ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ಇಲ್ಲಿ ವಿಧಿಯೆ

ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ಇಲ್ಲಿ ವಿಧಿಯೆ

 

ಉಂಡಮನೆಗೆ ನನ್ನದೆಲ್ಲವನ್ನು ಸುರಿದರೂ ನೋಡುವವರೇ ಇಲ್ಲವಿಲ್ಲಿ

ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ ಕೇಳಿಲ್ಲ ಇಲ್ಲಿ ವಿಧಿಯೆ

 

ಆಶ್ರಯದ ಜಲವನ್ನು ಕುಡಿದು ಬದುಕುತ್ತಿರುವಂತೆ ನೋಡುತ್ತಿಹರಿಂದು

ಆಶ್ರಮದ ಹೊರಗಡೆ ನಿಂತು ಕಾಯುತ್ತಿದ್ದರೂ ಬೇಕಿಲ್ಲ ಇಲ್ಲಿ ವಿಧಿಯೆ

 

ಚಿಂತೆಗಳ ಸುಳಿಗೆ ಸಿಲುಕಿದವನಿಗೆ ಯಾರಾದರೂ ಅನ್ನನೀಡದೆ ಹೋಗುವರೆ

ಉಟ್ಟಬಟ್ಟೆಯಲ್ಲೆ ಹೊರಟಿದ್ದೇನೆ ಹೊರಗೆ ಅವರಿಗೂ ಸಾಕಲ್ಲ ಇಲ್ಲಿ ವಿಧಿಯೆ

 

ಬಾಳಿನ ಏಳುಬೀಳುಗಳಲ್ಲಿ ಕೊನೆಗೆ ಈಶ ಒಬ್ಬಂಟಿಯಾದದ್ದು ತಿಳಿಯಲೇ ಇಲ್ಲ

ಹೊರಡುವ ಕಾಲ ಹತ್ತಿರ ಬಂದಿದೆಯೆಂದು ತಿಳಿದು ಯಾರೂ ಕಚ್ಚಿಲ್ಲ ಇಲ್ಲಿ ವಿಧಿಯೆ

***

ಗಝಲ್ ೨

ಹರಸಿ ಸಾಗಿರಿ ಹಿರಿಯರೆಲ್ಲರು

ನಮಿಸಿ ಬಾಗಿರಿ ಕಿರಿಯರೆಲ್ಲರು

 

ಕೊಳೆಯ ತೊಳೆದು ಸಾಗಿರೆಲ್ಲರು

ವಿಷಯ ಕಲಿತು ಬಾಳಿರೆಲ್ಲರು

 

ನಿಶೆಲೆ ಇರದೆ ಬದುಕಿರೆಲ್ಲರು

ವಶಕೆ ಸಿಗದೆ ದುಡಿಯಿರೆಲ್ಲರು

 

ಕನಸ ದೇಶದಿ ಕಾಣಿರೆಲ್ಲರು

ನನಸ ಲೋಕದಿ ಹಾಡಿರೆಲ್ಲರು

 

ಮನದಿ ಈಶನ ಭಜಿಸಿರೆಲ್ಲರು

ಜಗಲಿ ಸಿಗುತ ಮಲಗಿರೆಲ್ಲರು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್