ಎರಡು ಲೇಖನಗಳು--ಹಾಗೂ ಶಾರುಖ್ ನ ಖಾನ್ ಹಂಗಾಮ...
ಇದೇ ವಾರದಲ್ಲಿ ವಿಕ ದಲ್ಲಿ ಶಾರುಖ್ ನ ಹೊಸ ಚಿತ್ರದ ಬಗ್ಗೆ ಎರಡು ಲೇಖನ ಬಂದಿವೆ. ಅದನ್ನು
ಎಲ್ಲರೂ ಓದಿಯೇ ಇರುತ್ತಾರೆ ಮತ್ತೆ ಆ ಬಗ್ಗೆ ವಿವರ ಅನಗತ್ಯ. ಆದರೆ ಎರಡೂ ಲೇಖನಗಳಲ್ಲಿ ಸಾಮ್ಯ ಇದೆ ಅಂದರೆ ಈಗಾಗಲೇ
ಆ ಚಿತ್ರದ ಬಗ್ಗೆ ಒಂಥರಾ ಅತಿರಂಜಿತ ಉತ್ಸಾಹ ಇಂಗ್ಲೀಷ ಮಾಧ್ಯಮದವ್ರು ಮಾಡಿದ್ರು ಈ ಉರಿಯುವ ಬೆಂಕಿಗೆ ಠಾಕ್ರೆ ಅಂಥವರು
ತುಪ್ಪ ಸುರಿದಿದ್ರು. ನಾ ಇನ್ನೂ ಚಿತ್ರ ನೋಡಿಲ್ಲ ಕಥೆ ಬಗ್ಗೆ ಕೇಳಿದ ಮೇಲೆ ನೋಡುವ ಉಮೇದಿಯೂ ಇಲ್ಲ. ನಾವು ಅದನ್ನೇ
ಹೇಳೋದು ಎಲ್ಲ ಮುಸಲ್ಮಾನರೂ ಉಗ್ರರಲ್ಲ. ಆದರೆ ಎಲ್ಲೋ ಒಂದು ಕಡೆ ನಿಧಾನವಾಗಿ ಉಗ್ರರ ನಿಲುವುಗಳಿಗೆ ಈ ಖಾನ್ ಗಳು
ಪ್ರಭಾವಕ್ಕೆ ಒಳಗೊಳ್ಳುತ್ತಿದ್ದಾರೆ. ಈ ದೇಶದಲ್ಲಿ ಆ ಸಮುದಾಯದ ಬಗ್ಗೆ ಏನೇ ಹೇಳಿದರೂ ಮತೀಯವಾದಿ ಅಂತ ನಿರ್ಧರಿಸುತ್ತಾರೆ
ಪಾಪ ಅವರು ಹಾಕ್ಕೊಳ್ಳೋ ಚಾಳೀಸಿನ ದೋಷ ಅದು.
ಈ ಚಿತ್ರ ಬಿಡುಗಡೆ ಮೊದಲು ಅದೆಷ್ಟು ಗದ್ಲ ಏನು ಕಥಿ..? ಬಿಡುಗಡೆಯಾದ ದಿನಾ ಸಿನೇಮಾ ನೋಡಲು ಹೋದವರನ್ನು ಹಿರೋ
ಎಂಬಂತೆ ಬಿಂಬಿಸಲಾಯಿತು. ಈ ಬಗೆಯ ಚಿತ್ರಗಳಿಗೆ ಫಾಕ್ಸ ಎಂಬೋ ಕಂಪನಿ ಹಿಂದಿದೆ ಇದೇ ಹಾಸ್ಯಾಸ್ಪದ ವಿಷಯ. ಯಾರೋ
ಹೇಳ್ತಾ ಇದ್ರು ಇದು " ದೇಶಭಕ್ತಿ"ಉಕ್ಕಿಸೋ ಚಿತ್ರ ಅಂತ, ಆದ್ರೆ ಯಾವ ದೇಶದ ಭಕ್ತಿ ಇದು ಪ್ರಶ್ನೆ. ಪಾಕ್ ಆಟಗಾರರ ಬಗ್ಗೆ
ಶಾರುಖಗೆ ಏನೇ ಅಭಿಪ್ರಾಯ ಇರಲಿ ಅದು ವೈಯುಕ್ತಿಕ ಆದರೆ ಎಲ್ಲ ಮುಸಲ್ಮಾನರು ಉಗ್ರರಲ್ಲ ಇದನ್ನು ಹೇಳೋಕೆ ಬೇರೆ
ಸುಲಭದ ದಾರಿ ಇದ್ವು. ಖಂಡಿತ ಕರಣ್-ಶಾರುಖ ಜೋಡಿ ನನ್ನಂತಹವರಿಗೆ ನಿರಾಶೆ ಮಾಡಿದೆ. ವಾಸ್ತವತೆಗೆ ಹತ್ತಿರವಾದ ಚಿತ್ರ
ಬರಲಿ ಇದೇ ಆಶೆ.