ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ತನುವೊಳಗಿನ ಮಾತು ಕೊನೆಯಾಗುತಿದೆ ದೇವ

ಮನದೊಳಗಿನ ಒಲವು ಮರೆಯಾಗುತಿದೆ ದೇವ

 

ಗಾಳಿ ಮೋಡವ ಕೊಂಡೊಯ್ದ ರೀತಿ ಸರಿಯೇ 

ಮೈನವೆಯ ನಡುವೆಯೇ ನೋವಾಗುತಿದೆ ದೇವ

 

ಒಸರಿಲ್ಲ ಹಸಿರಿಲ್ಲ ಒಣಗಿ ನಿಂತಿರುವ ಗಿಡವು

ಧರೆಯೆಲ್ಲ ಹೊತ್ತುತಲಿ ಬರಿದಾಗುತಿದೆ ದೇವ 

 

ಹುಡುಕಿದರು ಒಕ್ಕಿದರೂ ಕಾಳಿಲ್ಲ ಮನೆಯೊಳಗೆ 

ಬದುಕಿನಲಿ ಜೀವಿಸಲು ಹೊರೆಯಾಗುತಿದೆ ದೇವ

 

ಉಸಿರಿರುವ ಜೀವಿಯಲಿ ತ್ರಾಣವಿಹುದೇ ಈಶ

ಜೀವ ಜಲ ಅನ್ನವ ನೀಡು ಸಾವಾಗುತಿದೆ ದೇವ

***

ಗಝಲ್ ೨

ಬದುಕಿನ ಸವಿಯಾಂಗಿಪ್ಪ ದಾರಿಲಿ ನಡೆಸಲೆಡಿಗೋ ಕೂಸೇ 

ಹೃದಯಲಿಪ್ಪ ವಿಷವೆಲ್ಲವ ಹೆರ ಹಾಕಿಸಲೆಡಿಗೋ ಕೂಸೇ 

 

ಪ್ರೀತಿಯ ನಡಿಗೆಗೆ ಒಳ ಮನಸಿಲೀಗ ಭಾವನೆಂಗ ಇಕ್ಕೋ

ಹಿಡುಕೊಂಡಿದ್ದ ಕೈಯ ಬಿಡದ್ದೇ ಇಪ್ಪಗ ಕರೆಸಲೆಡಿಗೋ ಕೂಸೇ 

 

ಉಪ್ಪು ಖಾರ ಹುಳಿಯ ತಿಂಬ ದೇಹಲ್ಲಿ ಪಿತ್ತ ಬೇಕಾದಷ್ಟಿದ್ದು

ಒಪ್ಪಿಗೆ ಇಲ್ಲದ್ದೆ ನಿನ್ನೊಟ್ಟಿಂಗೆ ಸಂಗವ ಬಯಸಲೆಡಿಗೋ ಕೂಸೇ 

 

ಪ್ರಾಯದ ಬದುಕಿಲಿಪ್ಪ ಸೆಳೆತವ ಹೇಳಲೆ ಸಾಧ್ಯವೇ ಇಲ್ಲೆ ಎನಗೆ

ಹರುಷದ ಗೂಡಿಲಿದ್ದ ನನಸಿಪ್ಪ ಒಡಲಿನ ಕೆಡಿಸಲೆಡಿಗೋ ಕೂಸೇ 

 

ಬೆಪ್ಪುತಕ್ಕಡಿಗಳ ರೀತಿಯ ಹಾಂಗಿಪ್ಪ ಜೀವನವು ಬೇಡ ಈಶಾ

ಪ್ರಾಣದ ಸಖನ ಜೊತೆಯಾಟವ ಮರೆಸಲೆಡಿಗೋ ಕೂಸೇ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್