ಎಲ್ಲೆಲ್ಲೂ ಮೌನ ಮೌನ

ಎಲ್ಲೆಲ್ಲೂ ಮೌನ ಮೌನ

ಕವನ

ಮೌನ ಮೌನ

ಎಲ್ಲೆಲ್ಲೂ ಮೌನ

ನಗರ ಹಳ್ಳಿ ಎಲ್ಲೆಲ್ಲೂ ಮೌನ ||ಪ||

 

ಚೆಲುವಿನ ಊರಲಿ ಮೌನವು

ತುಂಬಿದೆ ಇಂದು

ಪಟ್ಟಣದೊಳಗಿನ ಮನೆಯಲು

ತುಂಬಿದೆ ಮೌನವು

ಸ್ಮಶಾನದಲ್ಲಿಯ ಚಿತೆಗಳಲಿ

ಉರಿಯುತಿವೆ ಹೆಣವು

ಮಹಾ ಮಾರಿಯ ಬಾಹುವು

ಹರಡಿದೆ ಇಂದು

ಜಾಗ್ರತರಾಗಿರಿ ಜಾಗ್ರತರಾಗಿರಿ

ಜಾಗ್ರತರಾಗಿರಿ ಜನರೆ

ಜಾಗ್ರತರಾಗಿರಿ ಜನರೆ || ೧||

 

ಸರಕಾರ ತಿಳಿಸಿದ ನಿಯಮವ

ಪಾಲಿಸಿ ಇಂದು

ಆರೋಗ್ಯ ಇಲಾಖೆ ಹೇಳಿದಂತೆ

ಕೇಳಿರಿ ಇಂದು

ನಮ್ಮ ಜೀವವು ನಮ್ಮಕೈಯಲಿ

ತಿಳಿಯಿರಿ ಇಂದು

ಹೆಚ್ಚು ಕಡಿಮೆಯಾದರೆ

ಸ್ಮಶಾನವೇಯೆಂದು

ಜಾಗ್ರತರಾಗಿರಿ ಜಾಗ್ರತರಾಗಿರಿ

ಜಾಗ್ರತರಾಗಿರಿ ಜನರೆ

ಜಾಗ್ರತರಾಗಿರಿ ಜನರೆ  ||೨||

 

-ಹಾ ಮ ಸತೀಶ

 

ಚಿತ್ರ್