ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಮನದ ಕದವ ತೆರೆಯ ಬಾರೆ

ತನುವಿನೊಳಗೆ ಹರೆಯ ಬಾರೆ

 

ಹೂವಿನಂತೆ ಸೊಬಗು ಸಾಕೆ

ಒಲವನಿಂದು ಎರೆಯ ಬಾರೆ

 

ಸಿರಿಯ ಕಂಡು ಬೇಡ ಮೋಹ

ಅರಿತು ಪ್ರೀತಿ ಕರೆಯ ಬಾರೆ

 

ಒಂದು ಎನುವ ಭಾವವಿರಲಿ

ದ್ವೇಷ ಪಾಶ ಮರೆಯ ಬಾರೆ

 

ಸಂಗದೊಳಗೆ ಮಿಂದ ಈಶಾ

ಚೆಲುವಿನೊಳಗೆ ಬೆರೆಯ ಬಾರೆ

***

ಗಝಲ್ ೨

ನಾನು ನಾನೊಬ್ಬನೇ ಗೆಲುವು ನನ್ನಿಂದಲೇ ಎನ್ನುವರು ಶಿವಾ

ಬದುಕಲ್ಲು ಬರಹದಲು ಜೀವನದಲೆಲ್ಲ ನಾನೆನುವರು ಶಿವಾ

 

ಭಜನೆಯ ಗೀಳಿಲ್ಲ ಮಾಲು ಸಂಸ್ಕೃತಿಗಳೇ ಎಲ್ಲಾ ಯಾಕೆ ಹೇಳು

ಬರು ಬರುತ್ತಾ ಕುಲಗೆಟ್ಟ ಸಮಾಜವ ಹುಟ್ಟು ಹಾಕುವರು ಶಿವಾ

 

ಹೊಲಸನಿಂದು ತುಳಿದವರೇ ಇನ್ನೊಬ್ಬರ ಸ್ವಚ್ಛ ಮಾಡುತಿಹರು

ಉಪ್ಪರಿಗೆಯ ಮೇಲಿದ್ದು ಕೆಳಗಿದ್ದವರಿಗೆ ಉಗಿಯುವರು ಶಿವಾ

 

ಉಟ್ಟಿಹ ಮೈಲಿಗೆಯಲ್ಲೇ ದೇವರ ಸಿರಿವಂತರು ಪೂಜಿಪರು

ಬಡತನವು ನಿನಗೆಂದೂ ಶಾಪವೆನುತ ಬಡಿಯುವರು ಶಿವಾ

 

ಜಂಭವೆನುವ ಗೆಜ್ಜೆಯನು ಕಟ್ಟಿರುವವರಿಗೆ ಏನೆನ್ನಲಿ ಈಶಾ

ಬುದ್ಧಿವಂತರಿಗೆ ಮಾತ್ರ ಹಿರಿಯರು ಸತ್ಯ ಹೇಳುವರು ಶಿವಾ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್