ಎರಡು ಹಿತನುಡಿಗಳು

ಎರಡು ಹಿತನುಡಿಗಳು

ಚಾಣಕ್ಯ ನೀತಿ

ನಿಜವಾದ ಬಡವನೆಂದರೆ ಸರಿಯಾದ ವಿದ್ಯೆ ಕಲಿತು,ಸನ್ಮಾರ್ಗದಲ್ಲಿ ನಡೆಯದವರು.ಹಣವಿಲ್ಲದವರನ್ನೆಲ್ಲ ಒಟ್ಟು ಸೇರಿಸಿ ನಿರ್ಗತಿಕರೆಂಬ ಹಣೆಪಟ್ಟಿ ನಾವು ಕಟ್ಟಬಾರದು. ಬಡತನ-ಸಿರಿತನ ಎಂಬುದು ಯಾವತ್ತೂ ಶಾಶ್ವತವಲ್ಲ. ಅವು ಒಂದಕ್ಕೊಂದು ವೈರಿಗಳು. ವಿದ್ಯೆ, ವಿದ್ವತ್ ಎರಡೂ ದೇವಲೋಕದ ಕಾಮಧೇನುವಿನಂತೆ. ಆಪತ್ಕಾಲದಲ್ಲಿ ನಮ್ಮನ್ನು ರಕ್ಷಿಸುತ್ತದೆ. ಹೊಟ್ಟೆ ಪಾಡಿಗೆ ವಿದ್ಯೆ ಬೇಕು, ಜೊತೆಗೆ ತಾನೂ *ಬೆಳಕನ್ನು*ಪಡೆದು ಇತರರಿಗೂ ಬೆಳಕು ನೀಡುವ ಜ್ಞಾನವೇ ವಿದ್ಯೆ.

***

ಸರ್ವಜ್ಞ ನುಡಿ

ಕಣ್ಣು ನಾಲಗೆ ಮನವು ತನ್ನದೆಂದೆನಬೇಡ ಅನ್ಯರು ಕೊಂದರೆನಬೇಡ ಇವು ಮೂರು ತನ್ನ ಕೊಲ್ಲುವುವು ಸರ್ವಜ್ಞ//

ಮಾನವನ ಗುಣಶೀಲಗಳಿಗೆ ಅವನೇ ಕಾರಣ. ಬೇರೆಯವರಿಗೆ ಬೊಟ್ಟು ಮಾಡಿ ತೋರಿಸುವ ಅಭ್ಯಾಸ ಆಗಿಹೋಗಿದೆ ಅವನಿಗೆ. ತನ್ನ *ನಡೆ-ನುಡಿ*ಗಳಿಂದಲೇ ಅವನ ಚಾರಿತ್ರ್ಯ ನಿರ್ಧಾರವಾಗುತ್ತದೆ. ಇಂದ್ರಿಯ ಚಪಲತೆಯಿಂದ ತುಂಬಿ ಮಾಡಬಾರದ್ದನ್ನೆಲ್ಲ ಮಾಡಲು ಮುಂದಾಗುತ್ತಾನೆ. ಹೀಗೆ ತನ್ನ ಬದುಕು ಸುಂದರವಾಗಿಸುವುದು, ನರಕಸದೃಶವಾಗಿಸುವುದು ತನ್ನ*ಕಣ್ಣು, ಕಿವಿ, ನಾಲಗೆ*ಯಿಂದ.

-ರತ್ನಾ ಭಟ್ ತಲಂಜೇರಿ

(ಸಂಗ್ರಹ)