ಎಲೆಗಳಿಂದ ಕಲಾಕೃತಿಗಳು



ಹಬ್ಬಗಳನ್ನು ಆಚರಿಸುವಾಗ ಮತ್ತು ಸಮಾರಂಭಗಳಲ್ಲಿ ಎಲೆಗಳಿಂದ ತೋರಣ ಕಟ್ಟುವುದು ಹಾಗೂ ಕಂಬಗಳಿಗೆ ಎಲೆಗಳನ್ನು ಸುತ್ತಿ ಅಲಂಕರಿಸುವುದನ್ನು ನಾವು ಕಂಡಿದ್ದೇವೆ. ಪ್ರಕೃತಿಯ ಅದ್ಭುತ ಕೊಡುಗೆಗಳಾದ ಎಲೆಗಳು ತಮ್ಮ ಪತ್ರಹರಿತ್ತಿನ ಮೂಲಕ ದ್ಯುತಿ ಸಂಶ್ಲೇಷಣೆ ನಡೆಸಿ, ಸಸ್ಯಗಳ ಆಹಾರ ಉತ್ಪಾದನೆಗೆ ಮೂಲವಾಗಿವೆ. ಆ ಮೂಲಕ ಭೂಮಿಯ ಎಲ್ಲ ಜೀವರಾಶಿಗಳ ಉಳಿವಿಗೆ ಕಾರಣವಾಗಿವೆ.
ವಿವಿಧ ಆಕಾರ, ಅಳತೆ ಮತ್ತು ಬಣ್ಣಗಳಲ್ಲಿ ಕಂಡು ಬರುವ ಎಲೆಗಳಿಂದ (ಫೋಟೋ 3) ಅತ್ಯಾಕರ್ಷಕ ಕಲಾಕೃತಿಗಳನ್ನು ರಚಿಸಬಹುದು:
ಎಲೆಗಳಿಂದ ಆಕೃತಿಗಳು (ಫೋಟೋ 1 ಮತ್ತು 2)
ಎಲೆಗಳಿಂದ ಕೊಲಾಜ್
ಎಲೆಗಳಿಂದ ಅಚ್ಚು
ಎಲೆಗಳಿಂದ ಫಲಕ (ಪಿನ್ ಚುಚ್ಚಿ ಗೋಡೆಯಲ್ಲಿ ನೇತಾಡಿಸಲು)
ಎಲೆಗಳಲ್ಲಿ ಪೈಂಟಿಂಗ್
ಎಲೆಗಳನ್ನು ಹಗ್ಗದಿಂದ ಕಟ್ಟಿ ನೇತಾಡಿಸುವುದು (ತೋರಣ ಕಟ್ಟುವುದು)
ಎಲ್ಲೆಲ್ಲೂ ಗಿಡಮರಬಳ್ಳಿಗಳಿರುವ ಕಾರಣ, ನಮ್ಮ ಮನೆಯ ಹತ್ತಿರ ಒಂದು ಸುತ್ತು ನಡೆದರೆ ಸಾಕಷ್ಟು ಎಲೆಗಳನ್ನು ಸಂಗ್ರಹಿಸಬಹುದು. ಅವನ್ನು ಒಣಗಿಸಿ, ಅವುಗಳಿಂದ ಇಂತಹ ಕಲಾಕೃತಿಗಳನ್ನು ರಚಿಸಬಹುದು. ಇದೊಂದು ಪ್ರಕೃತಿಗೆ ನಮ್ಮನ್ನು ಜೋಡಿಸುವ ಚಟುವಟಿಕೆ ಮತ್ತು ನಮ್ಮ ಸೃಜನಶೀಲತೆಗೊಂದು ಸವಾಲು, ಅಲ್ಲವೇ?
ಫೋಟೋ ಕೃಪೆ: ರೆಡ್ ಸಾಯಿಲ್ ಸ್ಪ್ರಿಂಗ್ ಪತ್ರಿಕೆ, ಸಂಚಿಕೆ 1