ಎಲ್ಲಿ ನಿನ್ನ ನೋಡದೆ ನನ್ನ ಉಸಿರು ನಿಲ್ಲುವುದೆ೦ದು

ಎಲ್ಲಿ ನಿನ್ನ ನೋಡದೆ ನನ್ನ ಉಸಿರು ನಿಲ್ಲುವುದೆ೦ದು

ಕವನ

ಮನಸೆಲ್ಲ ಭಾರವಾಗಿ ಕಂಗಳು ತುಂಬಿದೆ ಗೆಳೆಯ

ತುಡಿಯುತಿದೆ ಮನವು ನಿನ್ನ ಸಾಂಗತ್ಯಕೆ ಇನಿಯ

ಬಂದು ಬಿಡು ಶೀಘ್ರದಲಿ ನೀ ನನ್ನ ಕಾಯಿಸದೆ..

 

ನೀನಾಡೋ ಸವಿಮಾತುಗಳು ಕೇಳದೆ ನನ್ನ ಕಿವಿಗಳಿಗೆ

ಸಿಹಿಮಾತುಗಳ ಕೇಳಿದರೂ ಕಹಿ ಎನಿಸುತ್ತಿದೆ

ನಾನೇನ ಮಾಡಲಿ ಹೇಳು ಗೆಳೆಯ, ಇದು ನನ್ನ ತಪ್ಪೇ?

 

ಎತ್ತ ನೋಡಿದರೂ ಏನ ಕಂಡರೂ ನೀನೆ ಕಾಣುವೆ

ಗೊತ್ತೆನಗೆ ನನ್ನ ನಯನಗಳು ನುಡಿಯುತ್ತಿವೆ ಸುಳ್ಲೊಂದನು

ಆ ಸುಳ್ಳನು ನಿಜ ಮಾಡಲು ನೀನೆ ಬಂದುಬಿಡಬಾರದೇ ಗೆಳೆಯ..

 

ಇನ್ನೆಷ್ಟು ದಿನ ಕಾಯಿಸುವೆ ನನ್ನನು  ವಿರಹ ವೇದನೆಯಲಿ

ತಡ ಮಾಡಬೇಡ ಗೆಳೆಯಭಯವಾಗುತಿದೆ ಎನಗೆ

ಎಲ್ಲಿ ನಿನ್ನ ನೋಡದೆ ನನ್ನ ಉಸಿರು ನಿಲ್ಲುವುದೆ೦ದು....

Comments