ಎರಡು ಗಝಲ್ ಗಳು.....
೧.
ಒಲವಿರುವ ಮಾತುಗಳ ಮನದಿಂದ ತಿಳಿಸಿದೆ
ನೋವಿರುವಂತ ಹೃದಯಕ್ಕೆ ಕಣ್ಣಿಂದ ತಿಳಿಸಿದೆ
ತನುವಿನಾಳದೊಳು ನೆನಪುಗಳು ಇರುವುದೇಕೆ
ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ
ಪ್ರೇಮ ಮಂದಿರದ ಅಡಿಯಾಳು ನಾನಿಂದು
ನಲುಮೆ ಮೂಡುತಲೇ ಸವಿಯಿಂದ ತಿಳಿಸಿದೆ
ಶಯನಗೃಹ ಒದ್ದಾಡುವುದ ಕಂಡು ಮರುಗಿದೆ
ಮೆತ್ತಗಿರುವಂತ ಹಾಸಿಗೆಗೆ ಕನಸಿಂದ ತಿಳಿಸಿದೆ
ನೋವು ಮಾಯುವ ಮುನ್ನವೆ ಬರುವನೇ ಈಶಾ
ಸುರಿವಂತ ಮದುವಿಗಿಂದು ಚೆಲುವಿಂದ ತಿಳಿಸಿದೆ
***
೨.
ಬರುತ್ತವೆ ನೆನಪುಗಳು ಹೊತ್ತು ಮುಳುಗಿದಾಗ
ತನುವಿನೊಳಗೆ ನಡುಕವಿರುತ್ತದೆ ಕತ್ತದುವು ಉಳುಕಿದಾಗ
ಮೆತ್ತನೆಯ ರತ್ನಗಂಬಳಿಯಲ್ಲಿ ಮುಳ್ಳಿಟ್ಟವನಾರು
ದೇಹವಿಂದು ಮುರುಟುತ್ತಲೇ ಯೌವನವು ನಡುಗಿದಾಗ
ಕನಸುಗಳು ಬೀಳದೆ ಒಲವೆಂದೂ ಚಿಗುರದು
ದೇಹಸಿರಿಯು ಬಾಡಿತಿಂದು ಹಬೆಯೊಳಗೆ ಸಿಲುಕಿದಾಗ
ನನಸಿಲ್ಲದೆ ಒದ್ದಾಟವು ಯೌವನದ ಹುಚ್ಚಿನಲಿ
ಪ್ರೀತಿಯದು ಸಿಗದೇ ಹೋಯ್ತು ದ್ವೇಷವನು ಕುಲುಕಿದಾಗ
ನಡೆಯಿಲ್ಲದೆ ನುಡಿಯದು ಶುದ್ಧವೇ ಈಶಾ
ನರಗಳೆಲ್ಲ ಜೋತು ಬೀಳುತ್ತದೆಯೋ ಮನ ಸವರಿದಾಗ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ