ಎಲ್ಲವೂ ಅದವಳಿಗೊಂದು ಪತ್ರ

ಎಲ್ಲವೂ ಅದವಳಿಗೊಂದು ಪತ್ರ

ಬರಹ

ಎಲ್ಲವೂ ಆದವಳೇ
ನೀನು ನಂಗೊಂದು ಮಾತು ಹೇಳಿದ್ದೆ ನೆನಪಿದ್ಯಾ ಹುಡುಗಿ "ನೀವು ನಂಗೆ ಕಾಮನ ಬಿಲ್ಲು ಇದ್ದ ಹಾಗೆ ಬರೀ ನೋಡಬಹುದು ಮುಟ್ಟೋಕೆ ಆಗೋಲ್ಲ" ಅಂತ, ಮತ್ತೆ ಗೊತ್ತಿದ್ದೂ ಯಾಕೆ ಮಳೆಬಿಲ್ಲನ್ನ ಅತಿಯಾಗಿ ಹಚ್ಕೊಂಡೆ. ಈ ಮಳೆಬಿಲ್ಲಿಗೂ ನಿನ್ನ ಮೇಲೆ ಪ್ರೀತಿ ಬಂತು ಅನ್ನಿಸುತ್ತೆ ದಿನಾ ಆಕಾಶದಲ್ಲಿ ನಿನಗೋಸ್ಕರ ಬಂದು ಕೂತಿರುತ್ತೆ.ಈಗ ನೋಡು ನಿನ್ನೆ ಎಲ್ಲಾ ಅತ್ತು ಸೊರಗಿದೆ. ಏನು ಪ್ರಯೋಜನ. ಬೇಡ ಅಂದ್ರೂ ಕೇಳದೆ 'ನೀವೇ ನಂಗೆ ಸರಿ' ಅಂತ ಪ್ರೀತಿ ಮಾಡ್ದೆ ಅದರ ಮಧ್ಯೆ 'ನಿಮ್ಮನ್ನ ಮದುವೆ ಮಾಡ್ಕೊಳ್ಳೋಕೆ ಆಗಲ್ಲ' ಅಂತನೂ ಹೇಳ್ದೆ , ಆಗ್ಲೇ ನಾನು ನಿನ್ನ ದೂರ ಮಾಡಬೇಕಾಗಿತ್ತು. ಸಣ್ಣ ಹುಡುಗಿ (ನನಗಿಂತ ಒಂದೇ ವರ್ಷಕ್ಕೆ) ಅಂತ ಬುದ್ಧಿ ಹೇಳ್ದೆ. ಕೇಳಲಿಲ್ಲ "ನಿಮ್ಮನ್ನ ಎಲ್ರೂ ಇಷ್ಟ ಪಡ್ತಾರೆ ಆದ್ರೆ ನೀವು ನಂಗೆ ಮಾತ್ರ ಬೇಕು" ಅಂದೆ.ಸುಮ್ಮನೆ ನಾನಾಯ್ತು ನನ್ನ ಕೆಲಸ ಆಯ್ತು ಅಂತ ಕೂತಿದ್ದವನನ್ನ ಎಬ್ಬಿಸಿ ಪ್ರೀತಿ ಅನ್ನೋ ಪಡಸಾಲೆಗೆ ತಂದು ಬಿಟ್ಟೆ.ಎಲ್ಲ ಹೆಣ್ಮಕ್ಕಳ ಹತ್ರ ಹೇಗೆ ನಡ್ಕೋತ ಇದ್ನೋ ಹಾಗೆ ನಿನ್ಜೊತೆನೂ ಇದ್ದೆ ನೀನು ಸಣ್ಣವಳು ಅನ್ನೋ ಕಾರಣಕ್ಕೆ ಪುಟ್ಟ ಮಗು ಥರಾ ನಿನ್ನ ನೋಡ್ದೆ ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ ಈಗ ಅರ್ಥ ಆಗ್ತ ಇದೆ . ಆ ಕೇರಿಂಗ್ ತಗೊಂಡಿದ್ದು ನಿನಗೆ ನನ್ನ ಮೇಲೆ ಪ್ರೀತಿ ಹುಟ್ಟಲಿಕ್ಕೆ ಕಾರಣ ಆಯ್ತು ಅಂತ ಅನ್ಸುತ್ತೆ.ಈ ರೀತಿಯ ಆಕರ್ಷಣೆ ಆಫೀಸ್ಗಳಲ್ಲೇ ಹೆಚ್ಚಾಗಿ ಆಗ್ತವೋ ಏನೋ ,ನಾನು ಟೀಮ್ ಲೀಡರ್ ಅನ್ನೋದನ್ನ ಮರೆತು ನಿಂಗೆ ತರಬೇತುದಾರನಾದೆ ಆಫ್ಕೋರ್ಸ್ ನಾನು ಎಲ್ಲರ ಜೊತೆನೂ ನಾನು ಹಾಗೆ ಇದ್ದೆ ನಿನ್ನ ಜೊತೆ ಸ್ವಲ್ಪ ಜಾಸ್ತಿ (ಸಣ್ಣವಳು ಅನ್ನೋದೊಂದು ಕಾರಣ) ಆದ್ರೆ ಯಾರೂ ಇದರ ಬಗ್ಗೆ ಮಾತಾಡಲಿಲ್ಲ ಯಾಕೆಂದರೆ ನಾನು ಇದ್ದದ್ದೇ ಹಾಗೆ ಎಲ್ಲರನ್ನೂ ನಗಿಸ್ತ ಗೊತ್ತಾಗದೆ ಇದ್ದದ್ದನ್ನ ಹೇಳಿಕೊಡ್ತಾ ಇಡೀ ಟೀಮ್ನ ಖುಷಿಯಾಗಿ ಇಟ್ಟಿರ್ತಿದ್ದೆ. ಅದನ್ನ ನೀನು ಅಪಾರ್ಥ ಮಾಡ್ಕೊಂಡ್ಯಾ?ಗೊತ್ತಿಲ್ಲ.ನನ್ನ ಹತ್ರ ಮೊದಲು ಆ ವಿಷ್ಯ ಹೇಳ್ದಾಗ ನಾನು ಬೈದಿದ್ದೆ. ನಾನೇನು ದೊಡ್ಡ ಮನುಷ್ಯ (ತಿಳುವಳಿಕೆಯಲ್ಲಿ) ಅಲ್ಲ , ನನಗೆ ಗೊತ್ತಿರೊದನ್ನ ನಿಜವಾಗಿ ಹೇಳಿದೆ ,ತಪ್ಪದು ಅಂತ ,ಆದ್ರೆ ನನಗೂ ಮನಸಿನಲ್ಲಿ ಸಣ್ಣ ಆಸೆ ಇತ್ತಾ?ಗೊತ್ತಿಲ್ಲ,ಯಾಕೆಂದರೆ ನಾನೂ ಇನ್ನು ಸಣ್ಣವನು ಆದ್ರೆ ಯೋಚನಾಶಕ್ತಿ ಇದೆ ಆಗದೆ ಇರೋದನ್ನ ಅತಿಯಾಗಿ ಹಚ್ಕೊಬಾರ್ದು ಅನ್ನೋ ಜ್ಞಾನ ಇದೆ. ಅದರಿಂದಲೇ ನಾನು ಬೇಡ ಅಂದದ್ದು . ನೀನು ಮಾತ್ರ ನನ್ನ ಬಿಡಲಿಲ್ಲ . ಕೊನೆಗೆ ನಾನೂ ನಿನ್ನ ದಾರಿಗೆ ಬಂದೆ . ಇಡೀ ಆಫೀಸಿನಲ್ಲಿ ಯಾವತ್ತೂ ಗುಲ್ಲಾಗದಿದ್ದ ನಾನು ಎಲ್ಲರ ಬಾಯಿಗೆ ಆಹಾರವಾದೆ . ಪರವಾಗಿಲ್ಲ ನೀನಿದ್ದಿಯಲ್ಲ ನಂಜೊತೆ ಅನ್ನೋ ಧೈರ್ಯ ಇತ್ತು . ಕೊನೆಗೆ ಮನೆಯಲ್ಲಿ ನನ್ನನ್ನ ಅನುಮಾನದಿಂದ ನೋಡೋಕೆ ಶುರು ಮಾಡಿದ್ರು ,ಗಂಟೆಗಟ್ಟಲೆ ಮಾತಾಡ್ತಾನೆ ಇವನು ಫೋನಲ್ಲಿ ಅಂತ ತಮಾಷೆ ಮಾಡ್ತಿದ್ದೊರು ಇವನಿಗೆ ಆಫೀಸಿನಲ್ಲಿ ಅಫೇರ್ ಇದೆ ಅಂತ ಮಾತಾಡೋಕ್ಕೆ ಶುರು ಮಾಡಿದ್ರು (ನಮ್ಮ ಅಪ್ಪ ಅಮ್ಮನಿಗೆ ನಾನೇನು ಅಂತ ಗೊತ್ತು ಆದ್ರೆ ಸಂಬಂಧಿಕರಿಗೆ.....)ಇಲ್ಲೂ ಹೆಸರು ಕೆಡಿಸ್ಕೊಂಡೆ .ಆಮೇಲೆ ನೀನು ಬೇರೆ ಕಡೆ ಕೆಲಸ ಸಿಗ್ತು ಅಂತ ಹೋದೆ ಆದ್ರೆ ನನ್ನ ಮರೀಲಿಲ್ಲ ದಿನಾ ಫೋನ್ ಮಾಡ್ತಾ ಇದ್ದೆ ಗ್ರೇಟ್ ನೀನು .ನಾನು ಮಾತ್ರ ಇಲ್ಲಿನ ಸಹೋದ್ಯೋಗಿಗಳ ವ್ಯಂಗ್ಯದ ಮಾತುಗಳನ್ನ ಸಹಿಸ್ಕೊಳ್ತಾ ಇದ್ದೆ ಮತ್ತು ಸತ್ತೆ ಹೋದೆ .ಕೊನೆಗೆ ನಾನೂ ಆಫೀಸ್ ಬದಲಾಯಿಸಿದೆ . ಇಷ್ಟಾದರೂ ನೀನ್ ಫೋನ್ ಮಾಡೋದು ಬಿಡಲಿಲ್ಲ ಪ್ರೀತ್ಸೂದನ್ನು ಬಿಡಲಿಲ್ಲ . ನಾನು ಕೊನೆ ಸರತಿ ಕೇಳಿದ ಪ್ರಶ್ನೆ 'ಮುಂದೇನು' ಅನ್ನೋದಕ್ಕೆ ನಿನ್ನ ಉತ್ತರ ಕೇಳಿ ನಿಜಕ್ಕೂ ದಂಗಾಗಿ ಹೋದೆ "ನಾವಿಬ್ರೂ ಒಂದಾಗೋಲ್ಲ ಬಿಡಿ ಯಾಕೆಂದ್ರೆ ನಮ್ಮಮನೆಯವರು ಒಪ್ಪಲ್ಲ . ನಿಮ್ಮ ಬಾಳು ಹಾಳು ಮಾಡಿದ್ನೇನೋ ಅನ್ನಿಸುತ್ತೆ ತಪ್ಪಾಯ್ತು ನನ್ನ ಮರೆತು ಬಿಡಿ ಮುಂದಿನ ವಾರ ನನ್ನ ಎಂಗೇಜ್ಮೆಂಟ್ . ದಯವಿಟ್ಟು ಕ್ಷಮಿಸಿ . ನನ್ನ ತಪ್ಪಿಗೆ ನಾನೇ ಶಿಕ್ಷೆ ಕೊತ್ತುಕೊಳ್ತಾ ಇದೀನಿ ನಾನು ಮುದುವೆಯಾಗ್ತಾ ಇರೋ ಹುಡುಗ ಒಂಚೂರೂ ಚೆನ್ನಾಗಿಲ್ಲ ರೂಪದಲ್ಲೂ ಮತ್ತೆ ಮುಂಗೋಪ ಇದೆ ನಮ್ಮ ಅಪ್ಪ ಅಮ್ಮ ಒಪ್ಪಿದ್ದಾರೆ ನಾನು ಕುತ್ಗೆ ಕೊಡ್ತಾ ಇದೀನಿ. ನಾನು ಸಂತೋಷದಿಂದ ಒಪ್ಪಿ ಮದುವೆ ಆಗ್ತಾ ಇಲ್ಲ. ನಿಮಗೆ ಮಾಡಿದ ಮೋಸಕ್ಕೆ ನನಗೆ ನಾನೇ ಕೊಟ್ಟುಕೊಳ್ಳೋ ಶಿಕ್ಷೆ . ನಿಮ್ಮನ್ನ ಮರೆಯಕ್ಕೆ ಈ ಜನ್ಮದಲ್ಲಿ ಸಾಧ್ಯಯಿಲ್ಲ. ಮತ್ತೆ ನಿಮಗೆ ಮಾಡಿದ ಮೋಸನೂ , ನಾನಂತೂ ಸಂತೋಷವಾಗಿ ಇರಲ್ಲ. ನಮ್ಮ ಅಪ್ಪ ಅಮ್ಮನಾದ್ರೂ ಸಂತೋಷವಾಗಿರ್ಲಿ. ಯಾಂತ್ರಿಕವಾಗಿ ಬದುಕ್ತೀನಿ. ಬೇಜಾರು ಮಾಡ್ಕೋಬೇಡಿ. ಹುಷಾರು". ಚಿನ್ನಾಗಿದೆ, ಪುಟ್ಟಾ ನಿನ್ನ ಮಾತು, ಪಾಪ ನೀನಾದ್ರೂ ಎನ್ಮಾಡ್ತೀಯ, ನನ್ನದೂ ತಪ್ಪಿದೆ, ಎಲ್ಲ ತಪ್ಪನ್ನೂ ನಿನ್ನ ಮೇಲೆ ಹಾಕಕ್ಕೆ ಆಗಲ್ಲ .ಒಂದು ನಿಜ ಬಂಗಾರು ನಾನ್ ಮಾತ್ರ ಮದುವೆ ಆಗಲ್ಲ ಇದು ಫಿಕ್ಸ್ .ಇನ್ನೊಂದು ಮತ್ತೆ ನಾನು ಮದುವೆಗೆ ಬರ್ಲಾ , ಬೇಡ ಬಿಡು ಸುಮ್ನೆ ಯಾಕೆ ಮುಜುಗರ, ಚಿನ್ನು ನೀನೂ ಹುಷಾರು.
ಇತಿ
ಎಲ್ಲವೂ ಆಗಿ ಏನೂ ಆಗದವನು