ಎರಡು ಶಿಶುಗೀತೆಗಳು

ಎರಡು ಶಿಶುಗೀತೆಗಳು

ಕವನ

*ಬಣ್ಣದ ಹೂಗಳು*

ಮಣ್ಣಲಿ ನಿಂತಿಹ

ಸಣ್ಣನೆ ಗಿಡಗಳು

ತಣ್ಣನೆ ಗಾಳಿಗೆ ತೂಗುತಲಿ |

ಬಣ್ಣದ ಹೂಗಳು

ಕಣ್ಣನು ಸೆಳೆದವು

ಚಿಣ್ಣರ ಮನವನು ನಿಮಿಷದಲಿ||

 

ನೋಡುತ ಹೂಬನ

ಹಾಡಿತು ತನುಮನ

ಕಾಡಿತು ಮಕ್ಕಳ ಹೃದಯವದು

ನೋಡುತ ನೋಡುತ

ಬಾಡಲು ಹೂಗಳು

ಕೇಡರಿಯದ ಮನ ಕೊರಗಿರಲು ||

 

ನೇಸರ ಬಿರುಸಿಲೆ

ಬೀಸಿದ ಕಿರಣವ

ಮಾಸಿದ ಹೂಬನ ಮೇಲೆಲ್ಲ

ಕೂಸಿನ ಕಂಗಳು

ಸೂಸುವ ಹೊಳಪಂ

ಮಾಸಿದ ಹೂಗಳು ಬಿರಿಯುತಲಿ||

 

ಕುಣಿದರು ಚಿಣ್ಣರು

ಧಣಿಗಳು ಗುಣದಲಿ

ತಣಿದರು ಮನದಲಿ ಹರ್ಷದಲಿ

ಗಣಿಗಳು ವಿಸ್ಮಯ

ಮಣಿಗಳು ಮುತ್ತಿನ

ಮಣಿಯದ ಕನ್ನಡ ನಾಡಿನಲಿ ||

 

-*ಶ್ರೀ ಈರಪ್ಪ ಬಿಜಲಿ* 

*****

ಬಣ್ಣದ ಹೂಗಳು

ಚಿಣ್ಣರೆ ಬನ್ನಿರಿ ನೋಡಿರಿ ಹೂಗಳ

ಮಣ್ಣಿನ ವಾಸನೆ ಬೀರುತಲಿ

ಬಣ್ಣದ ಕುಸುಮವು ಚೆಲ್ಲಿದೆ ನಗುವನು

ನುಣ್ಣಗೆ ಬೆಳ್ಳೆಗೆ ಕಾಣುತಲಿ||

 

ಹಸಿರಿನ ಅಂಗಳ ತುಂಬಿದೆ ಸುಮದಲಿ

ಕಸವರ ಹೊಳಪದು ಮಿಂಚಂತೆ

ಸಸಿಗಳ ಸಾಲದು ಹಂದರ ಹಾಕಿವೆ

ಬಸಿರಲಿ ಮಿರುಗುವ ವನದಂತೆ||

 

ಮಕ್ಕಳೆ ನೋಡಿರಿ ಹೂಗಳ ಹಾರವು

ಚಕ್ಕನೆ ಕಂಡಿವೆ ಹಾವಂತೆ

ಪಕ್ಕನೆ ಸುರಿಯುವ ಮಳೆಯಲಿ ಅರಳುವ

ದಕ್ಕಿಸಿ ಕೊಳ್ಳುವ ಮರದಂತೆ||

 

ಆಟವ ಆಡುತ ಸುಮವನು ಕೀಳುತ

ನೋಟದಿ ಬಿಮ್ಮನೆ ಬೀರುತಿವೆ

ಕೂಟದಿ ಕಣ್ಮನ ಸೆಳೆಯುವ ಕುಸುಮವು

ಸಾಟಿಯು ಇಲ್ಲದೆ ಬೀಗುತಿವೆ||

 

ದೇವರ ಪೂಜೆಗೆ ಪ್ರಥಮದಿ ವಂದಿತ

ಭಾವದ ಮೇಳವೆ ಹರಿಸುತಿದೆ

ಜೀವದ ಭಾಗದಿ ಸುಂದರ ಕನಸವು

ಪಾವನ ಗಂಗೆಯೆ ಸುರಿಯುತಿದೆ||

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್