ಎಲ್ಲಿರುವೆ...?

ಎಲ್ಲಿರುವೆ...?

ಕವನ

ಎಲ್ಲಿರುವೆ ನೀ ಎಲ್ಲಿರುವೆ ಏಕೆ ದೂರಾದೆ..

ಕಾದಿರುವೆ ನಿನಗಾಗಿ ನಿನ್ನ ಮನಕಾಗಿ..

 

ನಿನ್ನಿಂದ ಏಕಾಂಗಿಯಾಗಿದೆ ಮನ 

ಹೃದಯ ಒಳಗೆ ನೊಂದಿದೆ ಮನ 

ಕಣ್ಣಿನ ರೆಪ್ಪೆಯು ಮುಚ್ಚದೆ ಕಾದಿದೆ 

ಕಣ್ಣೀರದಾರೆಯು ಹರಿಯದೆ ಬತ್ತಿದೆ 

 

ಕಾಣದೆ ನೊಂದಿಹೆ ನಗುವ ನಲಿವ 

ದಿನವದೂಡುವೆ ನೋಡದೆ ವಿಸ್ಮಯ  

ಪ್ರತಿ ದಿನ ಕಾಯುತಿದೆ ನನ್ನ ಹೃದಯ

ಅರಸುತ ನಿಂತಿದೆ ನಿನ್ನಯ ಕ್ಷಮೆಯ

 

ಕಣ್ಣೀರೊರಸುವಲಿ ಕಣ್ಣೀರೆ ಬಾರದಂತೆ

ನೋವು ನೋಡುವಲಿ ನೋವಾಗದಂತೆ 

ಬಿರುನುಡಿಯಾಡುವಲಿ ಕೋಪ ಬಾರದಂತೆ

ನೀ ಇದ್ದು ಬಿಡು ಗೆಳತಿ ನೀ ಇದ್ದು ಬಿಡು

 

ನಿನಗಾಗಿ ಕಾದಿದೆ ನನ್ನ ತನುಮನ

ನಿನ್ನ ಜೊತೆಯ ಬಯಸಿದೆ ಕ್ಷಣಕ್ಷಣ 

ನೀನಿರದೆ ಮಾಡೆ ಬದುಕ ಅಭಿನಯ 

ಮೊಗದಲಿ ಕಾಣೆ ಸುಂದರ ನಗೆಯ

 

- ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್