ಎರಡು ಹನಿಗಳು...
ಕವನ
ಎರಡು ಹನಿಗಳು...
ಕೊಳಲ ನುಡಿಸಿ
ಮೋಹಗೊಳಿಸಿ
ಪಡೆದನಲ್ಲ ರಾಧೆಯ
ಆ ತುಂಟನಾದ ಗೊಲ್ಲ...!
ಯಾರೋ ಬರೆದ ಹಾಡಿಗೆ
ಕೊರಳ ಕೊಟ್ಟು ಹಾಡಿ
ಮತ್ತೆ ಮೋಡಿ ಮಾಡಿ
ಪಡೆದ ನನ್ನ ನಲ್ಲ
ನನ್ನ ತುಟಿ ಮತ್ತು ಗಲ್ಲ...!
****
ಆ ಶ್ಯಾಮನಲ್ಲಿ ರಾಮನಿರುವನೋ
ಇಲ್ಲವೋ ತಿಳಿಯದು!
ಆದರೆ ...
ಬೀದಿ ಕೊನೇ ಮನೆಯ
ರಾಧೆಯಲ್ಲಿ ಮನವಿಟ್ಟ
ನನ್ನ ಈ ರಾಮನಲ್ಲಿ
ಶ್ಯಾಮನಿದ್ದಾನೆ!
-ಮಾಲು
Comments
ಮನ ಸೆಳೆದ ನಲ್ಲ
ಮನ ಸೆಳೆದ ನಲ್ಲ
ಗೆದ್ದನಲ್ಲ
ಆ ಗೊಲ್ಲ...!!
ಸುಂದರ ಸಾಲುಗಳ ಬರಹ ಇಷ್ಟ ಆಯ್ತು..
ಗೊಲ್ಲ ಸಾಮಾನ್ಯ -ನಲ್ಲ ..!!
ಶುಭವಾಗಲಿ.
\।
In reply to ಮನ ಸೆಳೆದ ನಲ್ಲ by venkatb83
ನನ್ನ ಪದ್ಯಗಳು ನಿಮಗೆಲ್ಲ
ನನ್ನ ಪದ್ಯಗಳು ನಿಮಗೆಲ್ಲ ಇಷ್ಟವೆನಿಸಿದ್ದು ಸಂತಸ ತಂದಿದೆ.
ರಾಮ ರಾಮ!:) ಮಾಲು ಅವರೆ, ತಮ್ಮ
ರಾಮ ರಾಮ!:) ಮಾಲು ಅವರೆ, ತಮ್ಮ ಪುಟಾಣಿ ಕವಿತೆಗಳಲ್ಲಿ ನವಿರಾದ ಹಾಸ್ಯವಿದೆ.ಚೆನ್ನಾಗಿದೆ.