ಎರಡು ಗಝಲ್ ಗಳು.....
೧.
ಉದ್ಧಾರತೆಗಾಗಿ ಶಿಕ್ಷಣವಲ್ಲ ಜಾಣ
ಬಾಳುವಿಕೆಗಾಗಿ ಜೀವನವಲ್ಲ ಜಾಣ
ಕೆರಳಿಸಲೆಂದೇ ಓದುವುದೆ ಹೇಳು
ಸಂಸ್ಕಾರಗಳೆಂದೂ ಕಠಿಣವಲ್ಲ ಜಾಣ
ಮಾತುಗಳೆಡೆಯೆ ಮೌನವನು ಕಾಣು
ಕೆಡುಕುಗಳೆಂದೂ ಜನುಮವಲ್ಲ ಜಾಣ
ಧರೆಯೊಳಗೆ ಒಳ್ಳೆಯದೆಲ್ಲಿದೆ ನೋಡು
ಪಡೆದಿರುವುದನು ಕಳೆದೆವಲ್ಲ ಜಾಣ
ಮನುಷ್ಯತ್ವವು ಮರೆಯುತ್ತಿವೆ ಈಶಾ
ಕೊಳಕುತನದೆ ಹೊಳೆದೆವಲ್ಲ ಜಾಣ
***
೨.
ಕೊಕ್ಕೆ ಹಾಕುವನ ನಡುವೆ ನಡೆದಿದ್ದೇವೆ ನಾವು
ಹಿಕ್ಕೆ ಜೇನೆಂಬುವನ ಕಡೆಯೆ ಅರಳಿದ್ದೇವೆ ನಾವು
ಸೊಕ್ಕು ಇದೆಯೆನುತ ಬಂದಂತೆ ಬರೆಯಬಾರದಲ್ಲವೆ
ಹಕ್ಕು ಎಲ್ಲರಿಗಿದೆಯೆಂಬುವನ ನಡೆ ನೋಡಿದ್ದೇವೆ ನಾವು
ಕತ್ತಿನಪಟ್ಟಿ ಅಲ್ಲಾಡಿಸುವನ ದೂರ ಮಾಡಿದರೊಳಿತು
ಕನ್ನಡವೇ ಸುಳ್ಳೆಂದು ಹೇಳುವನ ಕಾಡಿದ್ದೇವೆ ನಾವು
ತನ್ನ ಲೇಖನಿಗೆ ಮುಂಡಾಸು ಮೂವತ್ತು ಮಳ ಎನ್ನುವವನಿಗೆ ಏನನ್ನಲಿ
ಕದ್ದಿರುವ ಮಾಲುಗಳ ಬುಟ್ಟಿಯೊಳು ಹಾಕಿದವನ ಹಿಡಿದಿದ್ದೇವೆ ನಾವು
ಕಾಲಿಗೆ ಜೋಡು ಇಲ್ಲದೆಯೇ ನಡೆಯುತ ಕಲಿತವನು ಈಶಾ
ಕಾರಿನ ಬಣ್ಣಗಳ ಎಣಿಸುತ ನಡೆದವನೆಡೆ ಬೆಳೆದಿದ್ದೇವೆ ನಾವು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
