ಎಲ್ಲವೂ ಸಾಧ್ಯ-ಅವರವರ ಸಾಮರ್ಥ್ಯ...!
ಇದು ಸಾಧ್ಯವೋ-ಅಸಾಧ್ಯವೋ,
ಆಗುತ್ತೋ -ಆಗಲ್ವೋ,
ಮಾಡ್ತೀಯಾ-ಮಾಡಲ್ವಾ,
ಹು-ಉಹೂ,
ಐ ಕ್ಯಾನ್-ಐ ಕಾಂಟ್
ಎಸ್-ನೋ...ಹೀಗೆ ಅನೇಕ ಸಮಾನಾರ್ಥಕಗಳು ನೋಡಬಹುದು...ಈ ಮನುಷ್ಯನಿಂದ ಎಲ್ಲವೂ ಸಾಧ್ಯ. ಆದರೆ ವಿಧಿಯ ಮುಂದೆ ಆಟವಾಡಲು ಅಸಾಧ್ಯ. ಕಾಡು ,ಪೊಟರೆ-ಗುಹೆಯಿಂದ ಗಗನ ಚುಂಬಿ ಕಟ್ಟಡ, ಭೂಮಿಯಿಂದ ಚಂದ್ರನ ಮೇಲೆ, ಮನೆ ಅಂಗಳದಿಂದ ಚಂದ್ರನ ಅಂಗಳಕ್ಕೆ, ಕಲ್ಲು ಉಜ್ಜಿ ಬೆಂಕಿ ಮಾಡುವಲ್ಲಿಂದ, ಪಂಜು, ಚಿಮಣಿ ದೀಪ, ಪೆಟ್ರೋಮ್ಯಾಕ್ಸ್ ಬೆಳಕಿನಿಂದ ಹಿಡಿದು ವಿದ್ಯುತ್, ಸೌರಶಕ್ತಿ, ಪವನಶಕ್ತಿಯಿಂದ ಬೆಳಕು ಎಲ್ಲೆಡೆ ಹರಿದಾಡುವಂತೆ ಸಾಧ್ಯವಾಗಿಸಿದೆ. ಪಾರಿವಾಳಗಳ ಮೂಲಕ ಸಂವಹನದಿಂದ ಅಂಚೆ, ಕಾಗದ, ಪತ್ರ, ಉಪಗ್ರಹ, ದೂರದರ್ಶನ, ಮೊಬೈಲ್ ವರೆಗೆ, ಈ ತಂತ್ರಜ್ಞಾನದಿಂದ 'ವಸುದೈವ ಕುಟುಂಬಕಂ'ಎಂಬಂತೆ ಅಂಗೈಯಲ್ಲಿ ಇಡಿಯ ವಿಶ್ವವನ್ನೇ ಕೂತಲ್ಲಿಂದ ನೋಡಬಹುದನ್ನು ಸಾಧ್ಯವಾಗಿಸಿದ್ದಾರೆ.
ಮನುಷ್ಯನು ಎಲ್ಲವನ್ನೂ ಸಾಧ್ಯವಾಗಿಸಿದ್ದಾನೆ.
ಒಂಚೂರು ನೋಡೊಣ ಬನ್ನಿ..
ಕೂಸು ಹುಟ್ಟಿದಾಗ ಅಳುವುದು,
ತಾಯಿಯ ಎದೆಹಾಲು ಕುಡಿಯುವುದು,
ಬೆಳವಣಿಗೆ ಆಗುತ್ತಿದ್ದಂತೆ ತೆವಳುವುದು,
ಹರಿದಾಡುವುದು,ಅಂಬೆಗಾಲನ್ನಿಟ್ಟು ಮುಂದೆ ಸಾಗುವುದು,
ನೋಡಿ ನಗುವುದು,
ಮ್ಮ,ಮ್ಮ,ಮ್ಮ,ಅಮ್ಮ ಎನ್ನುವುದು,
ಕೈ ಹಿಡಿದು ನಡೆಸಿದಾಗ ನಡೆಯುವುದು,
ತಂದೆ-ತಾಯಿಯರನ್ನು ಅನಿಸರಿಸುವುದು,
ಇತರರನ್ನು ಗುರುತಿಸುವುದು..
ಹೀಗೆ ಒಂದು ಹಂತ.
ನಂತರ ಮಗುವು ಶಿಕ್ಷಣ ಕಲಿಯುವುದು,
ಅಲ್ಲಿ ಶಿಕ್ಷಕರು ಪ್ರಭಾವ ಬೀರುವುದು,
ಗೆಳೆಯ-ಗೆಳತಿಯರು ಬಿಗಿಯಾದ ಬಂಧವು,
ಹದಿಹರೆಯದ ಪ್ರೀತಿ-ಪ್ರೇಮ-ಪ್ರಣಯವು,
ಸಾಕಷ್ಟು ಏರು-ಪೇರು-ಆತಂಕವು,
ಕೆಲವರು ಇಲ್ಲೇ ಕುಸಿಯುತ್ತಾರೆ.
ಮುಂದೆ ಸಾಗುತ್ತಾ ಜವಾಬ್ದಾರಿ ತಲೆಗೆ ಹತ್ತುವುದು.
ಎಲ್ಲವೂ ಸಾಧ್ಯ ಅದು ನಾವು ತೆಗೆದುಕೊಳ್ಳುವ ರೀತಿಯಿಂದ..
ಕೆಲವರು ಶಿಕ್ಷಣ ಪಡೆಯುವುದು ಅರ್ಧಂಬರ್ಧ, ಅದು ಮನೆ, ಮನಿ, ಮನಸ್ಸಿನ, ಬಡತನ, ಶ್ರೀಮಂತಿಕೆ ಕಾರಣಗಳು ಬಹಳಷ್ಟಿವೆ. ಇನ್ನೂ ಹಲವರು ಶಿಕ್ಷಣ ಪಡೆದು ಒಂದೊಳ್ಳೆ ಉದ್ಯೋಗ ಪಡೆದು ಸೆಟಲ್ ಆಗುವ ಪರ್ಫೆಕ್ಟ್ ಪ್ಲ್ಯಾನ್ ಹಾಕಿರುತ್ತಾರೆ. ಏನೇ ಆದರೂ ಪ್ರತಿಯೊಬ್ಬರೂ ಬದುಕಲೇ ಬೇಕು. ಬದುಕೆಂಬುದು ಎಲ್ಲವನ್ನೂ ಸಾಧ್ಯವಾಗಿಸುವಂತೆ ಮಾಡಿಸುತ್ತದೆ.
ಬದುಕಿಗಾಗಿ ಏನಾದರೂ ಸಾಧ್ಯವಾಗಿಸಿಕೊಳ್ಳಲೇಬೇಕು. ಮನುಷ್ಯ ಎಲ್ಲವನ್ನೂ ಕಲಿಯುತ್ತಿರುತ್ತಾನೆ. ಅವನಿಂದ ಎಲ್ಲವೂ ಸಾಧ್ಯ. ಅದರಲ್ಲಿ ಅವರವರ ಮಾನಸಿಕ,ದೈಹಿಕ ಸಾಮರ್ಥ್ಯ, ಆರೋಗ್ಯ, ಶಿಕ್ಷಣ, ಬುದ್ಧಿವಂತಿಕೆ, ಇತ್ಯಾದಿ ಅನೇಕ ಅಂಶಗಳ ಮೇಲೆ. ಮಗುವೊಂದು ಬೆಳೆಯುತ್ತಿದ್ದಂತೆ ನಡೆಯುತ್ತದೆ. ಸೈಕಲ್ ಓಡಿಸುತ್ತದೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮೋಟಾರ್ ಬೈಕ್, ಕಾರು, ಬಸ್ಸು, ವಿಮಾನ ಓಡಿಸುವರು. ಹಾಗೇ ಬಹುಪಾಲು ಜನರು ರೈತರಾಗುವರು, ಸೈನಿಕರಾಗುತ್ತಾರೆ, ಶಿಕ್ಷಕರು, ಬೋಧಕರು, ಪ್ರೊಫೆಸರ್ ಗಳಾಗುತ್ತಾರೆ, ಆಧ್ಯಾತ್ಮಿಕ, ಶಾಸ್ತ್ರ ಪಂಡಿತರು ಚಿಂತಕರಾಗುತ್ತಾರೆ,
ಬಹುಪಾಲು ಮಂದಿ ಕೂಲಿ ಕಾರ್ಮಿಕರಾಗುತ್ತಾರೆ,ಡ್ರೈವರ್ ಗಳು, ಪೈಲೆಟ್ ಗಳು ಪೋಲಿಸರು,ಲಾಯರ್ ಗಳು, ಹೋರಾಟಗಾರರು, ಪರಿಸರವಾದಿಗಳು, ಪತ್ರಕರ್ತರು, ಅಧಿಕಾರಿ ಸಿಬ್ಬಂಧಿಗಳು, ನಟರು-ನಿರ್ದೇಶಕರು, ಕಲಾವಿದರು, ಸಾಹಿತಿಗಳು-ಕವಿಗಳು-ಬರಹಗಾರು, ಹಾಡುಗಾರರು, ಡ್ಯಾನ್ಸರ್ ಗಳು, ಚಿತ್ರ-ಶಿಲ್ಪಕಲಾಕಾರರಾಗುತ್ತಾರೆ. ಬಿಲ್ಡರ್ಸ್, ಡೀಲರ್ಸ್, ಬಿಸಿನೆಸ್ ಮ್ಯಾನ್ ಗಳು, ವ್ಯಾಪಾರಸ್ಥರು, ಎಂಜಿನಿಯರ್ ಗಳು, ಡಾಕ್ಟರ್ ಗಳು, ಅಕೌಂಟಂಟ್ ಗಳು, ಕ್ರೀಡಾಪಟುಗಳು, ವಿಜ್ಞಾನಿಗಳು-ತಂತ್ರಜ್ಞರು, ಮ್ಯೆಕಾನಿಕ್ ಗಳು, ಖಾಸಗಿ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಮಂತ್ರಿಗಳು, ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಎಲ್ಲವನ್ನೂ ಸಾಧ್ಯವಾಗಿಸಿದ್ದಾರೆ, ಸಾಧ್ಯವಾಗಿಸುತ್ತಿದ್ದಾರೆ.
ಸಾಧ್ಯವಾಗಿಸಿದವರ ಬಗೆಗಿನ ಹೊತ್ತಿಗೆಗಳು, ಗೂಗಲ್ ಮಾಹಿತಿಗಳು, ಓದಿದರೂ ಈ ಜೀವನದಲ್ಲಿ ಮುಗಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರಿಗೂ ಸಹ ಏನೋ ಕನಸು, ಗುರಿ ಇರುತ್ತೆ. ಸ್ಟಾರ್ ಗಳೆಂದು ,ರೋಲ್ ಮಾಡೆಲ್ ಗಳೆಂದು ಕರೆಸಿಕೊಳ್ಳುವವರು ಎಲ್ಲರಿಗೂ ಮಾದರಿಯಾಗಿರುತ್ತಾರೆ. ಪ್ರತಿಯೊಬ್ಬರಿಗೂ ನಾನೂ ಸಹ ಅವರಂತೆ ಆಗಬೇಕು ಎಂದು ಅನಿಸಿಯೇ ಅನಿಸಿರುತ್ತದೆ. ಆದರೆ ನಮ್ಮಿಂದ ಸಾಧ್ಯವೇ ಎನ್ನುವುದೊಂದೇ ಪ್ರಶ್ನೇ. ಇದರ ಹಿಂದಿನ ಸ್ಥಿತಿ-ಪರಿಸ್ಥಿತಿ ಗೊತ್ತಿಲ್ಲ. ನಾವು ನಮ್ಮಿಂದ ಏನಾದರೊಂದು ಸಾಧ್ಯವಾಗಿಸುವುದಾದರೆ ಸಾಧಿಸಿದವರ ಬಗ್ಗೆ ಅವರ ಸತತ ಶ್ರಮ, ಏಕಾಗ್ರತೆ, ಹೋರಾಟ, ದಿಟ್ಟ ನಿಲುವು, ಗುರಿಯೆಡೆಗಿನ ಗಮನ ಅವರು ಸಾಗಿದ ದಾರಿ ನೋಡಲೇ ಬೇಕು. ಆಗ ಸಾಧ್ಯ.
ಈ ಬದುಕು ಬೇಸರವಾದಾಗ ನಮಗಿಂತಲೂ ಕೆಳಗಿನವರ ದುಡಿದು ಹೇಗೆ ಬದುಕುತ್ತಿದ್ದಾರೆ ಎನ್ನುವುದು ಸ್ವಲ್ಪ ನೋಡಿ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು. ಹಾಗಾಗಿ ಅಸಾಧ್ಯವಾದುದು ಯಾವುದೂ ಇಲ್ಲ. ಇದು ಸಾಧ್ಯವೆಂದು ಸಾಧಿಸಿದವರ ನೈಜ ಕಥೆಗಳು ಕಣ್ಮುಂದೆ ಕುಣಿಯುತಿರುವಾಗ.... I M POSSIBLE.....!
-ಶಾಂತಾರಾಮ ಶಿರಸಿ, ಉತ್ತರ ಕನ್ನಡ.
ಚಿತ್ರ ಕೃಪೆ: ಇಂಟರ್ನೆಟ್ ತಾಣ