ಎರಡು ಗಝಲ್ ಗಳು.....
ಕವನ
ಗಝಲ್ ೧
ಪ್ರೀತಿ ಸಿಗಲಿಲ್ಲವೆ ಹುಚ್ಚನಾಗದಿರು ಗೆಳೆಯ
ಮಾತು ಬರಲಿಲ್ಲವೆ ಖಿನ್ನನಾಗದಿರು ಗೆಳೆಯ
ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ
ನೆಮ್ಮದಿ ಕಾಣಲಿಲ್ಲವೆ ಬೆತ್ತಲಾಗದಿರು ಗೆಳೆಯ
ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು
ದಾರಿ ತಿಳಿಯಲಿಲ್ಲವೆ ಕತ್ತಲಾಗದಿರು ಗೆಳೆಯ
ಮುತ್ತಿನ ಮಹಲಲ್ಲಿ ಮತ್ತದುವು ಇಲ್ಲವಾಯಿತೆ
ಗೆಲುವಿಂದು ನಿಲಲಿಲ್ಲವೆ ಮೆತ್ತಗಾಗದಿರು ಗೆಳೆಯ
ಜೀವನ ಪಯಣಗಳೆಲ್ಲ ಹೀಗೆ ಹೀಗೆಯೇ ಈಶಾ
ಬದುಕು ಸಿಗಲಿಲ್ಲವೆ ಮೌನಿಯಾಗದಿರು ಗೆಳೆಯ
***
ಗಝಲ್ ೨
ನಾನು ಭಿಕಾರಿಯಲ್ಲ ತಿರುಗುತ್ತಿದ್ದೇನೆ
ನಾನು ಸಂಸಾರಿಯಲ್ಲ ತಿರುಗುತ್ತಿದ್ದೇನೆ
ನಾನು ವಿವೇಕಿಯಲ್ಲ ತಿರುಗುತ್ತಿದ್ದೇನೆ
ನಾನು ಸೇವಕಿಯಲ್ಲ ತಿರುಗುತ್ತಿದ್ದೇನೆ
ನಾನು ಸಿಡುಕಿಯಲ್ಲ ತಿರುಗುತ್ತಿದ್ದೇನೆ
ನಾನು ದುಂಬಿಯಲ್ಲ ತಿರುಗುತ್ತಿದ್ದೇನೆ
ನಾನು ಕವಿತೆಯಲ್ಲ ತಿರುಗುತ್ತಿದ್ದೇನೆ
ನಾನು ತಿಗಣೆಯಲ್ಲ ತಿರುಗುತ್ತಿದ್ದೇನೆ
ನಾನು ಬುವಿಯಲ್ಲ ತಿರುಗುತ್ತಿದ್ದೇನೆ
ನಾನು ಹುಲಿಯಲ್ಲ ತಿರುಗುತ್ತಿದ್ದೇನೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್