ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಜೀವನದಲ್ಲಿ ಕನಸುಗಳು ನಾವು ಹೇಳಿದಂತೇ ಇಲ್ಲ 

ಬದುಕಿನಲ್ಲಿಯ ನನಸುಗಳು ನಾವು ಕೇಳಿದಂತೇ ಇಲ್ಲ 

 

ಹುಟ್ಟು ಸಾವಿನ ನಡುವೆ ನಮಗೆ ದ್ವೇಷವೂ ಬೇಕೆ

ನ್ಯಾಯ ಸಿಗುವವರೆಗೆ ಸ್ಥೈರ್ಯ ಬೆಳೆದಂತೇ ಇಲ್ಲ 

 

ಬಲವಾದ ಪ್ರೀತಿಯೊಳು ಜಾತಿ ಬರುವುದೇ ಹೇಳು 

ಹೆತ್ತವರ ಮನ ನುಡಿಗೆ ಕೂಸು ಮಣಿದಂತೇ ಇಲ್ಲ 

 

ಉರಿಬಿಸಿಲ ನಡುವೆಯೇ ಮಳೆ ಹನಿಯು ಬರುವುದೇ 

ತಂಪಿರದ ಒಣ ನೆಲದ ಮಣ್ಣಿಂದು ಕುಣಿದಂತೇ ಇಲ್ಲ

 

ಸಿರಿವಂತರಾ ಮಾತು ಕತೆಗೇ ಇಂದು ಬೆಲೆ ಏಕೆ ಈಶ

ಬಡವರಲ್ಲಿಯ ಪಾಂಡಿತ್ಯ ಯಾರೂ ಪಡೆದಂತೇ ಇಲ್ಲ 

***

ಗಝಲ್ ೨

ಏಕಾಂತದಲ್ಲಿಯ  ನಡೆಯೆಲ್ಲವೂ ಚೆಲುವಿನಾಳದಲ್ಲೇ ಸಾಗಿದೆ

ಉತ್ತುಂಗದ ಘನತೆಯೆಲ್ಲವೂ ಲೋಕದಾಳದಲ್ಲೇ ಸಾಗಿದೆ

 

ಮೌನವಿಲ್ಲದ ಸಂಗಮ ವಾಸ್ತವ್ಯವಿಲ್ಲದ ತುಂಟತನವಲ್ಲವೆ

ಹೊಂಬೆಳಕಿನ ಸುಮವೆಲ್ಲವೂ ಒಲವಿನಾಳದಲ್ಲೇ ಸಾಗಿದೆ

 

ನೆನೆದವರ ಮನವದುವೆಲ್ಲವೂ ಮಧುರ ಪ್ರೀತಿಯ ಹೂವು

ಸ್ನೇಹದಾಳದ ನವೋಲ್ಲಾಸವೂ ಚಿಗುರಿನಾಳದಲ್ಲೇ ಸಾಗಿದೆ 

 

ಪ್ರೇಮದಾಳದ ಒಡನಾಟವೆಲ್ಲ ಬದುಕಿನಾಳದ ಬೆಲ್ಲವು

ಜೀವನದಾಳದ ಸೆಲೆಯೆಲ್ಲವೂ ಮನಸಿನಾಳದಲ್ಲೇ ಸಾಗಿದೆ

 

ಒನಪಿನಾಳದ ಚಿಗುರದು ಬದುಕಿನ ನನಸುಗಳು ಈಶಾ

ಹಂಬಲದಾಳದ ಸೊಬಗೆಲ್ಲವೂ ನೆನಪಿನಾಳದಲ್ಲೇ ಸಾಗಿದೆ 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್