ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಹೊಗಳಿಕೆಗಿಂದು ಮನವು ಉಬ್ಬದಿರೆ ನೆಮ್ಮದಿ

ತೆಗಳಿಕೆಗಿಂದು ತನುವು ಕೊರಗದಿರೆ ನೆಮ್ಮದಿ

 

ಬಯಲಲ್ಲಿ ಕುಳಿತು ಅತ್ತರೆ  ಪ್ರಯೋಜನ ಏನು 

ಮನೆಯಲ್ಲಿಯೆ ಇರುತ ಕುದಿಯದಿರೆ ನೆಮ್ಮದಿ

 

ಸಂಬಂಧ ಕೆಡಿಸಿಕೊಳ್ಳುವವರು ನಾವೇ ಅಲ್ಲವೆ

ಹಳಸಿರುವ ಅನ್ನವನಿಂದು ಬಳಸದಿರೆ ನೆಮ್ಮದಿ

 

ಪ್ರಶಸ್ತಿಯ ಹಿಂದೆ ಓಡಬೇಕೆಂಬ ನಿಯಮವಿದೆಯೆ

ಸಾಧನೆ ಗುರುತಿಸಲಿಲ್ಲವೆಂದು ಕುಸಿಯದಿರೆ ನೆಮ್ಮದಿ

 

ಮಾತು ಕೃತಿಲಿ ಯಾವತ್ತಿಗೂ ಸೌಮ್ಯತೆ ಇರಲಿ ಈಶಾ

ನಾನೇ ಎನ್ನುವ ಅಹಂಕಾರದಿ ಉರಿಯದಿರೆ ನೆಮ್ಮದಿ

***

ಗಝಲ್ ೨

ಕಷ್ಟ ಕೊಡದಿರು ಹೀಗೆ ಸುಖವು ಎಲ್ಲಿ 

ಬದುಕಿಗೆ ದಾರಿ ಇದೆ ಮನವು ಎಲ್ಲಿ 

 

ಕಪ್ಪ ಕೊಡದೆಲೆ ಇಂದು ಪ್ರಣಯವೆಲ್ಲಿ

ಬೆಪ್ಪನಾಗುತ ಸಾಗೆ ಧನವು ಎಲ್ಲಿ 

 

ಹೊತ್ತು ಕಳೆಯೆ ಪ್ರೇಯಸಿಯೇ ಬೇಕೇನು

ಕತ್ತು ಹಿಸುಕುವ ನಡೆಗೆ ತನುವು ಎಲ್ಲಿ

 

ಕಡಿದಿರುವ ಮರದ ರೂಪವು ಕಳೆದಿದೆ

ವಿರೂಪದ ನಡುವೆಯೂ ಬನವು ಎಲ್ಲಿ

 

ಪ್ರಕೃತಿ ಬೂದಿ ಮುಚ್ಚಿದ ಕೆಂಡ ಈಶ

ಜ್ವಾಲೆಗಳ ನಡುವೆ ಒಲವ ದಿನವು ಎಲ್ಲಿ 

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್