ಎಲ್ಲಿಂದಲೋ ನೀ ಬಂದೆ ನನಗಾಗಿ
ಕವನ
ಕನಸೊಂದು ನನಸಾಗುವ ಘಳಿಗೆ ಬಂದಿದೆ..
ಎಲ್ಲಿಂದಲೋ ನೀ ಬಂದೆ ನನಗಾಗಿ..
ನಿನಗಾಗಿ ಎದುರುನೋಡುವ ಪ್ರತಿಕ್ಷಣವೂ
ಒಂದೊಂದು ಯುಗವಾಗಿ ಅನಿಸುತಿದೆ ಗೆಳತಿ
ನಿನ್ನೊಡನೆ ಮಾತನಾಡುತ್ತಿದ್ದರೆ ಯುಗವೂ
ಕ್ಷಣದ ಹಾಗೆ ಕರಗಿ ಹೋಗುತಿದೆ..
ನೀನು ನನ್ನನು ಎಷ್ಟು ಆವರಿಸಿರುವೆ
ಎಂದು ಮನಬಿಚ್ಚಿ ಹೇಳಲಾರೆನು ಗೆಳತಿ..
ನೀನಿರದ ಈ ಬಾಳು ಊಹಿಸಲಸಾಧ್ಯ
ಶಾಶ್ವತವಾಗಿ ನನ್ನೊಡನೆ ಇರುವೆಯಾ ಗೆಳತಿ..
Comments
ಉ: ಎಲ್ಲಿಂದಲೋ ನೀ ಬಂದೆ ನನಗಾಗಿ
In reply to ಉ: ಎಲ್ಲಿಂದಲೋ ನೀ ಬಂದೆ ನನಗಾಗಿ by partha1059
ಉ: ಎಲ್ಲಿಂದಲೋ ನೀ ಬಂದೆ ನನಗಾಗಿ