ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಪ್ರತಿಭೆಗಳನ್ನು ತುಳಿಯುತ್ತಾ ಸಾಗಿದ್ದೇವೆ ನಾವು

ಹೊಸದೆನ್ನುತ್ತಾ ತಿಳಿಯದೇ ಬಾಗಿದ್ದೇವೆ ನಾವು

 

ಭಿನ್ನವಾದ ಧೋರಣೆಯ ನಡುವೆಯೇ ಬದುಕೇಕೆ

ಪಾಪದವರನ್ನು ಹೊಸಕುತ್ತಲೇ ಬೀಗಿದ್ದೇವೆ ನಾವು

 

ತಿಳಿದವರಲ್ಲಿಂದು ನಾವೆನ್ನುವ ಅಹಂಕಾರವು ಬೇಕೆ

ಹೊಸತಲ್ಲದ ವಸ್ತುಗಳಿಗಾಗಿಯೇ ಕೂಗಿದ್ದೇವೆ ನಾವು

 

ಅನ್ನವು ಬೆಂದಿದೆಯೇ ತಿಳಿಯಲು ಒಂದಗುಳ ಸಾಕು

ಎಲ್ಲವೂ ಗೊತ್ತಿದ್ದರೂ ಹಲವರನ್ನು ತೂಗಿದ್ದೇವೆ ನಾವು

 

ಬೇಯುವರ ನಡುವಿನಿಂದ ನೀನು ದೂರವಿರು ಈಶಾ

ಒಣ ಜಂಭದವರಿಗಿಂತ ಬದುಕಲ್ಲಿ ಮಾಗಿದ್ದೇವೆ ನಾವು

***

ಗಝಲ್ ೨

 

ನೀನಿಲ್ಲದಿದ್ದರೆ ನನಗೆ ಏನಾಗುವುದಿಲ್ಲ

ನಾ ಸತ್ತರೂ ನಿನಗೆ ನೋವಾಗುವುದಿಲ್ಲ

 

ಬುಡ ಕಡಿದಿಹ ಮರವು ಮತ್ತೆ ಚಿಗುರುವುದೆ

ಪೌಡರಿನ ಪರಿಮಳಕೆ ನೀ ಘಮಲಾಗುವುದಿಲ್ಲ

 

ಸತ್ತವರು ಗೋರಿಯಿಂದ ಎದ್ದು ಬರುತ್ತಾರೆಯೆ

ಸಂತಸ ಇದ್ದರೂ ಕೆಲವರಿಗೆ ಗೆಲುವಾಗುವುದಿಲ್ಲ

 

ಸಂತೆಗಳಲ್ಲಿ ನಾಯಿಗಳ ಕಂಡು ಓಡಿಸುತ್ತಾರೆಯೆ

ವಸ್ತು ಕೊಂಡರೂ ಹಲವರಿಗೆ ಸೋಲಾಗುವುದಿಲ್ಲ

 

ಬತ್ತಳಿಕೆಯಲ್ಲಿ ಬಾಣ ಇಲ್ಲವೆ ಏನು ಮಾಡಲಿ ಈಶಾ

ಬೆಲ್ಲವ ತಿಂದು ನೀರು ಕುಡಿದರೆ ಚಪಲವಾಗುವುದಿಲ್ಲ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್