ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

೧.

ಬದುಕಿನ ನಡುವನ್ನು ಹಿಡಿದು ಕುಲುಕಿದವರಾರು

ಬಾಳಿನ ಎಲುಬನ್ನು ಮುರಿದು ಎಸೆದವರಾರು

 

ಚೆಲುವಿನ ಒಡಲನ್ನು ಕರಿದು ತಿಂದವರಾರು

ಗೆಲುವಿನ ಪದವನ್ನು ಎಸೆದು ಬಂದವರಾರು

 

ಬದುವಿನ ಬಾಗಿಲನ್ನು ಒಡೆದು ಹೋದವರಾರು

ಒಲವಿನ ಚಿಲಕವನ್ನು ಎಳೆದು ಮರಳಿದವರಾರು

 

ಚಿಂತನ ಚಿಲುಮೆಯನ್ನು ಕಡೆದು ಓಡಿದವರಾರು

ಕಂತಿನ ಪಾವತಿಯನ್ನು ಕಸಿದು ಹರಿದವರಾರು

 

ಪಾವನ ಈಶನನ್ನು ಬೆಸೆದು ತುಪ್ಪಿದವರಾರು

ಜೀವನ ಕೊಟ್ಟವನನ್ನು ಬಸಿದು ಹೋದವರಾರು

***

೨.

ಮೌನ ಹಕ್ಕಿಗಳು ಆಗಸದಲ್ಲಿ ಹೇಗೆ ಹಾರುತ್ತಿದೆ ನೋಡು

ಧ್ಯಾನ ಮಾಡುತಿಹ ಬಕಗಳು ಹಾಗೆ ಬಾಗುತ್ತಿದೆ ನೋಡು

 

ಬಾಳಲ್ಲಿ ದಕ್ಕಿದ ವಿಜಯಕ್ಕೆ ಲೆಕ್ಕವನು ಇಟ್ಟಿರುವಿಯಾ ಹೇಳು

ಪರಿಮಳವು ಇಲ್ಲದಿದ್ದರೂ ಮೂಗು ಮೂಸುತ್ತಿದೆ ನೋಡು 

 

ಮದನನ ಬಾಣದ ಹೊಡೆತಕ್ಕೆ ಸಿಲುಕಿ ನಲುಗಿ ಹೋದೆಯಾ ನೀನು

ಬೇಡವೆಂದರೂ ಒಡಲದು ಮೂರು ಹೆತ್ತು ನಲುಗುತ್ತಿದೆ ನೋಡು 

 

ಅದೃಷ್ಟದ ರೇಖೆಯನ್ನು ಹೊಲಸೆಂದು ಹೇಳಿದವರು ಯಾರು ಮನೆಯೊಳಗೆ

ಕನಸಲ್ಲಿಯೂ ಜೀವನದಲ್ಲಿ ನನಸುಗಳು ಹಾಯಾಗಿ ಮಲಗುತ್ತಿದೆ ನೋಡು 

 

ಪೂರ್ಣ ಚಂದ್ರನಂತೆ  ನನಗೆಂದೂ ನೀ ಬಾಳಲ್ಲಿ ಹೊಳೆಯುತ್ತಿರು ಈಶಾ

ಅಪ್ಪನು ನೆಟ್ಟಿರುವ ಆಲದ ಮರದಂತೆ ಬದುಕು ಬೆಳಗುತ್ತಿದೆ ನೋಡು 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್