ಎಲ್ಲರೊಳಗೊಳೊಂದಿಗೆ ಒಂದಾಗಿ

ಎಲ್ಲರೊಳಗೊಳೊಂದಿಗೆ ಒಂದಾಗಿ

ಕವನ

ಮರ,ಮನೆ,ಮಳೆ,ಮಡದಿ....

ಪೂರಕದಲ್ಲಿ ತರುವುದು ನೆಮ್ಮದಿ

ತಾಳ್ಮೆಯ ತಾಳೆಯ ಬದುಕಿನಲಿ

ಮಮತೆಯು ಮೆರೆವುದು ಮಧುವಿನಲಿ.

 

ಭವ ಬಂಧನದ ಬಿಗಿತದಲಿ

ಭಾವುಕ ಮನವದು ಬೆರಗಿನಲಿ

ನಾಟಕದಾಟವು ತೆರೆ ಮರೆಯಲ್ಲಿ

ಆಚಾರ, ವಿಚಾರ ತನು ಮನದಲ್ಲಿ.

 

ಮರವಿರಲು ಅಲ್ಲಿ ಮಳೆ.......

ಮಡದಿಯಿರಲು ಮನೆಗೆ ಕಳೆ

ಸರಪಳಿಯ ಕೊಂಡಿಯ ಬಾಳಲ್ಲಿ

ಹೊಂದಾಣಿಕೆ ಎಂಬುದು ಸಹಜತೆಯಲ್ಲಿ.

 

ಸೂತ್ರದಾರನವನ ಬಿಗಿ ಹಿಡಿತದಲಿ

ಮನವದು ಮರ್ಕಟದಾಟದಲಿ....

ಅರಿತು ಬಾಳಲು ಇಹುದಿಲ್ಲೇ ಸ್ವರ್ಗ

ಅರಿವು ತುಂಬಲು ಇಹುದು ನಿಸರ್ಗ.

 

ಕಾಲ ಚಕ್ರವದು ಪರಿಭ್ರಮಣೆಯಲ್ಲಿ

ಏರಿಳಿತದ ಬಾಳದು ಸರದಿಯಲ್ಲಿ....

ಬೆನ್ನನು ನೆರಳದು ಹಿಂಬಾಲಿಸುವಂತೆ

ಬದುಕಿಹುದು ಸಂತೆಯಲ್ಲಿ ಕಂತೆ,ಕಂತೆ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

 

ಚಿತ್ರ್