ಎರಡು ಗಝಲ್ ಗಳು.....
ಕವನ
೧.
ಆಸೆಯೊಳಗಿನ ಕಣ್ಣುಗಳನ್ನು ಕಿತ್ತು ಎಸೆದುಬಿಡು
ಭಾಷೆಯೊಳಗಿನ ಬಣ್ಣಗಳನ್ನು ಕಿತ್ತು ಎಸೆದುಬಿಡು
ಉಳ್ಳವರೊಳಗಿನ ಆಟದಲ್ಲಿ ಗೆಲುವದು ಸಿಗದೆ
ನಿನ್ನೊಳಗಿನ ಮೋಹಗಳನ್ನು ಕಿತ್ತು ಎಸೆದುಬಿಡು
ಪ್ರೀತಿಯೊಳಗಿನ ಕಾಮನೆ ಮರೆಯಾಗಲಿ ತನುವೆ
ಪ್ರೇಮದೊಳಗಿನ ಮೌನಗಳನ್ನು ಕಿತ್ತು ಎಸೆದುಬಿಡು
ಕನಸಿನೊಳಗಿನ ತಂಗಾಳಿಯಂತೆ ಪ್ರೀತಿ ಇರಬಾರದು
ಸರಸದೊಳಗಿನ ಮುಳ್ಳುಗಳನ್ನು ಕಿತ್ತು ಎಸೆದುಬಿಡು
ರಶ್ಮಿಯೊಳಗಿನ ಹೃದಯದಿ ಒಲುಮೆಯಿದೆ ಈಶಾ
ನನಸಿನೊಳಗಿನ ಚಿಂತೆಗಳನ್ನು ಕಿತ್ತು ಎಸೆದುಬಿಡು
***
೨.
ಬರದಿರದ ಪ್ರೀತಿಗಳ ಸೆಳೆಯದಿರು ಚೆಲುವೆ
ಹಸಿದಿರದ ಪ್ರೇಮಗಳ ಬಳಸದಿರು ಚೆಲುವೆ
ಮತಿಯಿರದ ಮಾತುಗಳ ಕೇಳದಿರು ಚೆಲುವೆ
ಹಿತವಿರದ ಸಲಹೆಗಳ ಪಡೆಯದಿರು ಚೆಲುವೆ
ಕೊನೆಯಿರದ ಕನಸುಗಳ ಕಾಣದಿರು ಚೆಲುವೆ
ನನಸಿರದ ಬಂಧುಗಳ ನೋಡದಿರು ಚೆಲುವೆ
ಬಸಿರಿರದ ಒಡಲುಗಳ ಪಡೆಯದಿರು ಚೆಲುವೆ
ಉಸಿರಿರದ ಹೃದಯಗಳ ಬಯಸದಿರು ಚೆಲುವೆ
ಈಶನಿರದ ಪರ್ವತಗಳ ಹಿಡಿಯದಿರು ಚೆಲುವೆ
ಭಾಷೆಯಿರದ ತಪ್ಪುಗಳ ಮಾಡದಿರು ಚೆಲುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
