ಎಲ್ಲಿ ಹುಡುಕಲಿ ನಿನ್ನ?
ಬರಹ
ಎಲ್ಲಿ ಹುಡುಕಲಿ ನಿನ್ನ
ಹೇಗೆ ನಾ ಅರ್ಚಿಸಲಿ?
ಯಾವ ಮಂತ್ರವಹೇಳಿ
ನಿನ್ನ ಮೆಚ್ಚಿಸಲಿ?
ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|
ಕಣ್ಮುಚ್ಚಿ ಕುಳಿತಿರುವ
ನಿನ್ನ ದೇಗುಲದಿ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?
ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|
ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ|
ಅಹುದೇ ದೇವ
ತೋರು ನಿನ್ನ ರೂಪ|
ನನ್ನೊಳಗಿರುವಾ ನಿನ್ನ
ಮರೆತು ಹುಡುಕಲು ನಾನು
ಎಲ್ಲಿ ಕಾಣಲಿ ನಿನ್ನ ನಿಜದ ರೂಪ?
http://www.divshare.com/sharing/11458504-d3f