ಎಲ್ಲಿದೆ ನಮಗೆ ರಕ್ಷಣೆ. ..?
ಹಿರಿಯರ ಪಾಲಿಗೆ
ನಾವು 'ದೇವರು'
ಆದರೆ,
ಎಲ್ಲಿದೆ 'ದೇವರಿಗೆ'ರಕ್ಷಣೆ?
ದೇಶದ ಪಾಲಿಗೆ
ನಾವು ಭವಿಷ್ಯದ'ಪ್ರಜೆಗಳು'
ಆದರೆ,
ಎಲ್ಲಿದೆ'ಪ್ರಜೆಗಳಿಗೆ'ರಕ್ಷಣೆ?
ಸಮಾಜದ ಪಾಲಿಗೆ
ನಾವು ಮುಂದಿನ'ಯುವ ಪೀಳಿಗೆ'
ಆದರೆ,
ಎಲ್ಲಿದೆ'ಯುವ ಪೀಳಿಗೆಗೆ'ರಕ್ಷಣೆ?
ಶಾಲೆಯ ಪಾಲಿಗೆ
ನಾವು'ಶಿಸ್ತಿನ ವಿದ್ಯಾರ್ಥಿಗಳು'
ಆದರೆ,
ಎಲ್ಲಿದೆ'ಶಿಸ್ತಿನ ವಿದ್ಯಾರ್ಥಿಗಳಿಗೆ' ರಕ್ಷಣೆ?
ಅವನಲ್ಲ ಅವಳಂತ
ಗೊತ್ತಾದರೆ..
ಭ್ರೂಣದಲ್ಲೆ ಹತ್ಯೆ ಮಾಡುವರು
ಎಲ್ಲಿದೆ'ಅವಳಿಗೆ'ರಕ್ಷಣೆ?
ಬರೆಯುವ ಬಾಲ
ಕೈಗಳನ್ನು ದುಡಿಯುವ
ಕೈಗಳನ್ನಾಗಿಸಿಹರು
ಎಲ್ಲಿದೆ'ಬಾಲರಿಗೆ'ರಕ್ಷಣೆ?
ಪ್ರೀತಿ ತೋರಿಸಬೇಕಾದ
ಜನರು
ಕಾಮಿಸುತಿಹರು..
ಎಲ್ಲಿದೆ'ನನಗೆ'ರಕ್ಷಣೆ?
ಚಿಗರೆಯಂತೆ
ಕುಣಿದಾಡಬೇಕಾದವರ
ಕಾಲುಗಳನ್ನು ಕತ್ತರಿಸಿ
ಬಾಲ್ಯವನ್ನೇ ಕಿತ್ತುಕೊಂಡಿಹರು
ಎಲ್ಲಿದೆ'ಮಕ್ಕಳಿಗೆ' ರಕ್ಷಣೆ?
ಯಾರು ತಡೆಯುವರು
ನಮ್ಮ ಶೋಷಣೆ?
ಯಾರಿಂದ ಪಡೆಯಲಿ
ನಾವು ರಕ್ಷಣೆ?
-@ಯೆಸ್ಕೆ