ಎಲ್ಲೈತೆ ವಿಕಾಸಪ್ಪಾರ್ ಫೋಟೋ, ಆಡ್ಲಿಲ್ಲವ್ರ ಅವ್ರು !
ಈ ಪ್ರಶ್ನೆ ಕೇಳಿದ್ದು ನಮ್ಮ ಪಡೋಸಿನವರು 'ಎಂಟಣ್ಣ; ಕೃಷಿಕರಾದ್ರು, ಎಲ್ಲಾ ತಿಳಿದು ಕೊಂಡಿದಾರೆ ನೋಡಿ. ಹೌದು ಎಂಟಣ್ಣ ನೀನು ಹೇಳ್ದಂಗೆ ವಿಕಾಸ್ ಆಡಿದ್ದೇನೋ ನಿಜ. "೮೨ ನೆ ನಿಮಿಷದಲ್ಲಿ , ಇನ್ನೇನ್ ಪಂದ್ಯ ಮುಗಿತು ಅಂತ ರೆಫರಿ ಶಿಳ್ಳೆ ಹಾಕ್ಬೇಕ್ ನೋಡು, ಅಷ್ಟು ಹೊತ್ತಿಗೆ ಬಂದೋನ್ ಏನ್ ಆಟಾ ಆಡ್ದ, ನೀನೆ ನೋಡ್ದಲ್ಲ".ಇನ್ನು ನೀನು ಕೇಳಿದ ಅವನ ಫೊಟೊ, ಈ ಗೆಲ್ಲಿ ಬರತ್ತೆ; ಅವ ಈಗ ಜಿನೆದಿನ್ ಜಿಡಾನ್ ಅವರ ಜಾಗ್ದಲ್ಲಿ ಬದಲಿಯಾಗಿ ಆಡ್ತಿದಾನೆ.ಅಂಥ ದೊಡ್ಡ ಆಟಗಾರ ಇರೋ ತನ್ಕ ಇವನು ಎಲೆಮರೆ ಕಾಯ್ನಂಗೆ ಇರಬೇಕಲ್ವ.
ಒಟ್ಟಿನಲ್ಲಿ ಒಂದು ಬಿಲಿಯನ್ ಭಾರತೀಯರ ಕನಸಿನ ಪ್ರತೀಕವಾಗಿ ಸಾಕರ್ ವಿಶ್ವಕಪ್ ನಲ್ಲಿ ಭಾಗವಹಿಸ್ತಿದಾನಲ್ಲ, ಸಾಕು. ಅವನು ಈಗ ಫ್ರಾನ್ಸಿನ ಪ್ರಜೆ. ನಮಗೇನು ಬೇಸರವಿಲ್ಲ.
ಎಂಟಣ್ಣನೆ ವಿಕಾಸ್ ಬಗ್ಯೆ, 'ತರಂಗ' ದಲ್ಲಿ ಬಂದ ಲೇಖನ ಓದಿ ಅಂತ ನಮಗೆ ಹೇಳಿದ್ದು.('ತರಂಗ', ಜುನ್, ೧೫,೨೦೦೬)
ಫ್ರಾನ್ಸ್ ವಿರುದ್ಧ ಸ್ವಿಸ್ಜರ್ ಲ್ಯಾನ್ಡ್ ಸೆಣೆಸಿ (೦-೦)ಪಾಯಿಂಟ್ ನಿಂದ ಡ್ರಾ ಮಾಡಿಕೊಂಡಿತು.
೧೯೯೮ ರ ವಿಶ್ವ ಛಾಂಪಿಯನ್ ಆದ ಫ್ರಾನ್ಸ್, ಸ್ವಿಸ್ಜರ್ ಲ್ಯಾನ್ಡ್ ಜೊತೆ ಸೆಣಸಿ ಮೊದಲ ೪೫ ನಿಮಿಷಗಳಲ್ಲಿ ಯಾವ ಗೋಲು ಇಲ್ಲದೆ ತಿಣಕಾಡಿತು.ಸ್ವಿಸ್ ಟೀಮ್ ನಲ್ಲಿ ಆಡಿದ ಆಟಗಾರರ ಸರಾಸರಿ ವಯಸ್ಸು ೨೩ ಆದರೆ, ಫ್ರಾನ್ಸ್ ಸರಾಸರಿ ೩೩. ಜಿನೆದಿನ್ ಜಿಡಾನ್ ಈ ಗಾಗೆಲೆ ದಣಿದಿರುವಂತೆ ಕಾಣಿಸುತ್ತಿದ್ದಾದ್ದಾನೆ. ೨೦೦೬ ರ ಫೈನಲ್ ನಂತರ ತನ್ನ ನಿವೃತ್ತಿ ಘೋಷಿಸಿದ್ದಾನೆ.ಮೊದಲ ೨೪ ನೆ ನಿಮಿಷ ದಲ್ಲಿ ಸ್ವಿಸ್ ಸ್ಟ್ರೈಕರ್ ಅಲೆಲ್ಸಾಂಡರ್ ಫ್ರಿ , ಗೋಲಿನ ತನಕ ಚೆಂಡನ್ನು ಓಡಿಸಿಕೊಂಡು ಹೋದರು. ಗೋಲ್ ಮಾಡಲು ವಿಫಲರಾದರು. ಜಿಡಾನೆಯವರ ಆಟದಲ್ಲು ಏನೂ ಥಳುಕು ಕಾಣದೆ ಒಟ್ಟು ತಂಡದ ಆಟ ಸಪ್ಪೆಯಾಗಿತ್ತು.
ಅರ್ಧವಿರಾಮದನಂತರ ಫ್ರಾನ್ಸಿನ ಬಾಸ್, ರೆಮಾಂಡ್ ಡೊಮೆನಿಕ್, ಬದಲಿ ಆಟಗಾರ ಫ್ರಾಂಕ್ ರಿಬರಿಯನ್ನು ತಂದರು. ಅವರ ನೀತಿಯಿಂದಲು ಉಪಯೊಗ ಕಾಣಲಿಲ್ಲ.ಅವರನ್ನು ತೆಗೆದು ಸ್ಟ್ರೈಕರ್ ಲುಯಿಸ್ ಸಾಹರನ್ನು ತಂದರು. ಸ್ವಿಸ್ ಆಟಗಾರ ರ ಮುಂದೆ ಇದು ನಡೆಯಲಿಲ್ಲ. ೮೨ ನೆ ನಿಮಿಷದಲ್ಲಿ ಭಾರತೀಯ ಸಂಜಾತ ವಿಕಾಸ್ ದೊರಸೂ. ಅವರನ್ನು ತೆಗೆದುಕೊಂಡು ಬಂದಾಗ ಆಟಲಲ್ಲಿ ಗಮನಾರ್ಹ ತಿರುವು ಬರಲು ಶುರುವಾಯಿತು. ಆದರೆ ಸಮಯದ ವತಿಯಿಂದ ಹೆಚ್ಚಿನ ಪರಿನಾಮವಾಗಲಿಲ್ಲ.ಒಟ್ಟಿನಲ್ಲಿ ಡ್ರಾನಿಂದ ಎರಡು ಬಣಗಳಿಗು ಬೇಸರವೇನು ಆದಂತೆ ಕಾಣುತಿಲ್ಲ.
ಮಧ್ಯರಾತ್ರಿಯ, ಜಗತ್ತೆ ಪರಿತಪಿಸಿ ಕಾಯುತ್ತಿದ್ದ,'ಎಫ್' ಗ್ರುಪಿನ, ಬ್ರೆಸಿಲ್ ವಿರುದ್ಧ ಕೃವೇಶಿಯದ ತಂಡವನ್ನು ೧-೦ ಗೊಲುಗಳಿಂದ ಮಣಿಸಿ, ಬ್ರೆಸಿಲ್ ಮುಂದುವರಿಯಿತು.
ಅಜೇಯ ಬ್ರೆಸಿಲ್, ಪ್ರತಿಷ್ಟಿತ ವಿಶ್ವ ಕಪ್ ಆರಂಭದ ಆಟದಲ್ಲಿ ೧೯೮೨ ರಿಂದ ಗೆಲ್ಲುತ್ತಲೆ ಬಂದಿದೆ.ಬ್ರೆಸಿಲ್ ನ ತರಪೇತಿಗಾರ ಕಾರ್ಲೋಸ್ ರಾಬರ್ಟೊ ಪರೆರಾ, ತಮ್ಮ ನೆಚ್ಚಿನ ಆಟಗಾರರ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ.ಮಾಂತ್ರಿಕ ಆಟಗಾರ ರೋನಾಲ್ಡಿನೋ , ಮತ್ತಿತರು ಪ್ರಯತ್ನಮೀರಿ ಆಡಿದರು. ಕೃವೇಶಿಯ ಯಾವುದಕ್ಕು ಮಣಿಯದೆ ಬಿರುಸಿನ ಆಕ್ರಮಣಕಾರಿ ಆಟದ ಪ್ರದರ್ಶನ ಮಾಡಿ ಎಲ್ಲರ ಅನುರಾಗಕ್ಕೆ ಪಾತ್ರವಾಯಿತು.೨೪ ವರ್ಷದ ಎ.ಸಿ.ಮಿಲಾನ್ ಮಿಡ್ ಫಿಲ್ಡರ್, ಕಾಕ, ಮಿಂಚಿನ ಆಟ ಆಡಿ ಬ್ರೆಸಿಲ್ ನ್ನು ಜಯಗೊಳಿಸಲು ಕಾರಣರಾದರು. ನಿಮಿಷಾರ್ಧ ದಲ್ಲಿ ಚೆಂಡು ಆ ಕಡೆ ಯಿಂದ ಈ ಕೊನೆಗೆ ಚಿಮ್ಮುತ್ತಿತ್ತು. ಬ್ರೆಸಿಲ್ಲಿನಂತೆ ಕೃವೇಶಿಯದವರು ಸಮರ್ಥ ಆಟಗಾರರು. ಒಳ್ಳೆ ಆರೋಗ್ಯವಂತ ಗಟ್ಟಿ ಮುಟ್ಟಾದ ಆಳುಗಳು.ಚಿರತೆಯಂತೆ ಓಡುವ ಹಾಗು ಬೀಳುವುದನ್ನು ಅವರು ಲೆಖ್ಖಕ್ಕೆ ತೆಗೆದು ಕೊಂಡಂತೆ ಕಾಣಲಿಲ್ಲ.
ಮಧ್ಯರಾತ್ರಿಯಲ್ಲಿ ನಿದ್ದೆಕಣ್ಣಿನಲ್ಲಿ ಇನ್ನೂ ತೂಕಡಿಕೆ ಇದ್ದರೂ, ಈ ಪಂದ್ಯ ಎಲ್ಲರಿಗು ಮುದಕೊಟ್ಟಿತು. ವಿಶ್ವದಾದ್ಯಂತ ಜನರು ಬ್ರೆಸಿಲ್ಲಿನ ಜಯವನ್ನು ಕೊಂಡಾಡಿ ಆನಂದಿಸಿದರು. ಭಾರತದಲ್ಲು ಎಲ್ಲೆಲ್ಲು ಬ್ರೆಸಿಲ್ ಬಾವುಟಗಳನ್ನು ಕಿರಿಯರು ಹಿಡಿದು ಕಾಲ್ಚೆಂಡಾಟದಲ್ಲಿರುವ ತಮ್ಮ ಆಸಕ್ತಿ ಹಾಗು ಪ್ರೀತಿಯನ್ನು ವ್ಯಕ್ತಪಡಿಸಿದರು.
ಇನ್ನೊಂದು ಆಟಲಲ್ಲಿ, 'ಜಿ' ಗ್ರುಪ್ ನ ದಕ್ಶಿಣ ಕೊರಿಯ, ಟೋಗೋ ವಿರುದ್ಧ ಸೆಣಸಿ (೨-೧ ) ಗೊಲಿನ ಅಂತರದಲ್ಲಿ ವಿಜಯವನ್ನು ಸಾಧಿಸಿತು.೬ನೆ ವಿಶ್ವಕಪ್ ಪಂದ್ಯವನ್ನು ಆಡುತ್ತಿರುವ ದಕ್ಷಿಣ ಕೊರಿಯ ತನ್ನ ೪೮ ಪಂದ್ಯಗಳ ಬಳಿಕ ಫ್ರಾನ್ಸ್ ನ್ನು ಬರುವ ಭಾನುವಾರ ಎದುರಿಸಲಿದೆ.
ಇವತ್ತಿನ ಪಂದ್ಯಗಳು: (ಬುಧವಾರ,೧೪ ಜೂನ್, ೨೦೦೬ ರಂದು )
೬-೩೦ ಸಾ. ಸ್ಪೆನ್ ವಿರುದ್ಧ ಉಕ್ರೇನ್ - 'ಎಚ್' ಗ್ರುಪ್
೯-೩೦ ರಾತ್ರಿ. ಟ್ಯುನಿಶಿಯ ವಿರುದ್ಧ ಸೌದಿಅರೆಬಿಯ - 'ಎಚ್'ಗ್ರುಪ್
೧೨-೩೦ ಮ.ರಾತ್ರಿ.ಪಶ್ಚಿಮ ಜರ್ಮನಿ ವಿರುದ್ದ ಪೊಲೆಂಡ್ - 'ಎ' ಗುಪ್