ಎರಡು ಸೊಗಸಾದ ಗಝಲ್ ಗಳು
ತಿದ್ದಿಕೊ ಒಳ ಬುದ್ದಿಯನಿಂದು ಸದ್ದಿಲ್ಲದೆ ಮಾನವ
ಕರೆದುಕೊ ಹೊಸ ಹುರುಪಲಿಯಿಂದು ಸದ್ದಿಲ್ಲದೆ ಮಾನವ
ತೆರೆದುಕೊ ಯುಗ ಯುಗಾಂತರಗಳಿಗೆ ನಿನ್ನದೆನ್ನುವ ಚಿಂತನೆ
ಪಡೆದುಕೊ ಗಾನ ಮಾಧುರ್ಯವನಿಂದು ಸದ್ದಿಲ್ಲದೆ ಮಾನವ
ಬಿದ್ದುಕೊ ಅತಿಯಾದ ಆಸೆಗಳನ್ನು ಬಿಟ್ಟು ಹೋಗುತ ಜೊತೆಯಲಿ
ನಡೆದುಕೊ ದಾರಿಯ ಸವೆಸುತಲಿಂದು ಸದ್ದಿಲ್ಲದೆ ಮಾನವ
ಮೆತ್ತಿಕೊ ಜೀವದ ಭಯವನ್ನು ದೂಡುತ ಸರಿದಾರಿಯೊಳು ಸಾಗುತಲಿ
ಮುತ್ತಿಕೊ ಹೊಸತು ಖುಷಿಯಲಿಂದು ಸದ್ದಿಲ್ಲದೆ ಮಾನವ
ಹೊತ್ತುಕೊ ಈಶನು ಕಟ್ಟಿದ ಸೌಧವನು ಸದಾ ಮುನ್ನಡೆಸುತಲಿ
ತಬ್ಬಿಕೊ ಪ್ರೇಮದ ಸವಿಯಲಿಂದು ಸದ್ದಿಲ್ಲದೆ ಮಾನವ
***
ಬಾಳುವೆ ಯಾವತ್ತೂ ನಡೆಯಿತಲ್ಲ ಸಾಕಿ
ಯಾನವು ದಿನವೂ ಹಾಡಾಯಿತಲ್ಲ ಸಾಕಿ
ಜೀವನದ ಪಯಣದಲ್ಲಿ ಮುಪ್ಪಿಂದೇ ಜಾರಿತಲ್ಲವೆ
ಚೇತನದ ಜೊತೆಗೆ ಬಾಳಾಯಿತಲ್ಲ ಸಾಕಿ
ಬದುಕಿನ ಸಂವತ್ಸರದಲ್ಲಿ ಮೌನವು ಇಣುಕಿತೆ
ಯೌವನದ ಸೆಳೆತವದು ಕಳೆಯಿತಲ್ಲ ಸಾಕಿ
ಗೊಂಬೆಯಾಟವು ಕಳೆದ ದಿನಗಳ ನೆನಪಿಸಿತೆ
ಉಪ್ಪರಿಗೆಯ ಮಂಚವದು ಸೆಳೆಯಿತಲ್ಲ ಸಾಕಿ
ಈಶನು ಉಯ್ಯಾಲೆಯನು ತೂಗಿದ ಸ್ಥಳದಲ್ಲಿರುವೆಯೇನು
ಪ್ರೀತಿಪ್ರೇಮವು ಉಸಿರೊಳು ಬೆರೆಯಿತಲ್ಲ ಸಾಕಿ
-ಹಾ ಮ ಸತೀಶ
