ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

೧.

ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ

ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ

 

ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು

ತಲಗೇರಿದ ಅಮಲು ಜೀವಿತದ ಅವಧಿಯೇ ಹೀಂಗೇ ಇಳಿತ್ತು ಕೂಸೆ

 

ಗೊಂತ್ತಿಪ್ಪವರ ಕಾಲಿಂಗೆ ಮೂಗಿಲಿಯ ಹಾಂಗೇ ವರೆಸುವುದರ ನಿಲ್ಲಿಸಿದರೆ ಒಳ್ಳೆದು

ದಿನ ಕಳೆದಾಂಗೆ ಹೃದಯಲ್ಲಿ ಕೂದೊಂಡಿದ್ದ ಆತ್ಮವೂ ಕೂಗುತ್ತು ಕೂಸೆ

 

ಸ್ವಂತ ಬುದ್ಧಿಯ ಮುಕ್ಕಿತಿಂಬಾ ಕೆಲಸಕ್ಕೆ ಹೋಗದ್ದೇ ಇನ್ನಾದರೂ ಬದುಕುವುದರ ಕಲಿ

ಎಲ್ಲವೂ ಮುಗಿದ ಕ್ಷಣಲ್ಲಿ ಕಣ್ಣೀರಿಲಿ ಜೀವನ ತೊಳೆದರೆ ಕಚ್ಚುತ್ತು ಕೂಸೆ

 

ಮನಸ್ಸಿನೊಳಿಪ್ಪ ಪ್ರಾಮಾಣಿಕತೆ ಮೌನದೊಳಗಿನ ಜೀವಂತಿಕೆಲಿ ಸಾಗ್ಯೊಂಡಿರುತ್ತು ಈಶಾ

ಕಾರ್ಮೋಡವು ಕವಿಯದ್ದೇ ಒಳ್ಳೆಯ ತನವು ಉಳಿಯಲಿ ಯಾವತ್ತು ಕೂಸೆ

***

೨.

ಕೈಹಿಡಿಯುತ ತಿದ್ದಿಸುವರೆ ಎಲ್ಲಾ

ಬೆನ್ನ ಮೇಲೆ ಬಾರಿಸುವರೆ ಎಲ್ಲಾ

 

ಅಕ್ಷರಗಳ ಗೊಡವೆಯೇ ಬೇಡವೆಂದೆ ಏಕೆ

ನರಿಗಳಂತೆ ಇಂದು ಊಳಿಡುವರೆ ಎಲ್ಲಾ

 

ಸೌಂದರ್ಯದ ಮದ ಸುತ್ತೆಲ್ಲ ತುಂಬಿದೆ

ಕನ್ನಡಿಯಿಲ್ಲದೆಯೇ ಬದುಕುವರೆ ಎಲ್ಲಾ

 

ಹೇಳಲು ನಮ್ಮ ಸುತ್ತಲೂ ಏನು ಉಳಿದಿದೆ

ಬೆಳಕಿನ ನಡುವೆಯೇ ಬಡಿದಾಡುವರೆ ಎಲ್ಲಾ

 

ತುಂಬಿದ ಕೊಡದ ನೀರೇ ವಿಷವಾಗಿದೆ ಈಶಾ

ಗತ್ತುಗಳ ನಡುವೆಯೇ ಬರೆಯುವರೆ ಎಲ್ಲಾ

 

-ಹಾ ಮ ಸತೀಶ ಬೆಂಗಳೂರು

ಚಿತ್ರ್