಹೋಗಿ ಬಂತು
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್