ಎರಡು ಗಝಲ್ ಗಳು.....
ಕವನ
ಗಝಲ್ ೧
ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ
ಸಾಯಲಿಲ್ಲ ನೋಡು ಎನುತ ಕಲ್ಲು ಹೊಡೆದು ಹೋಯಿತಲ್ಲ
ಕಾಯಲಿಲ್ಲ ಸಮಯ ಕೂಡ ದೂರ ದೂರ ಸಾಗಿತೇಕೆ
ಸೋಲು ಇರದ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ
ಬೆಟ್ಟಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲ್ಲಿ ನೋಡು
ತಾಳ ತಪ್ಪಿ ಬೀಳುವಾಗ ಅಲ್ಲೇ ಮಡಿದು ಹೋಯಿತಲ್ಲ
ಬೇಸರದಾ ಸುಳಿಯ ಒಳಗೆ ಸಿಲುಕಿ ನರಳಲೇಕೆ ಬಾಳು
ಮೌನದಾಗೆ ಇರುವ ವಿಷವು ಹೃದಯ ಅರೆದು ಹೋಯಿತಲ್ಲ
ರಾತ್ರಿಯಲ್ಲೆ ಕತ್ತಲಲ್ಲಿ ಪ್ರೀತಿ ಒಪ್ಪಿ ಇರಲು ಈಶ
ದ್ವೇಷ ವೇಷ ಕಳಚುತಿರೇ ಮೋಹ ಸರಿದು ಹೋಯಿತಲ್ಲ
***
ಗಝಲ್ ೨
ನನಸ ಮರೆತೆ ಕನಸು ಬಾರದೆ ಇಂದು
ಮನೆಗೆ ಬಂದೆ ದಿನಸಿ ತಾರದೆ ಇಂದು
ಹೊತ್ತು ಕಂತೆ ಚೆಲುವೆ ಸಿಗಲಿಲ್ಲ ಯಾಕೆ
ಮೌನ ಸೇರೆ ಊಟ ಸೇರದೆ ಇಂದು
ಭೂಮಿ ತಿರುಗುತಿರಲು ಅವನಿಗೆ ನಿದ್ರೆ
ಸಾಧ್ಯವೇ ಬದುಕು ಸೋರದೆ ಇಂದು
ಗತ್ತಿರದ ಮನುಜ ಸಪ್ಪೆ ಊಟದ ತರಹ
ಗೊತ್ತಿದ್ದೂ ಸೋತರೆ ಜೀವ ಚೀರದೆ ಇಂದು
ಬಾಳ ಸಂಘರ್ಷ ಬಾಗಿದ ಮರವು ಈಶ
ಹೊಟ್ಟೆ ಪಾಡಿಗೆ ಛಲವ ಮಾರದೆ ಇಂದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
