ಎರಡು ಗಝಲ್ ಗಳು
ಕವನ
ಗಝಲ್ ೧
ಮನವ ಕೆಣಕದಿರಿ ಛಲವು ಇದೆ
ಮೌನ ಕಲಕದಿರಿ ಗೆಲುವು ಇದೆ
ನಿತ್ಯವೂ ಮರಣ, ದುಃಖ ಯಾರಿಗೆ
ಪ್ರಾಯ ಸಂದರೂ ಒಲವು ಇದೆ
ಬೆಟ್ಟದಾ ತುದಿಯ ಕಲ್ಲಿನಂತಿರುವೆ
ಪ್ರೀತಿಯೇ ಕಾಣೆ ಬಲವು ಇದೆ
ರಾತ್ರಿ ಕತ್ತಲಿದ್ದರೂ ಸಂಚಾರವಿದೆ
ಬಿಸಿಲಿದ್ದರೂ ಬಾವಿಲಿ ಜಲವು ಇದೆ
ಕಸುಬು ಯಾವುದಾದರೇನು ಈಶ
ಸಾಕಿ ಸಲಹಲು ನೆಲವು ಇದೆ
***
ಗಝಲ್ ೨
ಜೀವ ನವ್ಯ ಹೆತ್ತ ಕಾವ್ಯ
ಭಾವ ಸುಪ್ತ ಸುತ್ತ ಕಾವ್ಯ
ಕಾಯ ಕಾಯ್ವ ಕಿಚ್ಚು ಬೇಕೆ
ಮಾಯ ಮೋಹ ಇತ್ತ ಕಾವ್ಯ
ದಾಹ ತುಂಬಿ ಹರ್ಷ ಬಿತ್ತು
ದೇಹ ನೇಹ ಹೊತ್ತ ಕಾವ್ಯ
ಬೇವ ಬಲ್ಲೆ ಚಿತ್ತ ಎಲ್ಲೆ
ಕಾವ ಬಿಲ್ಲ ಕಿತ್ತ ಕಾವ್ಯ
ಹಸ್ತ ನುಂಗಿ ಹೋಗೆ ಈಶ
ಸುಸ್ತು ತಾಸು ಅತ್ತ ಕಾವ್ಯ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
