ಎಲ್ಲಿ ಮರೆಯಾದೆ [ಆಟವೆಲದಿ]
ಕವನ
ಮಂಜುಮೇಘದಲ್ಲಿ ಹೊಕ್ಕಂತೆ ಹೊನ್ನಕ್ಕಿ
ಕಂಜ ದಳದ ಹೊನ್ನ ಚೆಲ್ಲಿ ತಾನು
ಸಂಜೆ ಸುಳಿವೆ ಇರದೆ ಮಂಜಂತೆ ಕರಗುತ
ಗಂಜಿನೆನಪ ಬಿಟ್ಟು ಮಾಯವಾತು
ಎಲ್ಲಿ ಮರೆಯ ಆದೆ ಎಲ್ಲಿದು ಸೆರೆಯಾದೆ
ಇಲ್ಲಿ ಇಷ್ಟು ಹಬ್ಬಿನಿಂತ ಕಡಲ
ಎಲ್ಲಿ ಹಕ್ಕಿ ಎಂದು ಹುಡಿಕಿದೆ ಮರೆಯದೆ
ಇಲ್ಲಿ ಎದೆಯೆ ಬತ್ತಿ ನಿಂತ ನಾನು
ಎದೆಯ ವೃಕ್ಷದಲ್ಲಿ ಉಯ್ಯಾಲೆ ಜೀಕುತ
ಮುದದಿ ಕುಣಿವ ಸಗ್ಗದರಸಿ ಬಾನ
ಎದೆಗೆ ಏರಿ ನಗೆಯ ಮೊಗ್ಗನ ಅರಳದೆ
ಕದಪ ಮುಚ್ಚಿ ಎಲ್ಲಿ ಮಾಯವಾತೊ
ಚುಕ್ಕಿ ಚಂದ್ರ ಸೂರ್ಯ ಕದ್ದದು ಇಟ್ಟಂತೆ
ತೆಕ್ಕೆ ನಭದ ನೀಲ ನೀರೆ ಅವಳು
ಸಿಕ್ಕಿ ಎಲ್ಲಿ ಕಳುವು ಆದಳೊ ಸಿಗದಂತೆ
ರೆಕ್ಕೆಮುಚ್ಚಿ ನಭವು ಬಚ್ಟಿಡತಲಿ
ಕಣ್ಣರೆಪ್ಪೆಗಚ್ಚಿ ನಗೆತುಂಬು ಮೌನವ
ಮಣ್ಣ ಸೊಗಡ ಅಚ್ಚಿಗಿಟ್ಟು ನಾನು
ನಿನ್ನ ಚೆಲುವ ಸಿರಿಗೆ ಸೋತದು ಹುಡುಕಿಹೆ
ಬಣ್ಣ ಬಿಲ್ಲ ಅಗೆದುಮೊಗೆದು ನಾನು
ಜಿಗಿವ ಜಿಂಕೆ ಯಂತೆ ತೋಷದಿ ಹಾರುತ
ಸಿಗದೆ ಎಲ್ಲಿ ಮಾಯ ಆದೆ ನೀನು
ಮೃಗದ ತೆಕ್ಕೆ ಸಿಕ್ಕು ಯಾವದೊ ಕಟುಕನ
ಮುಗಿದ ತುತ್ತು ಆಗಿ ಹೋದೆ ಏನೆ?
✍ಸಂತೋಷ್ ನಾಗರತ್ನಮ್ಮಾರ
ಚಿತ್ರ್