ಎರಡು ಗಝಲ್ ಗಳು.....
ಗಝಲ್ ೧
ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ
ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ
ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು
ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ
ಕೊರಳ ಬಳಸಿ ಚೆಲ್ಲಿ ಮಧುವ ಹೀರಿ ದಣಿದು ಸಾಗಿದೆ
ಮಧುರ ತನನ ಸಮರ ಎನಿಪ ಸೃಷ್ಟಿ ಒಲವೆ ಗೆಳತಿಯೆ
ಜೀವ ಭಾವ ಜಗದ ಸುತ್ತ ಸುದಿನ ಹರಡಿ ನಲಿದಿದೆ
ನನಸು ಕಾಂಬ ಸವಿಯ ಕಿರಣ ಸುತ್ತ ಸೆಳೆದೆ ಗೆಳತಿಯೆ
ಈಶ ಬರುತ ಕೈಯ ಹಿಡಿದ ಸಖಿಯ ನೋಡು ನಾಚಿದೆ
ತಾರೆ ಜೊತೆಗೆ ಪೂರ್ಣ ಚಂದ್ರ ಒಲಿದ ಸಖನೆ ಗೆಳತಿಯೆ
***
ಗಝಲ್ ೨
ಈಗೀಗ ಮೌನವನೆಂದಿಗೂ *ನಗಿಸುವುದಿಲ್ಲ* ಗೆಳತಿ
ಆಗೀಗ ಅಪಸ್ವರವನೆಂದಿಗೂ *ಸಹಿಸುವುದಿಲ್ಲ* ಗೆಳತಿ
ಹೀಗೆಯೇ ಜೀವನವದುವು ಎನ್ನುವವನಿಗೆ ಏನನ್ನಲಿ
ಹಾಗೆಯೇ ಇರುವವನನ್ನು *ನೋಯಿಸುವುದಿಲ್ಲ* ಗೆಳತಿ
ಬಾಗೀನವ ಕೊಡುವೆನೆನ್ನುವನ ಬೇಡವೆನ್ನುವುದೇ ನದಿ
ರೋಗಿಯು ಜೊತೆಗಿರುವವನ *ಬಾಳಿಸುವುದಿಲ್ಲ* ಗೆಳತಿ
ಹೇಗೆಯೋ ಬದುಕುವೆನೆಂಬುವವನು ಇರುವನೆ ಜಗದಿ
ಹೋಗೆನು ಎನ್ನುವವನನ್ನು *ಓಡಿಸುವುದಿಲ್ಲ* ಗೆಳತಿ
ರಾಗದಲ್ಲಿ ಹಾಡುವವನೆಂದಿಗೂ ಹಾಡದಿರುವನೆ ಈಶಾ
ಬೇಗೆಯಲಿಂದು ಬಾಡುವವನ *ಅಳಿಸುವುದಿಲ್ಲ* ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ