ಎರೆಹುಳು ಏನು ಮಾಡುತ್ತೆ ಗೊತ್ತಾ?

ಎರೆಹುಳು ಏನು ಮಾಡುತ್ತೆ ಗೊತ್ತಾ?

ನಿಮಗೆ ಆಶ್ಚರ್ಯ ಆಗಬಹುದು, ಒಂದು ಅತ್ಯಂತ ಫಲವತ್ತಾದ ಜಮೀನಿನ ಕೆಳಗೆ ಒಂದು ಚದರ ಭೂಮಿಯಲ್ಲಿ 16 ಎರೆಹುಳುಗಳು ಇರುತ್ತವೆ! ಮಣ್ಣಿನ ಅಡಿಯಲ್ಲಿ ಬಿಡುವಿಲ್ಲದೇ ದುಡಿಯುತ್ತಿರುತ್ತವೆ. ವಾರದ ರಜೆ, ಸಂಬಳ, ವಿಶೇಷ ಭತ್ಯೆ ಏನೂ ತಗೆದುಕೊಳ್ಳದೇ ನಮ್ಮ ಜಮೀನನ್ನು ಉಳುಮೆ ಮಾಡುತ್ತಿರುತ್ತವೆ.

ಒಂದು ಎರೆಹುಳು ಒಂದು ದಿನಕ್ಕೆ ತನ್ನ ದೇಹದ ತೂಕದ ಒಂದೂವರೆ ಪಟ್ಟು ಹೆಚ್ಚು ತೂಕದ ಮಣ್ಣನ್ನು ಅಗೆದು ಹೊರಹಾಕುತ್ತವೆ! ಒಂದು ಎಕರೆಯಲ್ಲಿ ಅಂದಾಜು ಒಂದು ಲಕ್ಷ ಎರೆಹುಳುಗಳು ಇದ್ದಾವೆ ಎಂದು ಲೆಕ್ಕ ಹಾಕಿದರೂ, ಅವುಗಳ ತೂಕ ಸುಮಾರು ಒಂದು ಟನ್. ಇಷ್ಟು ಹುಳುಗಳು ದಿನವೊಂದಕ್ಕೆ ಒಂದೂವರೆ ಟನ್‌ನಷ್ಟು ಮಣ್ಣನ್ನು ಅಗೆಯುತ್ತವೆ. ಹಾಗೆ ಮಣ್ಣು ತಿಂದು ಮಲವಿಸರ್ಜನೆ ಮಾಡಲು ಪ್ರತಿ ರಾತ್ರಿ ಒಂದು ಎರೆಹುಳು ಎಂಟು ಸಲ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ! ಪ್ರತಿ ಬಾರಿ ಅದು ಬೇರೆ ಬೇರೆ ದಾರಿಯಲ್ಲೇ ಹೊರಬರುತ್ತದೆ! ಹಾಗೆಯೇ ಬೇರೆ ಹಾದಿಯಲ್ಲಿ ಒಳಹೋಗುತ್ತದೆ!

ಅಂದರೆ ಲೆಕ್ಕ ಹಾಕಿ, ಒಂದು ರಾತ್ರಿ ಒಂದು ಎರೆಹುಳು ಭೂಮಿಗೆ 14 ರಿಂದ 18 ರಂಧ್ರಗಳನ್ನು ಕೊರೆಯುತ್ತದೆ. ಒಂದು ಅಡಿ ಜಾಗದಲ್ಲಿ 10 ಎರೆ ಹುಳುಗಳಿದ್ದರೆ ಅಲ್ಲಿ ಸುಮಾರು 180 ರಂಧ್ರಗಳಾಗುತ್ತವೆ! 600 ಕೋಟಿ ವರ್ಷಗಳಿಂದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಗಳಲ್ಲೂ ಎರೆಹುಳು ಬದುಕುಳಿದು ತನ್ನ ಆಸ್ತಿತ್ವವನ್ನು ಕಾಯ್ದುಕೊಂಡಿದೆ. ಭೂಮಂಡಲದ 100 ಜೀವಜಂತುಗಳ ಪೈಕಿ ಅತ್ಯಂತ ಯಶಸ್ವಿ ಜೀವಿಯಾಗಿದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ದೇಶಿ ಎರೆಹುಳು ಮಣ್ಣನ್ನು ತಿನ್ನುತ್ತಾ 15ರಿಂದ 25 ಅಡಿ ಆಳಕ್ಕೆ ಹೋಗಿ ಬಂದು ದಿನದ 24 ಗಂಟೆಯೂ ಅವಿಶ್ರಾಂತವಾಗಿ ದುಡಿಯುತ್ತದೆ. ಇದರಿಂದ ಮಣ್ಣಿನ ಮೂಲಕ ಭೂಮಿಯ ಒಳಭಾಗಕ್ಕೆ ಗಾಳಿ ಹರಿಯುತ್ತದೆ. ಗಿಡಗಳ ಬೇರಿಗೆ ನೀರು ಒಸರುತ್ತದೆ. ಎರೆಹುಳುವಿನ ಮಲ ನಮ್ಮ ಬೆಳೆಗಳಿಗೆ ಉತ್ಕೃಷ್ಟ ಗೊಬ್ಬರವೂ ಆಗುತ್ತದೆ.

ಹಾಗಾಗಿ ಯಾವಾಗಲೂ ಜಮೀನಿಗೆ ಬೆಂಕಿ ಇಡಬಾರದು, ಕೀಟನಾಶಕ, ಕಳೆನಾಶಕ ಅಥವ ಯಾವುದೇ ರಸಾಯನಿಕ ಬಳಸಬಾರದು ಇರೋದನ್ನು ಬೆಳಸಿಕೊಂಡು ಹೋಗಬೇಕು .ಎರೆಹುಳುವಿನ ಸಂತತಿ ಉಳಿಸಿ...

(ವಾಟ್ಸಾಪ್ ಮೂಲಕ ಸಂಗ್ರಹಿತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ