ಎರಡು ಹನಿಗಳು
ಕವನ
ಬೆಳಗೆದ್ದು
ಪೂಜಿಸಲು
ಕಾದಿರುವೆ
ಭಾಸ್ಕರನೆ..
ಮೋಡಗಳು
ನಿನ್ನ
ಮರೆ ಮಾಡಿ
ಕೂತಿರಲು..
ಪಶು ಪಕ್ಷಿಗಳು
ನಿನ್ನ ಆಗಮನಕೆ
ಕಾದಿರಲು..
ದುಷ್ಟರೂ
ಅಟ್ಟಹಾಸವ
ಮೆರೆದಿರಲು..
ಶಿಷ್ಟರ ರಕ್ಷಕನೇ
ಮತ್ತೊಮ್ಮೆ
ಧರೆಗಿಳಿದು ಬಾರೋ..
***
ಬಾನಲಿ
ಕರಿಮುಗಿಲ
ಕಟ್ಟಿರಲು
ಸುಳಿಗಾಳಿ
ಜೋರಾಗಿ
ಬೀಸಿರಲು
ಸಾಗರದ
ತುಂಬೆಲ್ಲ
ಅಲೆಗಳೆದ್ದಿರಲು
ಹವಾಮಾನ
ಇಲಾಖೆ
ಗಾಳಿಯ
ಮುನ್ಸೂಚನೆ
ಕೊಟ್ಟಿರಲು..
ಮೀನುಗಾರಿಕೆ
ಸಂಘ,ಇಲಾಖೆಗಳು
ಎಚ್ಚರಿಕೆ
ನೀಡಿರಲು..
ಮೀನುಗಾರ
ಸಮುದ್ರಕ್ಕೆ
ಇಳಿದಿರಲು..
ಹುಂಬು
ಧೈರ್ಯವ
ಬಿಟ್ಟು
ನಾವೆಲ್ಲರೂ
ದಡಕ್ಕೆ
ತೆರಳಬೇಕು..
***
-’ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ
ಚಿತ್ರ್
