ಎರಡು ಗಝಲ್ ಗಳ ನೋಟ !

ಎರಡು ಗಝಲ್ ಗಳ ನೋಟ !

ಕವನ

ಗಝಲ್ - ೧

ಕಾಲಕ್ಕೆ ತಕ್ಕಂತೆ ಜೀವನದ ಹಾದಿಯ ಬೆಳೆಸೋಣವೇ ಗೆಳೆಯಾ

ತಾಳಮೇಳಕ್ಕೆ ಒಪ್ಪುವ ಬದುಕಿನ ದಾರಿಯ ರೂಪಿಸೋಣವೇ ಗೆಳೆಯಾ

 

ಸೋಲು ಗೆಲುವುಗಳ ನಡುವೆ ನಾವು ನಡೆಯಬೇಕು ನಿತ್ಯವೂ

ಸವಿಯಾದ ರೂಪಗಳನ್ನು ಒಲವಿನಲಿ ಗಳಿಸೋಣವೇ ಗೆಳೆಯಾ

 

ಬಾಳ ಪಥದಲ್ಲಿ ಮುನ್ನುಗ್ಗುವ ಗುಣ ಕಲ್ಪಿಸೋಣ ಎಂದು

ಮುಂದಡಿಯಿಡುವ ಛಲದಲ್ಲಿ ಮತ್ತೊಮ್ಮೆ ಶ್ರಮಿಸೋಣವೇ ಗೆಳೆಯಾ

 

ಗಡಿಯಾರದ ಮುಳ್ಳು ಮುಂದೆ ಸಾಗುತ್ತಿದೆ ಹಿಂದೆ ಸರಿಯದೆ

ನಮ್ಮೊಳಗಿನ ಕೆಟ್ಟ ಭಾವನೆಗಳ ಸರಿಸೋಣವೇ ಗೆಳೆಯಾ

 

ಕತ್ತಲು ಸರಿದಂತೆ ಬೆಳಕಿನ ಜೊತೆಯೇ ರತುನಳ ಭವಿಷ್ಯವಿದೆ

ಚೈತ್ರದ ಮಿಲನದ ಜೊತೆಗೆ ಪ್ರೇಮವನು ಸವಿಯೋಣವೇ ಗೆಳೆಯಾ

-ರತ್ನಾ ಕೆ ಭಟ್ ತಲಂಜೇರಿ

***

ಗಝಲ್-೨

ಮನವು ಕರಗಿ ಹೊಳೆದ ರೂಪ ಪಡೆದೆನಿಂದು ಗೆಳತಿಯೆ

ತನುವಿನೊಳಗೆ ಪ್ರೀತಿಯುಕ್ಕಿ ಹರಿಯಿತಿಂದು ಗೆಳತಿಯೆ

 

ಕನಸನೊಡೆದು ಹಾಡ ಹೇಳಿ ಮುಂದೆ ಹೋಗಿ  ಹಂಚಲು

ಚಿತ್ರ ಪಟದ ರೂಪದೆದುರು ಕುಣಿಯಿತಿಂದು ಗೆಳತಿಯೆ

 

ಜೀವ ಬರಡು ನೆಲದ ಮೇಲೆ ನಿಂತು ಮಾತು ಸಾಗಲು

ಬಿಟ್ಟು ಹೋದ ಮನೆಯ ಒಳಗೆ ಸಾಗಿಯಿಂದು ಗೆಳತಿಯೆ

 

ಮೌನ ಕಳೆದು ಹೋದ ಸಮಯ ಎಲ್ಲಿಯಿದ್ದೆ ಹೃದಯವೆ

ಮಾತು ಚಿಮ್ಮಿ ಪ್ರೀತಿಯನ್ನು ಸುರಿದೆನಿಂದು ಗೆಳತಿಯೆ

 

ಹೊಸತು ಭಾವ ಹೊಮ್ಮಿದಾಗ ಕನಸು ಬಂತು ಈಶಾ

ಸ್ನೇಹ ಪುಟಿದ ರೀತಿಯೊಳಗೆ ಸವಿದೆಯಿಂದು ಗೆಳತಿಯೆ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್