ಎರೆಡು ಪ್ರಸಂಗಗಳು

ಎರೆಡು ಪ್ರಸಂಗಗಳು

ಬರಹ

ಪ್ರಸಂಗ ಒಂದು
ಮೀನಾ : "ನಿಶಾ ನೋಡು ಈಗಲೆ ಹೇಳ್ತಾ ಇದೀನಿ ದಯವಿಟ್ಟು ನನ್ನ ಪ್ರೇಮ್ ಮಧ್ಯ ಬರ್ಬೇಡಾ. ನಾನು ಪ್ರೇಮ್‍ನ್ ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸ್ತಾ ಇದೀನಿ"
ನಿಶಾ:" ನೀನು ಪ್ರೀತಿಸ್ತಿದ್ರೆ ನಾನೇನ್ಮಾಡಲಿ . ನಾನು ಅವನ್ನ ಮನಸ್ತುಂಬಾ ತುಂಬ್ಕೊಂಡು ಲವ್ ಮಾಡ್ತಾ ಇದ್ದೇನೆ. ನಂಗೆ ಅವನಿದ್ರೆ ಕ್ಲಾಸ್ ಕಾಲೇಜ್ ಕೊನೆಗೆ ಪ್ರಾಣ ಸ್ನೇಹಿತೆ ನೀನೂ ಸಹಾ ಬೇಡ ಅಂತ ಅನ್ನಿಸ್ತಿದೆ. ನೀನೆ ನಂಗೋಸ್ಕರ ಯಾಕೆ ತ್ಯಾಗ ಮಾಡ್ಬಾರದು."
ಮೀನಾ : "ಆಗಲ್ಲ ಕಣೆ ನಂಗೆ ಅವನೇ ಪ್ರಪಂಚ. ಅವನ್ ಗಾಡೀಲಿ ಸುತ್ತುವಾಗ ಅವನ ಹಾಕ್ಕೋಳೊ ಶರ್ಟ್ ಜೀನ್ಸ್ ಪ್ಯಾಂಟ್ ಕೊನೆಗೆ ಹಾಕೊಳೊ ಸೆಂಟ್‍ನ ನೆನಪಿಸ್ಕೊಳ್ವಾಗಲೆಲ್ಲಾ ಮೈ ಜುಮ್ ಅನ್ನುತ್ತೆ . ಅವನದೇ ಕನಸು ನಂಗೆ ಗೊತ್ತಾ"
ನಿಶಾ:" ನಂಗೂ ಅಷ್ಟೆ ಅವನು ಕೆಲಸ ಮಾಡ್ತಿರೋ ಆ ದೊಡ್ಡ ಐಟಿ ಕಂಪೆನಿ ಮುಂದೆ ಹೋದಾಗಲೆಲ್ಲಾ ಅವನನ್ನೇ ನೋಡಿದ ಹಾಗಾಗಿ ಮತ್ತು ಬರುತ್ತ್ತೆ . ನಂಗಂತೂ ಅವನಿಲ್ಲದೇ ಇದ್ರೆ ಜೀವನಾನೆ ಇಲ್ಲ "
ಮೀನಾ : "ನೋಡು ಯಾವತ್ತಿದ್ರೂ ಅವನು ನನ್ನೋನೆ. ಸುಮ್ನೆ ನಮ್ಮ ದಾರಿಗೆ ಅಡ್ಡ ಬರಬೇಡ. "
ನಿಶಾ : "ನೋಡೋಣ . ಅವನು ಯಾರಿಗೆ ಸೋಲ್ತಾನೆ ಅಂತ. ನಾನೆ ಅವನ ರಾಣಿ"
ಮೀನಾ : "ನೋಡೋಣಾ ನಡಿ"

ಪ್ರಸಂಗ ಎರೆಡು : ಮೂರು ತಿಂಗಳ ನಂತರ
ಮೀನಾ : " ನಿಶಾ ನಾನೊಂದು ನಿರ್ಧಾರ ಮಾಡಿದೀನಿ . ಸುಮ್ನೆ ನೆನ್ನೆ ಬಂದವನಿಗೋಸ್ಕರ ನಾವ್ಯಾಕೆ ಕಿತ್ತಾಡಬೇಕು. ನಾನು ಪ್ರೇಮ್ನ್ ನಿನ್ಗೆ ಬಿಟ್ಕೊಡ್ತೀನಿ"
ನಿಶಾ : "ಏ ನಾನು ಅದೇ ನಿರ್ಧಾರ ಮಾಡಿದೀನಿ . ನನ್ನ ಸ್ನೇಹಿತೆ ನೀನು . ನೀನೆ ಪ್ರೇಮ್‍ನ ಮದುವೆ ಮಾಡಿಕೋ"
ಮೀನಾ :" ಇಲ್ಲ ನೀನೆ"
ನಿಶಾ : "ಇಲ್ಲ ನೀನೆ ಮಾಡ್ಕೋ. ನಂಗಂತೂ ಅವನು ಬೇಡವೇ ಬೇಡ. ಪಾಪ ಕಂಪೆನಿಯಿಂದ ಮನೆಗೆ ಕಳ್ಸಿದಾರೆ . ಅವನಿಗೆ ನಿನ್ನ ಥರಾ ಸಂಗಾತಿ ಬೇಕೆ ಬೇಕು ಈ ಕಷ್ಟದ ಸ್ಥಿತಿಯಲ್ಲಿ"
ಮೀನಾ : "ಬೇಡ ನಿಶಾ . ಅವನು ಪಾಪ ನೆನ್ನೆ ಗಾಡಿ ಬೇರೆ ಮಾರಿಕೊಂಡ . ಅವನ ಬಟ್ಟೆ , ಸೆಂಟು ಎಲ್ಲ ಕಡಿಮೆದೇ ಹಾಕ್ಕೊತಾನೆ. ನೀನು ಎಲ್ಲಾ ಅಡ್ಜಸ್ಟ್ ಮಾಡ್ಕೋತಿಯಾ . ನಾನಂತೂ ಅವನಿಗೆ ಪ್ರಪೋಸ್ ಮಾಡಲ್ಲ"
ನಿಶಾ: "ಬೇಕಿಲ್ಲ . ನೀನೇನಾದ್ರೂ ಮಾಡ್ಕೋ . ಅವನು ಬರೋದ್ರೊಳಗೆ ಇಲ್ಲಿಂದ ಜಾಗ ಖಾಲಿ ಮಾಡ್ತೀನಿ ನಾನು"
ಮೀನಾ : "ನಾನು ಅಷ್ಟೆ . ನಂಗೆ ಬೇರೆ ಕ್ಲಾಸ್ ಇದೆ ಸುಮ್ನ್ಗೆ ತಲೆ ತಿಂತಾನೆ . ಅವಂದೇ ಕಷ್ಟ ಹೇಳ್ಕೊಂತಾನೆ . "
ನಿಷಾ : ಬಾಯ್
ಮೀನಾ ; ಬಾಯ್