ಎರಡು ಮೋಹಕ ಕವನಗಳು

ಎರಡು ಮೋಹಕ ಕವನಗಳು

ಕವನ

ಹೆಣ್ಣು ಇವಳು ಕೋಟಿಗೊಬ್ಬಳು

ಹಂಸಿ ಇವಳು ಹೆಡಸುತದ ನೀರೆ

ಹೆಗಲಿಗೆ ಹೆಗಲುಕೊಟ್ಟು ನಡೆವ ಸೂರೆ

ಹಣಿವಿಲ್ಲದೆ ಮುನ್ನುಗ್ಗುವ ಧೀರೆ

ಹೊಮ್ಮನೊಳು ಮೆರೆವ ಶೂರೆ.!

 

ಹಂಜಕ್ಕಿಯ ಕುಡಿಸಿ ಸಲಹುವ ಮಾತೆ

ಹಂಜರದಂತೆ ಬಾಳಿದರು ದಿಟ್ಟತನದ ಸುತೆ

ಹಟತ್ಕಾರ ಅಡಗಿಸುತ್ತ ಮುನ್ನೆಡೆವ ದೇವತೆ

ಹತಪ್ರತಿಜ್ಞೆ ಮಾಡಿಯೆ ಗೆದ್ದ ಜ್ಞಾತೆ.!

 

ಹಕೀಕತ್ತುಗಳಿಗೆದರದ ಮನ

ಹಿಂಜರಿಯದೆ ಸಾಧಿಸುವಳು ಜಯನ

ಹೆತ್ತು ಹೊತ್ತು ಹಸಿವ ನೀಗಿಸೊ ಸುಮನ

ಹೊಂಗಳಿಯದೆ ನಡೆವ ನೇರತನ.!

 

ಹರಿವ ನದಿಯಂತೆ ಇವಳ ಜೀವನ

ಹೊನಹುಗಾರ್ತಿಯಾಗದೆ ಅಸ್ಮಿತ ಗಾಯನ

ಹೊಕ್ಕರಣಿಯಂತ ಒಡಲು ಸ್ವಚ್ಛಂದ ಗಾನ

ಹೊಗರದ ಸೌಮ್ಯತೆಯ ತೇರು ಇವಳ ಮನ.!

 

ಹೊಂಗಿರಣದಂತೆ ಆಂತರ್ಯದ ಹೊಳಪು

ಹೊಂಬಾಳೆಯ ನಳನಳಿಸುವ ಒನಪು

ಹೊನ್ನತೇರಂತೆ ಮಿನುಗುವ ಹುರುಪು

ಹೊಮ್ಮಿಂಚಂತೆ ಹೊಳೆವ ಸಿಂಧೂರ ಕೆಂಪು.!

 

ಹದಿಬದಿಯೂ ಸಂಸಾರದ ಸಾರಥಿ

ಹತ್ತುಂಗವ ಬೆಳೆಸುವ ಒಲವ ಜ್ಯೋತಿ

ಹಾಯಾತಿಯೊಳು ಪರರಿಗೆ ದುಡಿವ ಭಾತಿ

ಹೊನ್ನೊಡಲಲಿ ತುಂಬಿಹ ಒಲವಾರತಿ.!

 

ಹರಿನ್ಮಣಿಯಂತೆ ಸೊಬಗು ಸೌಭಾಗ್ಯದ ನುಡಿ

ಹೃದಯದೊಲವ ಸ್ನೇಹಕೆ ಇವಳೆ ಮುನ್ನುಡಿ

ಹಗಲಿರುಳ ಕನಸ ಕಾವ್ಯಕೆ ಕನ್ನಡಿ

ಹಸಿರ ಸಿರಿಯಂತೆ ಸರ್ವರಿಗೂ ಜೀವನಾಡಿ.!

 

ಹೆಣ್ಣೊಂದು ಮಹಾಕಾವ್ಯಕೆ ಪ್ರೇರಣೆ

ಹೆಂಪಿವಳು ಸೃಷ್ಠಿಯ ಸೃಷ್ಠಿ ಆಕರ್ಷಣೆ

ಹಲವು ನೋವುಗಳಿಗೆ ಔಷಧಿಯ ಉತ್ಕರ್ಷಣೆ

ಹೆಣ್ಣು ಸಹನೆ ತ್ಯಾಗಕೆ ಸಂಭಾಷಣೆ.!

-ಅಭಿಜ್ಞಾ ಪಿ ಎಮ್ ಗೌಡ

**************************

ಚೆಲುವಿನ ಗಿರಿ

ಚೆಂಗುಲಾಬಿಯಾಗಿ ಹೊಳೆವ ಸುಮವೆ

ಚಂದದಲಿ ಸೌಂದರ್ಯವನು ಬಣ್ಣಿಸುವೆ

ಚೆಂಬವಳವ ಧರಿಸಿದ ಸುಕೋಮಲೆ

ಚಂಗಣಗಿಲೆಯಾಗಿ ಹೊಳೆಯುವ ಚೆಲುವೆ||

 

ಲಲನಾ ಮಣಿ  ಸುಲೋಚನೆಯೆ

ಲಲಿತ ಕಲೆಗಳ ಸಾಕಾರ ರಮಣಿಯೆ

ಲಕುಮಿಯ ರೂಪವ ಧರಿಸುತಲಿ

ಲಯದಲಿ ಹಾಡನು ಗುನುಗುತಲಿ||

 

ವಿನಯದಿ ಪ್ರೀತಿಯ ಬೆರೆಯುತಲಿ

ವಿಮಗ್ನದಿ ಹೃದಯವ ಸೆಳೆಯುತಲಿ

ವಿಮಲ ಮನದೊಳು ಕೂಡುತಲಿ

ವಿಹರಿಣಿ ಹೃದಯವ ಕದಿಯುತಲಿ||

 

ನಯನದಿ ಒಲವಿನ ನೋಟವಿದು

ನಳಿನಿಯೆ ಜ್ಯೋತಿಯ ಹೊಳಪಿನಲಿ

ನವರಸ ಮಿಳಿತಿಹ ಕಲೆಯಲ್ಲಿ

ನಭವದು ನಾಚುತಿಹೆ ಬೆಡಗಿನಲಿ||

 

ಗಿರಿಗದು ತೋಷವು ಮೂಡುತಿದೆ

ಗಿಳಿಗಳು ಮುದದಲಿ ಉಲಿಯುತಿವೆ

ಗಿಡಮರ ನಲಿಯುತ ಕಾನನದಲಿ

ಗೀತವ ಹಾಡಿದೆ ತಂಗಾಳಿಯಲಿ||

 

ರಿಷಿಯ ತೆರದಲಿ ಬಣ್ಣಿಸುವೆ

ರಿಮಣಿಯ ನಾಟ್ಯವ ಮೆಚ್ಚಿಸುವೆ

ರಿಗ್ಗವಣಿ ಬಾರಿಸಿ ಎದೆಯಲಿ

ರಿಂಗಣವಾಗಿದೆ ಹೃದಯದಲಿ||

-ಶಂಕರಾನಂದ ಹೆಬ್ಬಾಳ 

 

ಚಿತ್ರ್